ಹೈದರಾಬಾದ್​:ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ಅವರು ತೆಲಂಗಾಣದಲ್ಲಿ ದೇವಮಾನವ ಸ್ಥಾನವನ್ನು ಹೊಂದಿದ್ದಾರೆ. ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷವು ಅವರ ಆದೇಶವನ್ನು ಚಾಚೂ ತಪ್ಪದೇ ಪಾಲಿಸುತ್ತಾರೆ. ಸಿಎಂ ಆದಾಗಿನಿಂದ ಅವರ ಕಾರ್ಯಗಳನ್ನು ಜನರು ಸಹ ಮೆಚ್ಚಿಕೊಂಡಿದ್ದು, 2014ರಿಂದಲೂ ಕೆಸಿಆರ್​ ತೆಲಂಗಾಣದ ರಾಜನಾಗೆಯೇ ಉಳಿದಿದ್ದಾರೆ.
ಇನ್ನು ಕೆಸಿಆರ್​ ಹುಟ್ಟುಹಬ್ಬವೆಂದರೆ ಅವರ ಪಕ್ಷದ ಕಾರ್ಯಕರ್ತರಿಗೆ ಮತ್ತು ಸಚಿವರಿಗೆ ಹಬ್ಬವೋ ಹಬ್ಬ. ಅದೇ ರೀತಿ ಕೆಸಿಆರ್​ ಸಹ ಎಲ್ಲರನ್ನು ಪ್ರೀತಿಯಿಂದಲೇ ಕಾಣುತ್ತಾರೆ. ಇಂದು ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಸಚಿವ ತಲಸನಿ ಶ್ರೀನಿವಾಸ್​ ಯಾದವ್, ಎರಡೂವರೆ ಕೆ.ಜಿ. ಚಿನ್ನದ ಸೀರೆ ಮಾಡಿಸಿ ಯಲ್ಲಮ್ಮ ದೇವತೆಗೆ ಕಾಣಿಕೆಯಾಗಿ ನೀಡುವ ಮೂಲಕ ಅಭಿಮಾನ ಮೆರೆದಿದ್ದಾರೆ. ​
Offered special prayers and presented a gold saree of 2.5 kg to Goddess Yellamma at Balkampet Temple on the auspicious occasion of Hon’ble CM Sri KCR Garu Birthday.#HappyBirthdayKCRpic.twitter.com/dZGkZfedRl
— Talasani Srinivas Yadav (@YadavTalasani)February 17, 2021

ಇನ್ನು ಕೆಸಿಆರ್​ ಹುಟ್ಟುಹಬ್ಬದಂದು ತೆಲಂಗಾಣದಾದ್ಯಂತ ಇಡೀ ದಿನ ಅನೇಕ ಕಾರ್ಯಕ್ರಮಗಳು ಸಹ ನಡೆದಿವೆ. ಟಿಆರ್​ಎಸ್​ ನಾಯಕರು ರಾಜ್ಯಾದ್ಯಂತ ಕೋಟ್ಯಂತರ ಸಸಿಗಳನ್ನು ನೆಟ್ಟಿದ್ದಾರೆ.
Offered special prayers at Gurudwara Saheb in Ameerpet on the occasion of Hon’ble Chief Minister Sri KCR Garu Birthday.#HappyBirthdayKCRpic.twitter.com/hHucDUlXrw
— Talasani Srinivas Yadav (@YadavTalasani)February 17, 2021

ಇನ್ನು ಯಾದವ್​ ಚಿನ್ನದ ಸೀರೆ ಮಾತ್ರವಲ್ಲದೆ, ಅಮೀರ್​ಪೇಟೆಯಲ್ಲಿರುವ ಗುರುದ್ವಾರ ಸಾಹೇಬ್​ ಮತ್ತು ಸಿಖಂದರಬಾದ್​ನಲ್ಲಿರುವ ಉಜ್ಜೈನಿ ಮಹಾಕಾಳಿ ದೇವಸ್ಥಾನ, ಗಣೇಶ್​ ದೇವಸ್ಥಾನ ಮತ್ತು ವೆಸ್ಲಿ ಚರ್ಚ್​ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ.(ಏಜೆನ್ಸೀಸ್​)
Offered prayers at Sri Ujjaini Mahakali Temple in Secunderabad on the occasion of Hon’ble Chief Minister Sri KCR Garu Birthday.#HappyBirthdayKCRpic.twitter.com/1WQfZXnhpf
— Talasani Srinivas Yadav (@YadavTalasani)February 17, 2021

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
