ಹೈದರಾಬಾದ್​:ನವದಂಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತೆಲಂಗಾಣದ ನಿಜಾಮಾಬಾದ್​ ಜಿಲ್ಲೆಯ ಕೊಟಗಿರಿ ಮಂಡಲದಲ್ಲಿ ಗುರುವಾರ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಹುಡಗ ಸಾವಿಗೀಡಾದರೆ, ಆತನ ಪತ್ನಿಯ ಸ್ಥಿತಿ ಗಂಭೀರವಾಗಿದೆ.
ಘಟನೆಯ ವಿವರಣೆಗೆ ಬರುವುದಾದರೆ, ಪ್ರಣೀತ್​ ಮತ್ತು ವಿಜಯಾ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಗೆ ಪಾಲಕರ ಅನುಮತಿಯನ್ನು ಕೋರಿದ್ದರು. ಯಾವಾಗ ಪ್ರಣೀತ್​ ಕುಟುಂಬ ಮದುವೆ ವಿರೋಧಿಸಿತು ಇಬ್ಬರು ಓಡಿ ಹೋಗಿ ದೇವಸ್ಥಾನದಲ್ಲಿ ಮದುವೆ ಆಗಿದ್ದರು. ಇಬ್ಬರ ಮದುವೆಗೆ ವಧು ವಿಜಯಾಳ ತಾಯಿ ಸಾವಿತ್ರಿ ಸಮ್ಮತವಿತ್ತು. ಬಳಿಕ ಪ್ರಣೀತ್​, ವಿಜಯಾ ಜತೆ ಅತ್ತೆ ಮನೆಯಲ್ಲೇ ವಾಸವಿದ್ದನು.
ಇದನ್ನೂ ಓದಿ:ಪೊಲೀಸ್​ ಪೇದೆ ಮತ್ತು ಹೆಂಡತಿಯ ಕೊಲೆ! ಅಪ್ಪ ಅಮ್ಮ ಚೀರಿಕೊಳ್ಳುತ್ತಿದ್ದರೆ ಏನೂ ಗೊತ್ತಿಲ್ಲದವಳಂತೆ ಸುತ್ತಾಡಿದ ಮಗಳು!

ಆದರೆ, ಇಬ್ಬರ ಸಂತೋಷ ಹೆಚ್ಚು ದಿನ ಇರಲಿಲ್ಲ. ಮದುವೆಯಾದ ಕೆಲವೇ ದಿನಗಳಲ್ಲಿ ಸಾವಿತ್ರಿ ಮಗಳು ಮತ್ತು ಅಳಿಯನಿಗೆ ಕಿರುಕುಳ ನೀಡಲು ಆರಂಭಿಸಿದರು. ಬಳಿಕ ಪ್ರಣೀತ್​, ವಿಜಯಾಳನ್ನು ಕರೆದುಕೊಂಡು ತನ್ನ ಮನೆ ಸೇರಿದ್ದ. ಆದರೂ ಸಾವಿತ್ರಿ ಇಬ್ಬರೊಂದಿಗೆ ಜಗಳ ಆಡುವುದನ್ನು ನಿಲ್ಲಿಸಿರಲಿಲ್ಲ. ಸಾವಿತ್ರಿಯ ವರ್ತನೆಯಿಂದ ಬೇಸತ್ತ ಪ್ರಣೀತ್​ ಮತ್ತು ವಿಜಯಾ ಡೆತ್​ನೋಟ್​ ಬರೆದಿಟ್ಟು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು.
ಆತ್ಮಹತ್ಯೆ ಯತ್ನ ಬಗ್ಗೆ ತಿಳಿದ ಪ್ರಣೀತ್​ ಪಾಲಕರು ತಕ್ಷಣ ಮನೆಗೆ ಬಂದು ಇಬ್ಬರು ಆಸ್ಪತ್ರೆಗೆ ದಾಖಲಿಸಿದಾದರೂ, ಚಿಕಿತ್ಸೆ ಫಲಿಸದೇ ಪ್ರಣೀತ್​ ಸಾವಿಗೀಡಾಗಿದ್ದಾನೆ. ವಿಜಯಾ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಈ ಸಂಬಂಧ ಪ್ರಕರಣವೂ ದಾಖಲಾಗಿದೆ.
ಇದನ್ನೂ ಓದಿ:ಅಂಕಲ್​-ಅಪ್ರಾಪ್ತೆಯ ಲವ್ವಿಡವ್ವಿ ಸೂಸೈಡ್ ಪ್ರಕರಣಕ್ಕೆ ಹೊಸ ಟ್ವಿಸ್ಟ್​: ಬಾಲಕಿ ಬಲಿಪಶುವಾದಳಾ?

ಮದುವೆಯಾದಗಿನಿಂದ ಅಮ್ಮ ನಮಗೆ ಸಾಕಷ್ಟು ತೊಂದರೆ ನೀಡಿದ್ದಾರೆ. ನಾನೆಂದು ಅಮ್ಮನನ್ನು ಕ್ಷಮಿಸಲಾರೆ. ಅವಳಿಂದಾಗಿಯೇ ನಾನು ವಿಷ ಸೇವಿಸುತ್ತಿದ್ದೇನೆ ಎಂದು ವಿಜಯಾ ಡೆತ್​​ನೋಟ್​ನಲ್ಲಿ ಉಲ್ಲೇಖಿಸಿದ್ದಾಳೆ. ಅಲ್ಲದೆ, ಅತ್ತೆ ಮನೆಯಲ್ಲೂ ಬೆದರಿಕೆ ಇತ್ತೆಂದು ಆರೋಪಿಸಿದ್ದಾಳೆ. ಪ್ರಣೀತ್​ ಸಹ ಇನ್ನೊಂದು ಜನ್ಮ ಇದ್ದರೆ, ನೀವು ನಿಮ್ಮ ಮಗಳಾಗಿ ಜನಿಸಬೇಕೆಂದು ದೇವರು ಬಯಸುತ್ತಾನೆಂದು ಸಾವಿತ್ರಿ ವಿರುದ್ಧ ಬರೆದಿದ್ದಾನೆಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.(ಏಜೆನ್ಸೀಸ್​)
2017ರಲ್ಲಿ ಹೆಗಲೇರಿದ ಪಾಪದ ಪ್ರಾಯಶ್ಚಿತ್ತಕ್ಕಾಗಿ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಡಿಕೆಶಿ ಭೇಟಿ!

ಉಜಿರೆ ಬಾಲಕನ ಅಪಹರಣ ಪ್ರಕರಣ: ಬಿಡುಗಡೆಗೆ 17 ಕೋಟಿ ರೂ.ಗೆ ಬೇಡಿಕೆಯಿಟ್ಟ ಅಪಹರಣಕಾರರು!

ಕಾರ್ ಕಳಿಸ್ತೀನಿ ಪ್ಲೀಸ್ ಬನ್ನಿ: ಮುಳ್ಳಿನಬೇಲಿ ಹಾಕಿದ್ದವರಿಂದಲೇ ಸ್ವಾಗತ | ಮತಕ್ಕಾಗಿ ಡಿಮಾಂಡ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 13 =
Remember me
