ಮೆಹಬೂಬಬಾದ್​:ನೆರೆಯ ರಾಜ್ಯ ತೆಲಂಗಾಣದಲ್ಲಿ ವರುಣನ ಆರ್ಭಟ ಜೋರಾಗಿದ್ದು, ಭೀಕರ ಪ್ರವಾಹದಲ್ಲಿ ತಂದೆ ಮತ್ತು ಮಗಳು ಕೊಚ್ಚಿ ಹೋಗಿರುವ ಘಟನೆ ಖಮ್ಮಂ​ ಜಿಲ್ಲೆಯಲ್ಲಿ ಭಾನುವಾರ (ಸೆ.01) ನಡೆದಿದೆ. ಇಬ್ಬರು ಹೈದರಾಬಾದ್​ ವಿಮಾನ ನಿಲ್ದಾಣಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಮಗಳು ನುನಾವತ್​ ಅಶ್ವಿನಿ (26) ಮೃತದೇಹ ಪತ್ತೆಯಾಗಿದ್ದು, ತಂದೆ ನುನಾವತ್​ ಮೋತಿಲಾಲ್​ಗಾಗಿ ಹುಡುಕಾಟ ನಡೆಯುತ್ತಿದೆ.​ ಅಶ್ವಿನಿ ಅವರು ಯುವ ಕೃಷಿ ವಿಜ್ಞಾನಿಯಾಗಿದ್ದರು. ಛತ್ತೀಸ್‌ಗಢದ ರಾಯ್‌ಪುರದಲ್ಲಿರುವ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್‌ನ (ICAR) ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬಯೋಟಿಕ್ ಸ್ಟ್ರೆಸ್ ಮ್ಯಾನೇಜ್‌ಮೆಂಟ್‌ನ (NIBSM) ಸ್ಕೂಲ್ ಆಫ್ ಕ್ರಾಪ್ ರೆಸಿಸ್ಟೆನ್ಸ್ ಸಿಸ್ಟಮ್ ರಿಸರ್ಚ್‌ನಲ್ಲಿ ಅಶ್ವಿನಿ ಕೆಲಸ ಮಾಡುತ್ತಿದ್ದರು.
ಕಳೆದ ಏಪ್ರಿಲ್​ನಲ್ಲಿ ಎನ್​ಐಬಿಎಸ್​ಎಂ ಆಯೋಜನೆ ಮಾಡಿದ್ದ ಸಮ್ಮೇಳನದಲ್ಲಿ ಯುವ ವಿಜ್ಞಾನಿ ಪ್ರಶಸ್ತಿಗೂ ಅಶ್ವಿನಿ ಭಾಜನರಾಗಿದ್ದರು. ಆಕೆಯ ತಂದೆ ಮೋತಿಲಾಲ್​ ಓರ್ವ ರೈತ. ಇವರು ಖಮ್ಮಂ ಜಿಲ್ಲೆಯ ಸಿಂಗರೇಣಿ ಮಂಡಲದ ಗೇಟ್ ಕಾರೇಪಲ್ಲಿ ಗಂಗಾರಾಮ್ ತಾಂಡಾದ ನಿವಾಸಿ. ಇತ್ತೀಚೆಗಷ್ಟೇ ತನ್ನ ತವರು ಮನೆಯಲ್ಲಿ ನಡೆದ ತನ್ನ ಸಹೋದರನ ಮದುವೆ ನಿಶ್ಚಿತಾರ್ಥ ಸಮಾರಂಭದಲ್ಲಿ ಅಶ್ವಿನಿ ಭಾಗವಹಿಸಿದ್ದರು.
ಭಾನುವಾರ ತಂದೆ ಮತ್ತು ಮಗಳು ತಮ್ಮ ಕಾರಿನಲ್ಲಿ ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿದ್ದರು. ಆದರೆ, ಮಹಬೂಬಾಬಾದ್ ಜಿಲ್ಲೆಯ ಮರಿಪೇಡಾ ಮಂಡಲದ ಪುರುಷೋತ್ತಮಯ್ಯಗುಡೆಂನಲ್ಲಿ ಸೇತುವೆಯ ಮೇಲೆ ಉಕ್ಕಿ ಹರಿಯುತ್ತಿದ್ದ ಪ್ರವಾಹದ ನೀರಿಗೆ ಕಾರು ಕೊಚ್ಚಿ ಹೋಗಿದೆ.
ಕೊನೆಯದಾಗಿ ಇಬ್ಬರು ತಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ಕರೆ ಮಾಡಿ, ತಮ್ಮ ಕಾರು ಪ್ರವಾಹಕ್ಕೆ ಸಿಲುಕಿದೆ ಮತ್ತು ಕುತ್ತಿಗೆ ಭಾಗದವರೆಗೆ ನೀರು ಬಂದಿದೆ ಎಂದು ಹೇಳಿದ್ದರು. ಇದಾದ ನಂತರ ಇಬ್ಬರ ಫೋನ್ ಸ್ವಿಚ್ ಆಫ್ ಆಗಿತ್ತು. ಕುಟುಂಬಸ್ಥರು ಎಷ್ಟೇ ಕರೆ ಮಾಡಿದರೂ ಇಬ್ಬರೂ ಸ್ಪಂದಿಸದ ಕಾರಣ, ಪೊಲೀಸರಿಗೆ ಮಾಹಿತಿ ನೀಡಲಾಯಿತು. ತಕ್ಷಣ ಪೊಲೀಸರು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.
ಶೋಧ ಕಾರ್ಯ ಆರಂಭಿಸಿದ ಕೆಲವು ಗಂಟೆಗಳ ನಂತರ ಅಶ್ವಿನಿಯ ಮೃತದೇಹ ಸೇತುವೆ ಬಳಿಯ ತಾಳೆ ಎಣ್ಣೆ ತೋಟದಲ್ಲಿ ಪತ್ತೆಯಾಗಿದೆ. ನಾಪತ್ತೆಯಾಗಿರುವ ಮೋತಿಲಾಲ್‌ ಪತ್ತೆ ಹಚ್ಚಲು ಪ್ರಯತ್ನಗಳು ನಡೆಯುತ್ತಿದೆ. ತಂದೆ-ಮಗಳು ಪ್ರಯಾಣ ಮಾಡುತ್ತಿದ್ದ ಕಾರು ಕೂಡ ಪತ್ತೆಯಾಗಿದೆ. ಮೆಹಬೂಬಾಬಾದ್ ಹೆಚ್ಚುವರಿ ಎಸ್‌ಪಿ ಚೆನ್ನಯ್ಯ, ಸಿರೋಲ್ ಎಸ್‌ಐ ನಾಗೇಶ್ ಮತ್ತು ಸಿಬ್ಬಂದಿ ಶೋಧ ಕಾರ್ಯದಲ್ಲಿ ಪಾಲ್ಗೊಂಡಿದ್ದರು.(ಏಜೆನ್ಸೀಸ್​)
ಭಾರಿ ಮಳೆಗೆ ತತ್ತರಿಸಿದ ಆಂಧ್ರ, ತೆಲಂಗಾಣ: 19 ಮಂದಿ ಸಾವು, 17 ಸಾವಿರಕ್ಕೂ ಅಧಿಕ ಜನರ ಸ್ಥಳಾಂತರ

51ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ ಸುದೀಪ್​: ಮ್ಯಾಕ್ಸ್​ ಚಿತ್ರದ ಹಾಡು ರಿಲೀಸ್​, ಗಣೇಶ ಹಬ್ಬಕ್ಕೆ ಬಿಡುಗಡೆ ದಿನಾಂಕ ಘೋಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − two =
Remember me
