ಐದು ವರ್ಷಗಳ ಹಿಂದೆ ಆಕಸ್ಮಿಕವಾಗಿ ಓಮನ್​ ಗಡಿಯನ್ನು ದಾಟಿ ದುಬೈ ಸೇರಿದ್ದ ತೆಲಂಗಾಣದ ವ್ಯಕ್ತಿ ಇದೀಗ ​ಭಾರತಕ್ಕೆ ವಾಪಸ್​ ಬರಲು ಸಾಧ್ಯವಾಗಿದೆ.
ಜಗ್ತಿಯಲ್​ ಜಿಲ್ಲೆಯ ನಾಗುನೂರು ಗ್ರಾಮದ ಜಂಗಿಲಿ ಪೆಡ್ಡುಲು ಅವರು ಆಕಸ್ಮಿಕವಾಗಿ ಗಡಿ ದಾಟಿ ಹೋಗಿದ್ದವರು. ಅಂತೂ ಐದು ವರ್ಷಗಳ ನಂತರ ಇಂದು, ದುಬೈನಿಂದ ಮುಂಬೈಗೆ ಬಂದು, ಅಲ್ಲಿಂದ ಹೈದರಾಬಾದ್​ಗೆ ಮರಳಿದ್ದಾರೆ.
ಓಮನ್​ ಗಡಿಯಾಚೆ ಒಳ್ಳೆ ಉದ್ಯೋಗ ಅವಕಾಶ ಇದೆ ಎಂದು ಅನೇಕರು ಆಗ ಮಾತನಾಡಿಕೊಳ್ಳುತ್ತಿದ್ದರು. ಅದನ್ನು ನಂಬಿ ಗಡಿ ದಾಟಿದೆ. ಆಗ ನಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದೇ ಗೊತ್ತಿರಲಿಲ್ಲ ಎಂದು ಜಂಗಿಲಿ ತಿಳಿಸಿದ್ದಾರೆ.
ತಾನು ತಪ್ಪಾಗಿ ಗಡಿ ದಾಟಿದ ಮೇಲೆ ಪಡಬಾರದ ಕಷ್ಟ ಪಟ್ಟೆ. ಜೈಲು ವಾಸವೂ ಆಯಿತು. ಇನ್ನೆಂದೂ ಇಂಥ ತಪ್ಪುಗಳನ್ನು ಮಾಡುವುದಿಲ್ಲ. ಹಾಗೇ ಉಳಿದವರಲ್ಲೂ ಮನವಿ ಮಾಡಿಕೊಳ್ಳುತ್ತೇನೆ. ಯಾವ ಕಾರಣಕ್ಕೂ ಈ ಉದ್ಯೋಗದ ರೂಮರ್​ಗಳನ್ನೆಲ್ಲ ನಂಬಬೇಡಿ ಎಂದು ಹೇಳಿದ್ದಾರೆ.ಇದನ್ನೂ ಓದಿ:ರಷ್ಯಾದಲ್ಲಿದೆ ವಿಶ್ವದ ಭಯಾನಕ ಅಣುಬಾಂಬ್‌: ಸ್ಫೋಟದ ಭೀಕರ ದೃಶ್ಯ ಇಲ್ಲಿದೆ…
ಇದೀಗ ಪೆಡ್ಡುಲು ಅವರು ಭಾರತಕ್ಕೆ ವಾಪಸ್​ ಆಗಲು ದುಬೈನ್​ ಸಾಮಾಜಿಕ ಕಾರ್ಯಕರ್ತರಾಗಿರುವ ಜ್ಯತ ನಾರಾಯಣ್​ ಎಂಬುವರು ಸಹಾಯ ಮಾಡಿದ್ದಾರೆ.
ದುಬೈನಲ್ಲಿರುವ ಭಾರತೀಯ ರಾಯಭಾರಿಯಿಂದ ತುರ್ತು ಪಾಸ್​ಪೋರ್ಟ್​ ಪಡೆಯಲು, ಹಾಗೇ ಮತ್ತಿತರ ಅಗತ್ಯ ದಾಖಲೆಗಳು, ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆಯಲು ಅವರೇ ಸಹಕಾರ ನೀಡಿದ್ದಾಗಿ ಪೆಡ್ಡುಲು ತಿಳಿಸಿದ್ದಾರೆ. (ಏಜೆನ್ಸೀಸ್​)
ಈ 5 ವರ್ಷದ ಬಾಲಕ ಅಮ್ಮನ ಜೀವ ಉಳಿಸಿದ್ದು ‘ಆಟಿಕೆ ಆ್ಯಂಬುಲೆನ್ಸ್​’ನಿಂದ; ಸಮಯಪ್ರಜ್ಞೆಗೆ ಶ್ಲಾಘನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
