ತೆಲಂಗಾಣ:ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮ (ಟಿಎಸ್​ಆರ್​ಟಿಸಿ) ನೌಕರರು ಪ್ರತಿಭಟನೆ ನಡೆದ ಬೆನ್ನಿಗೇ ಮಹತ್ವದ ಮಸೂದೆಯೊಂದಕ್ಕೆ ಅಂಗೀಕಾರ ಸಿಕ್ಕಿದೆ. ಈ ಮೂಲಕ ಅಲ್ಲಿನ ಸಾರಿಗೆ ಸಂಸ್ಥೆ ಸರ್ಕಾರದೊಂದಿಗೆ ವಿಲೀನಗೊಂಡಂತಾಗಿದೆ.
ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮ (ಸರ್ಕಾರಿ ಸೇವೆಗೆ ನೌಕರರನ್ನು ವಿಲೀನಗೊಳಿಸುವುದು) ಮಸೂದೆ 2023 ಇದಕ್ಕೆ ತೆಲಂಗಾಣ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಅನುಮೋದನೆ ಸಿಕ್ಕಿದೆ ಎಂಬುದಾಗಿ ಇಂದು ಅಲ್ಲಿನ ರಾಜ್ಯಪಾಲೆ ತಮಿಳ್​ಸಾಯಿ ಸೌಂದರರಾಜನ್ ತಿಳಿಸಿದ್ದಾರೆ. ಈ ಮಸೂದೆಯನ್ನು ತಾವು ಅಂಗೀಕರಿಸಿದ್ದಾಗಿ ಆಕೆ ತಿಳಿಸಿದ್ದಾರೆ.
ಮಸೂದೆಯನ್ನು ಜಾರಿಗೊಳಿಸಲು ಅನುಮೋದನೆ ನೀಡುವಂತೆ ಟಿಎಸ್​ಆರ್​ಟಿಸಿ ನೌಕರರು ರಾಜಭವನಕ್ಕೆ ತೆರಳಿ ಆಗ್ರಹ ವ್ಯಕ್ತಪಡಿಸಿದ್ದ ಒಂದು ದಿನದಲ್ಲೇ ಈ ಬೆಳವಣಿಗೆ ನಡೆದಿದೆ.
ತೆಲಂಗಾಣ ಸಂಪುಟ ಇದಕ್ಕೆ ಸೋಮವಾರವೇ ಅನುಮೋದನೆ ನೀಡಿದ್ದು, ಇದೀಗ ರಾಜ್ಯಪಾಲರ ಅಂಕಿತವೂ ಸಿಕ್ಕಂತಾಗಿದೆ. ಪರಿಣಾಮವಾಗಿ ಟಿಎಸ್​​ಆರ್​ಟಿಸಿ ತೆಲಂಗಾಣ ರಾಜ್ಯ ಸರ್ಕಾರದೊಂದಿಗೆ ವಿಲೀನಗೊಳ್ಳಲಿದ್ದು, ಅದರ 43 ಸಾವಿರ ನೌಕರರು ಸರ್ಕಾರಿ ನೌಕರಿ ವ್ಯಾಪ್ತಿಗೆ ಬರಲಿದ್ದಾರೆ. –ಏಜೆನ್ಸೀಸ್
ಆ ಒಂದು ತಿಂಗಳ ಸಮಯದಲ್ಲಿ ಈ ಊರಲ್ಲಿ ಕಾಗೆಗಳೇ ಕಾಣಿಸುವುದಿಲ್ಲ!; ಕಾರಣವಾದರೂ ಏನು?

ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − five =
Remember me
