ಹೈದರಾಬಾದ್:ತೆಲಂಗಾಣ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರದ ಅವಧಿ ಮಂಗಳವಾರ ಸಂಜೆ 5 ಗಂಟೆಗೆ ಮುಕ್ತಾಯವಾಗಿದೆ. ಪ್ರಚಾರದ ಅಬ್ಬರ ಸ್ತಬ್ಧವಾಗಿದ್ದು, ರಾಜಕೀಯ ನಾಯಕರ ಬೃಹತ್ ರ್ಯಾಲಿಗಳು ಸಮಾರೋಪಗೊಂಡವು.
ಬಿಆರ್​ಎಸ್ ಎಲ್ಲಾ 119 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸೀಟು ಹಂಚಿಕೆ ಒಪ್ಪಂದದ ಪ್ರಕಾರ ಬಿಜೆಪಿ ಮತ್ತು ಜನಸೇನೆ ಕ್ರಮವಾಗಿ 111 ಮತ್ತು 8 ಸ್ಥಾನಗಳಲ್ಲಿ ಸ್ಪರ್ಧಿಸಿವೆ. ಕಾಂಗ್ರೆಸ್ ತನ್ನ ಮಿತ್ರಪಕ್ಷ ಸಿಪಿಐ(ಎಂ)ಗೆ ಒಂದು ಸ್ಥಾನ ನೀಡಿದೆ. ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಒಂಬತ್ತು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಹಾಕಿದೆ. ಬಿಆರ್​ಎಸ್ ಸತತ ಮೂರನೇ ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೆ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಎಲ್ಲ ಪ್ರಯತ್ನ ಮಾಡಿದೆ. ಬಿಜೆಪಿ ಕೂಡ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಲು ಕಸರತ್ತು ನಡೆಸಿದೆ.
ಬಿಆರ್​ಎಸ್ ವರಿಷ್ಠ ಹಾಗೂ ಸಿಎಂ ಚಂದ್ರಶೇಖರ್ ರಾವ್, ಅವರ ಮಗ ಕೆ.ಟಿ. ರಾಮರಾವ್, ಟಿಪಿಸಿಸಿ ಅಧ್ಯಕ್ಷ ಎ. ರೇವಂತ್ ರೆಡ್ಡಿ, ಬಿಜೆಪಿ ಸಂಸದ ಬಂಡಿ ಸಂಜಯ್ ಕುಮಾರ್ ಇನ್ನಿತರ ಪ್ರಮುಖರು ಕಣದಲ್ಲಿದ್ದಾರೆ. ಒಟ್ಟಾರೆ 2,290 ಸ್ಪರ್ಧಿಗಳು ಕಣದಲ್ಲಿದ್ದಾರೆ. ಕೆಸಿಆರ್ ಗಜ್ವೆಲ್ ಮತ್ತು ಕಾಮರೆಡ್ಡಿ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ.
ರಾಜ್ಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಲವಾರು ಸಭೆ, ರೋಡ್ ಶೋ ನಡೆಸಿದ್ದಾರೆ. ಕೆಸಿಆರ್ 96 ರ್ಯಾಲಿಗಳಲ್ಲಿ ಭಾಗವಹಿಸಿದ್ದರು. ರಾಜನಾಥ ಸಿಂಗ್, ಅಮಿತ್ ಶಾ ಸೇರಿ ಹಲವಾರು ಕೇಂದ್ರ ಸಚಿವರು, ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್, ಪ್ರಿಯಾಂಕಾ ಇನ್ನಿತರರು ಪ್ರಚಾರ ನಡೆಸಿದ್ದಾರೆ.
737 ಕೋಟಿ ರೂ. ವಶಕ್ಕೆ: ಅಕ್ಟೋಬರ್ 9ರಂದು ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ಈವರೆಗೆ ಸುಮಾರು 737 ಕೋಟಿ ರೂಪಾಯಿ ಮೌಲ್ಯದ ನಗದು, ಚಿನ್ನ, ಮದ್ಯ, ಉಚಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ 3.26 ಕೋಟಿ ಅರ್ಹ ಮತದಾರರಿದ್ದು, ಸೆಕ್ಷನ್ 144ರ ಅಡಿಯಲ್ಲಿ ರಾಜ್ಯಾದ್ಯಂತ ನಿಷೇಧಾಜ್ಞೆ ಘೊಷಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ವಿಕಾಸ್ ರಾಜ್ ಹೇಳಿದ್ದಾರೆ.
ದೇಶದಲ್ಲಿ ದ್ವೇಷವನ್ನು ಕೊನೆಗೊಳಿಸುವುದು ನನ್ನ ಗುರಿಯಾಗಿದೆ. ಅದಕ್ಕಾಗಿ ಪ್ರಧಾನಿ ಮೋದಿಯನ್ನು ಸೋಲಿಸಬೇಕು. ಆರ್​ಎಸ್​ಎಸ್ ಮತ್ತು ಮೋದಿ ಇಡೀ ದೇಶದಲ್ಲಿ ದ್ವೇಷ ಹರಡಿದ್ದಾರೆ. ಮೊದಲ ಬಾರಿ ಮಾನನಷ್ಟಕ್ಕಾಗಿ ನನಗೆ ಎರಡು ವರ್ಷ ಶಿಕ್ಷೆಯಾಗಿದೆ. ನನ್ನ ಸರ್ಕಾರಿ ಮನೆಯನ್ನು ಕಸಿದುಕೊಳ್ಳಲಾಯಿತು. ನನ್ನ ಮನೆ ಕೋಟಿಗಟ್ಟಲೆ ಬಡವರ ಹೃದಯದಲ್ಲಿದೆ. ನಮ್ಮ ಹೋರಾಟವು ಸೈದ್ಧಾಂತಿಕವಾಗಿದೆ. ಅದರಲ್ಲಿ ರಾಜಿ ಮಾಡಿಕೊಳ್ಳಲಾರೆ.
| ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ
ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದರೆ ‘ಇಂದಿರಮ್ಮ ರಾಜ್ಯ’ (ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಆಳ್ವಿಕೆ) ಮರಳಿ ತರುವುದಾಗಿ ಕಾಂಗ್ರೆಸ್ ಹೇಳಿದೆ. ಆದರೆ ಅವರ ಆಡಳಿತ ಎನ್​ಕೌಂಟರ್​ಗಳಿಂದ ತುಂಬಿದೆ. ಗುಂಡಿನ ದಾಳಿ, ಹತ್ಯೆಗಳೇ ನಡೆದಿವೆ. ನಾನು 10 ವರ್ಷಗಳಿಂದ ಮುಖ್ಯಮಂತ್ರಿಯಾಗಿದ್ದೇನೆ. ಭವಿಷ್ಯದಲ್ಲಿ ತೆಲಂಗಾಣ ಶ್ರೇಷ್ಠ ರಾಜ್ಯವಾಗಬೇಕು. ಅದು ನನ್ನ ಮಹತ್ವಾಕಾಂಕ್ಷೆ.
| ಕೆ. ಚಂದ್ರಶೇಖರ ರಾವ್ ಸಿಎಂ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
