ತೆಲಂಗಾಣ:ಮದುವೆಗೂ ಮುನ್ನ ಇಬ್ಬರ ಜತೆ ಪ್ರೀತಿಯಲ್ಲಿದ್ದ ಯುವಕ ಇಬ್ಬರು ಪ್ರೇಯಸಿಯರ ಜತೆ ಸಂಸಾರ ನಡೆಸಿದ್ದಾನೆ. ನಂತರ ಇವರಿಬ್ಬರಿಗೆ ಮಗು ಜನಿಸಿದ ಬಳಿಕ ಒಂದೇ ಮಂಟಪದಲ್ಲಿ ಇಬ್ಬರನ್ನೂ ವಿವಾಹವಾಗಿದ್ದಾನೆ.
ತೆಲಂಗಾಣದ ಬುಡಕಟ್ಟು ಸಮುದಾಯದ ಭದ್ರಾದ್ರಿ-ಕೊತಗುಡೆಂ ಜಿಲ್ಲೆಯ ಚೆರ್ಲಾ ಮಂಡಲದ ಎರ್ರಬೋರು ಗ್ರಾಮದ ಸತ್ತಿಬಾಬು ಕಳೆದ ಮೂರು ವರ್ಷಗಳಿಂದ ಸುನೀತಾ, ಸ್ವಪ್ನಾ ಜತೆ ಸಂಬಂಧವನ್ನು ಹೊಂದಿದ್ದು, ಇಬ್ಬರೂ ಮಹಿಳೆಯರಿಗೂ ತಲಾ ಒಂದು ಮಗುವನ್ನು ಕರುಣಿಸಿದ್ದಾನೆ. ಸುನೀತಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಸ್ವಪ್ನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಇದನ್ನೂ ಓದಿ:ಈಜುಕೊಳದಲ್ಲಿ ಮಹಿಳೆಯರಿಗೆ ಟಾಪ್‌ಲೆಸ್ ಆಗಿ ಈಜಾಡಲು ಅನುಮತಿ ನೀಡಿದ ಬರ್ಲಿನ್!
ಮದುವೆ ವಿಚಾರವಾಗಿ ಇಬ್ಬರು ಮಹಿಳೆಯರ ಕುಟುಂಬಗಳ ನಡುವೆ ಜಗಳ ನಡೆದಿದೆ. ಸತ್ತಿಬಾಬು ಮಾತ್ರ ಇಬ್ಬರನ್ನೂ ಮದುವೆಯಾಗುವುದಾಗಿ ಹೇಳಿದ್ದಾನೆ. ಎರಡೂ ವಧುಗಳ ಹೆಸರನ್ನು ಹೊಂದಿರುವ ಮದುವೆಯ ಆಮಂತ್ರಣಗಳನ್ನು ಸಹ ಮುದ್ರಿಸಿ ವಿವಾಹ ಸಂಭ್ರಮಕ್ಕೆ ಮನೆಮಂದಿ ತಯಾರಿ ನಡೆಸಿದ್ದಾರೆ. ಈ ವಿಷಯ ಇಡೀ ವೈರಲ್​ ಆಗುತ್ತಿದ್ದಂತೆ ಅಧಿಕಾರಿಗಳು ಮದುವೆ ನಿಲ್ಲಿಸುವ ಭೀತಿ ಹುಟ್ಟಿದೆ. ಗುರುವಾರ ಆಗಬೇಕಿದ್ದ ಮದುವೆಯನ್ನು ಹೆದರಿ ಬುಧವಾರ ರಾತ್ರಿಯೇ ಇಬ್ಬರಿಗೂ ತಾಳಿ ಕಟ್ಟಿದ್ದಾನೆ.
ಇದನ್ನೂ ಓದಿ:ಮಗಳನ್ನು ಪುರುಷರ ಶೌಚಾಲಯಕ್ಕೆ ಕರೆದೊಯ್ದ ತಂದೆ!; ಮುಂದೆ ಆಗಿದ್ದೇನು?
ಬುಡಕಟ್ಟು ಸಮುದಾಯದಲ್ಲಿ ಇಂತಹ ಮದುವೆಗಳು ಹೊಸತೇನಲ್ಲಾ, ಹೀಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನೇಕ ಉದಾಹರಣೆಗಳು ಇವೆ.
ಜಿಲ್ಲೆಗೆ 160 ಬಾರ್ ಕೊಟ್ಟಿರುವುದು ಇವರ ಸಾಧನೆ: ಬಿಜೆಪಿ ವಿರುದ್ಧ ರೇವಣ್ಣ ವಾಗ್ದಾಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
