ನವದೆಹಲಿ:ಅಮೆರಿಕಕ್ಕೆ ಈ ಹಿಂದೆ ಮೆಕ್ಸಿಕೋ ಗಡಿಯ ಮೂಲಕ ಅಕ್ರಮವಾಗಿ ನುಸುಳಿದ್ದ 167 ಭಾರತೀಯರನ್ನು ಇತ್ತೀಚೆಗೆ ಆ ದೇಶ ಗಡಿಪಾರು ಮಾಡಿದೆ.ಅಲ್ಲಿಂದ ಗಡಿಪಾರಾದ 167 ಜನರನ್ನು ಪಂಜಾಬ್​ನ ಅಮೃತ್​ಸರಕ್ಕೆ ಕರೆದುಕೊಂಡು ಬಂದು, ಕ್ವಾರಂಟೈನ್​ ಕೇಂದ್ರದಲ್ಲಿ ಇರಿಸಲಾಗಿದೆ.
ಹೀಗೆ ಗಡಿಪಾರಾಗಿ ಬಂದ ಓರ್ವನಿಗೆ ಅಲ್​​ ಕೈದಾ ಉಗ್ರಸಂಘಟನೆಯ ನಂಟು ಇದೆ ಎನ್ನಲಾಗಿದ್ದು, ಪೊಲೀಸರು ಹೆಚ್ಚಿನ ಸಾಕ್ಷಿ ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ:ಇಡೀ ಜಗತ್ತಿಗೆ ಕರೊನಾ ಹಬ್ಬಿಸಿ ತನ್ನ ದೇಶದೊಳಗೆ ಮೊದಲ ಬಾರಿಗೆ ಮಹತ್ತರ ಸಾಧನೆಗೈದ ಚೀನಾ ಸರ್ಕಾರ!
40 ವರ್ಷ ಜುಬೇರ್ ಎಂಬಾತನ ಮೇಲೆ ಅನುಮಾನ ಬಲವಾಗಿದೆ. ಈತ ಹೈದರಾಬಾದ್​ನಲ್ಲಿಯೇ ಇಂಜಿನಿಯರಿಂಗ್​ ಪದವಿ ಪಡೆದಿದ್ದಾನೆ. ಇದೀಗ ಗುಪ್ತಚರ ದಳದ ಅಧಿಕಾರಿಗಳೂ ಸಹ ಆತನ ಬೆನ್ನು ಬಿದ್ದಿವೆ. ಜುಬೇರ್​ ಕುಟುಂಬದ ಹಿನ್ನೆಲೆ, ಹೈದರಾಬಾದ್​ನಲ್ಲಿ ಅವನು ಓದಿದ ಕಾಲೇಜು, ಉಳಿದಿದ್ದ ಸ್ಥಳಗಳ ಬಗ್ಗೆ ಎಲ್ಲ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ.
ಜುಬೇರ್​ ವಿರುದ್ಧ ಭಾರತದಲ್ಲಿ ಎಲ್ಲಿಯೂ ಸಹ ಯಾವುದೇ ಪ್ರಕರಣ ದಾಖಲಾಗಿತ್ತು. ಈತನ ಕ್ವಾರಂಟೈನ್​ ಅವಧಿ ಮುಗಿದ ಮೇಲೆ ಕೇಂದ್ರದ ತನಿಖಾ ದಳಗಳು ಪ್ರಕರಣ ದಾಖಲು ಮಾಡಿಕೊಂಡು, ಅಲ್​ ಕೈದಾ ನಂಟಿನ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಿವೆ ಎಂದು ಮೂಲಗಳು ತಿಳಿಸಿವೆ.
ಹಾಗೇ ಜುಬೇರ್​ನನ್ನು ವಿಚಾರಣೆಯ ಭಾಗವಾಗಿ ಹೈದರಾಬಾದ್​ಗೂ ಕರೆತರುವ ಬಗ್ಗೆ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ತೆಲಂಗಾಣ ಪೊಲೀಸರೂ ಸಹ ತನಿಖೆ ಕೈಗೆತ್ತಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ನಟಿಮಣಿಯರ ಲಾಕ್​ಡೌನ್ ಪ್ರವರ
ಜುಬೇರ್​ ಕುಟುಂಬದ ಬಗ್ಗೆ ಇದುವರೆಗೆ ಜಾಸ್ತಿ ಮಾಹಿತಿ ಸಿಕ್ಕಿಲ್ಲ. ತಾನು ಹುಟ್ಟಿದ್ದು ಯುಎಇಯ ಶಾರ್ಜಾದಲ್ಲಿ. 1990ರ ದಶಕದಲ್ಲಿ ಹೈದರಾಬಾದ್​ನ ಖಾಸಗಿ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ ಎಂದು ಆತ ಹೇಳಿಕೊಂಡಿದ್ದಾನೆ.ಇಂಜಿನಿಯರಿಂಗ್​ ಪದವಿ ಪಡೆದು ವಾಪಸ್​ ಶಾರ್ಜಾಕ್ಕೆ ಹೋಗಿದ್ದು, ಅಲ್ಲಿಂದ ಈತ ತನ್ನ ಸೋದರನಿದ್ದಲ್ಲಿಗೆ ಅಂದರೆ ಯುಎಸ್​ಗೆ ಹೋಗಿದ್ದ.
ಈತನ ಪೂರ್ತಿ ಹೆಸರು ಇಬ್ರಾಹಿಂ ಮೊಹಮ್ಮದ್​ ಜುಬೇರ್​. ಈತ ಭಾರತೀಯ ನಾಗರಿಕತ್ವ ಪಡೆದಿದ್ದಾನೆ. 2006ರವರೆಗೂ ಭಾರತದಲ್ಲಿಯೇ ಇದ್ದು, ನಂತರ ಯುಎಸ್​ಗೆ ತೆರಳಿದ್ದಾನೆ. ನಂತರ ಯುಎಸ್​ನ ಯುವತಿಯನ್ನು ಮದುವೆಯಾಗಿ, 2007ರ ಸುಮಾರಿಗೆ ಕಾನೂನು ಬದ್ಧವಾಗಿ ಯುಎಸ್​ನ ಕಾಯಂ ನಿವಾಸಿಯಾಗಿದ್ದಾನೆ ಎಂದು ಯುಎಸ್​ನ ನ್ಯಾಯಾಂಗ ವಿಭಾಗ 2018ರಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು.
ಜುಬೇರ್​ನ ಸಹೋದರರಿಬ್ಬರು ಉಗ್ರರಿಗೆ ಹಣಕಾಸು ಸಹಾಯ ಮಾಡುತ್ತಿದ್ದ ಆರೋಪದಡಿ 2011 ರಲ್ಲಿ ಬಂಧಿತರಾಗಿದ್ದಾರೆ. ಹಾಗೇ ಈತನೂ ಸಹ ಅಲ್​ ಕೈದಾ ಮುಖ್ಯಸ್ಥ ಅನ್ವರ್​ ಅಲ್​ ಅಲ್ವಾಕಿಗಾಗಿ ಹಣ ಹೊಂದಿಸುತ್ತಿದ್ದ ಎಂಬ ಆರೋಪ ಇದೆ. ಈ ಅನ್ವರ್​ನನ್ನು ಯೆಮನ್​ಲ್ಲಿ 2011ರಲ್ಲಿ ಡ್ರೋಣ್​ ದಾಳಿ ಮೂಲಕ ಹತ್ಯೆಗೈಯ್ಯಲಾಗಿದೆ.ಜುಬೇರ್​ಗೆ ಅಲ್​ಕೈದಾ ನಂಟಿರುವುದು ಯುಎಸ್​ನಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ 2019ರಲ್ಲಿ ಜೈಲು ಸೇರಿದ್ದ.
2020ರ ಫೆಬ್ರವರಿ 7ರಂದು ಬಿಡುಗಡೆಯಾಗಿದ್ದ. ನ್ಯಾಯಾಲಯದ ಆದೇಶದ ಅನ್ವಯ ಜುಬೇರ್​ ಗಡಿಪಾರಾಗಿದ್ದಾನೆ. ಜುಬೇರ್​ಗೆ ಅಲ್​ಕೈದಾ ನಂಟು ಇದೆ ಎಂಬುದಕ್ಕೆ ಯುಎಸ್​ ಕೋರ್ಟ್​ನಲ್ಲಿ ಸಾಕ್ಷಿ ಇದೆ ಎಂದು ಹೇಳಲಾಗಿದೆ. ಈಗ ಗಡಿಪಾರಾಗಿದ್ದರಿಂದ ಭಾರತೀಯ ಅಧಿಕಾರಿಗಳು ಹೆಚ್ಚಿನ ತನಿಖೆ ಪ್ರಾರಂಭಿಸಿದ್ದಾರೆ. (ಏಜೆನ್ಸೀಸ್​)
ಇದನ್ನೂ ಓದಿ:36 ತಾಸು ಕರೊನಾ ಕರ್ಫ್ಯೂ: ಇಂದು ರಾತ್ರಿ 7ರಿಂದ ಸೋಮವಾರ ಬೆಳಗ್ಗೆ 7ರವರೆಗೆ ಬಂದ್
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:seventeen − 13 =
Remember me
