ತೆಲಂಗಾಣ:ಬಿಸಿಲಿನ ಬೇಗೆಯಿಂದ ಹೆಚ್ಚುತ್ತಿರುವ ತಾಪಮಾನವನ್ನು ಗಮನದಲ್ಲಿಟ್ಟುಕೊಂಡು, ವಿದ್ಯಾರ್ಥಿಗಳಿಗೆ ಎದುರಾಗುವ ತೊಂದರೆಯನ್ನು ತಪ್ಪಿಸಲು ಇದೀಗ ತೆಲಂಗಾಣ ರಾಜ್ಯ ಶಿಕ್ಷಣ ಇಲಾಖೆ ಮಾರ್ಚ್ 15ರಿಂದ ಅರ್ಧ ದಿನ ಮಾತ್ರ ಶಾಲೆಯನ್ನು ನಡೆಸಲು ಈ ಹಿಂದೆಯೇ ನಿರ್ಧರಿಸಿತ್ತು. ಅದರಂತೆಯೇ ಈಗ ಶಾಲೆಯನ್ನು ಆಫ್​ ಡೇ ಮಾಡಲು ಸಿದ್ಧವಾಗಿದೆ. ಆದ್ರೆ, ಈ ಮಧ್ಯೆ ವಿದ್ಯಾರ್ಥಿಯೊಬ್ಬ ಮಾಡಿಕೊಂಡ ಮನವಿ ನೋಡಿದ್ರೆ ಎಂಥವರ ಕಣ್ಣಲ್ಲಿ ನೀರು ತರಿಸುತ್ತದೆ ಎಂದೇ ಹೇಳಬಹುದು.
ಇದನ್ನೂ ಓದಿ:ಐಪಿಎಲ್​ ಆರಂಭಕ್ಕೂ ಮುನ್ನ ಟೀಮ್​ ಇಂಡಿಯಾ ಆಟಗಾರರ ನಡುವೆ ಶುರುವಾಯಿತು ಲೈಕ್​ ವಾರ್; ಕಾರಣ ಹೀಗಿದೆ​
ಬಿರು ಬಿಸಿಲಿನ ತಾಪಕ್ಕೆ ವಿದ್ಯಾರ್ಥಿಗಳು ತೊಂದರೆಗೆ ಒಳಪಡುತ್ತಾರೆ. ಆದ್ದರಿಂದ ಮಕ್ಕಳಿಗೆ ಕಷ್ಟವೆನ್ನಿಸಬಹುದು ಎಂಬ ಮುಂದಾಲೋಚನೆಯಿಂದ ತೆಲಂಗಾಣ ಸರ್ಕಾರ ಈ ಕುರಿತಂತೆ ಅಧಿಕೃತವಾಗಿ ಘೋಷಿಸಿದ್ದು, ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆಗಳು ಅರ್ಧ ದಿನ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದೆ. ಇದೆಲ್ಲದರ ಮಧ್ಯೆ ಶಾಲೆ ಅರ್ಧ ದಿನ ನಡೆದರೆ, ತನಗೆ ಬಿಸಿಯೂಟ ಸಿಗುವುದಿಲ್ಲ ಎಂಬ ಅರಿವಿನಿಂದ ಸಾತ್ವಿಕ್ ಎಂಬ ವಿದ್ಯಾರ್ಥಿ, ದಯವಿಟ್ಟು ಅರ್ಧ ದಿನ ರಜೆ ಮಾಡುವುದು ಬೇಡ, ನನಗೆ ಮಧ್ಯಾಹ್ನದ ಊಟ ತುಂಬ ಅಗತ್ಯವಿದೆ ಎಂದು ಪತ್ರದ ಮೂಲಕ ಮನವಿ ಮಾಡಿದ್ದಾನೆ.
ಮಾರ್ಚ್ 15ರಿಂದ ಅರ್ಧ ದಿನದ ಶಾಲೆಗಳನ್ನು ಪ್ರಾರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಬೆಳಗ್ಗೆ 8ರಿಂದ ಮಧ್ಯಾಹ್ನ 12.30ರವರೆಗೆ ಕಾರ್ಯನಿರ್ವಹಿಸಲು ಅರ್ಧ ದಿನದ ಅಧ್ಯಯನದ ವೇಳಾಪಟ್ಟಿಯನ್ನೂ ಕೂಡ ಶಿಕ್ಷಣ ಇಲಾಖೆ ಬಿಡುಗಡೆಗೊಳಿಸಿದೆ. ಎಲ್ಲಾ ವಿದ್ಯಾರ್ಥಿಗಳು ರಜೆ ಸಿಕ್ಕಿತು ಎಂದು ಸಂತಸಪಡುತ್ತಿದ್ದರೇ ಈ ಹುಡುಗ ಮಾತ್ರ ಅತೀವ ಬೇಸರ ಹೊರಹಾಕಿದ್ದು, ತನಗೆ ರಜೆ ಬೇಡ, ಅರ್ಧ ದಿನ ಮಾಡಬೇಡಿ ಎಂದು ಹೇಳಿದ್ದಾನೆ. ಅಸಲಿಗೆ ಆತ ಬರೆದ ಪತ್ರದಲ್ಲಿ ಏನಿದೆ ಎಂಬುದನ್ನು ತಿಳಿಯುವುದಾದರೆ.
ಇದನ್ನೂ ಓದಿ:ಈಶ್ವರಪ್ಪ ಅವರದು ಬ್ಲಾಕ್ ಮೇಲ್ ರಾಜಕಾರಣ
ತನ್ನ ಪುಸ್ತಕದಲ್ಲಿ ಬೇಸರ ವ್ಯಕ್ತಪಡಿಸಿರುವ ಸಾತ್ವಿಕ್, “ಬೇಸಿಗೆ ರಜೆಯಲ್ಲಿ ಮನೆಗೆ ಹೋದರೆ ಊಟ ಸಿಗಲ್ಲ. ತಾತ ಮತ್ತು ಅಜ್ಜಿ ಪಿಂಚಣಿ ಹಣದಲ್ಲಿ ಜೀವನ ನಡೆಸುತ್ತಿದ್ದಾರೆ. ದಯವಿಟ್ಟು ಬೇಸಿಗೆ ರಜೆ ಕೊಡಬೇಡಿ. ನಾನು ಶಾಲೆಯಲ್ಲೇ ಇರುತ್ತೇನೆ. ನನಗೆ ಶಾಲೆಯಲ್ಲಿ ಸಿಗುವ ಮಧ್ಯಾಹ್ನದ ಬಿಸಿಯೂಟ ಬಹಳ ಮುಖ್ಯ. ಶ್ರಮಪಟ್ಟು ಓದಿ ದೊಡ್ಡ ಮಟ್ಟಕ್ಕೆ ತಲುಪುತ್ತೇನೆ” ಎಂದು ಬರೆದಿರುವ ಎರಡು ಪುಟಗಳ ಪತ್ರ ನಿಜಕ್ಕೂ ಎಂಥವರ ಮನವನ್ನು ಕಲಕುವಂತಿದೆ,(ಏಜೆನ್ಸೀಸ್).
ಟಿಕೆಟ್ ಕೈತಪ್ಪಿದೆ, ಇವನ ಬಳಿ ಹೇಗೆ ಕೆಲಸಕ್ಕಾಗಿ…. ಕಾರ್ಯಕರ್ತರಲ್ಲಿ ಪ್ರತಾಪ್ ಸಿಂಹ ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
