ಹೈದರಾಬಾದ್​:ತಿಂಗಳಿಗೆ 6000 ರೂ. ಪಿಂಚಣಿ ನೀಡುವಂತೆ ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ತಂಗಲ್ಲಪಲ್ಲಿ ಗ್ರಾಮದ ಬೋಳು ತಲೆಯ ಪುರುಷರ ಸಂಘ ಸರ್ಕಾರವನ್ನು ಒತ್ತಾಯಿಸಿದೆ.
ತಲೆಯಲ್ಲಿ ಕೂದಲು ಇಲ್ಲದೆ ಸಾಕಷ್ಟು ಮುಜುಗರ ಅನುಭವಿಸುತ್ತಿರುವುದಲ್ಲದೆ, ಕೆಲವರು ನಮ್ಮನ್ನು ನೋಡಿ ಅಣಕಿಸುವುದರಿಂದ ಸಾಕಷ್ಟು ಮಾನಸಿಕ ಸಂಕಟ ಅನುಭವಿಸುತ್ತಿದ್ದೇವೆ. ಹೀಗಾಗಿ ಸರ್ಕಾರ ನಮ್ಮ ಬಗ್ಗೆ ವಿಶೇಷ ಗಮನಹರಿಸಬೇಕು ಎಂದು ಬೋಳು ತಲೆಯ ಪುರುಷರ ಸಂಘ ಸರ್ಕಾರದ ಮುಂದೆ ವಿಶೇಷವಾದ ಪ್ರಸ್ತಾವನೆ ಸಲ್ಲಿಸಿದೆ.
ದಿನನಿತ್ಯದ ಅವಮಾನವನ್ನು ನಿಭಾಯಿಸಲು 6,000 ರೂ.ಗಳು ಸಹಾಯ ಮಾಡುತ್ತವೆ ಎಂದು ಸಂಘವು ಹೇಳಿದೆ ಮತ್ತು ರಾಜ್ಯ ಸರ್ಕಾರವು ಎಲ್ಲಾ ಬೋಳು ತಲೆಯ ಪುರುಷರಿಗೆ ಸಂಕ್ರಾಂತಿ ಉಡುಗೊರೆಯಾಗಿ ಪಿಂಚಣಿಯನ್ನು ಘೋಷಿಸಬೇಕು ಎಂದು ಮನವಿ ಮಾಡಿದೆ.
ಜನವರಿ 5 ರಂದು ಗ್ರಾಮದಲ್ಲಿ ಬೋಳು ತಲೆ ಪುರುಷರ ಸಂಘ ಅನೌಪಚಾರಿಕ ಸಭೆಯನ್ನು ಕರೆದು ಚರ್ಚಿಸಿದೆ. ಅಲ್ಲದೆ, ಸಂಕ್ರಾಂತಿ ನಂತರ ಮತ್ತೊಂದು ಸಭೆ ನಡೆಸಲು ನಿರ್ಧರಿಸಿದೆ. ಇದರಲ್ಲಿ ಕೂದಲು ಕಳೆದುಕೊಂಡಿರುವ 30 ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ.
ಸಂಘದ ಸದಸ್ಯರಲ್ಲಿ ಒಬ್ಬರಾದ 41 ವರ್ಷದ ಪಿ ಅಂಜಿ ಮಾತನಾಡಿ, ಜನರು ನಮ್ಮ ಮೇಲೆ ಮಾಡುವ ಕಾಮೆಂಟ್‌ಗಳು ನಮಗೆ ನೋವುಂಟುಮಾಡುತ್ತವೆ. ನಮ್ಮನ್ನು ನೋಡಿ ಅವರು ನಗುತ್ತಾರೆ. ಏಕೆಂದರೆ ನಮ್ಮ ತಲೆಯಲ್ಲಿ ಕೂದಲು ಕಡಿಮೆಯಾಗುತ್ತಿದೆ ಮತ್ತು ಇದು ನಮಗೆ ಮಾನಸಿಕ ಸಂಕಟವನ್ನು ತರುತ್ತದೆ. ನಾವು ಈಗಾಗಲೇ ನಮ್ಮ ಬೋಳುತನದ ಬಗ್ಗೆ ಚಿಂತಿತರಾಗಿರುವಾಗ ನಮ್ಮನ್ನು ಆಗಾಗ ಗೇಲಿ ಮಾಡಲಾಗುತ್ತದೆ. ಇದು ನಮಗೆ ಮತ್ತೊಂದು ಕಳವಳಕಾರಿಯಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.
ಕೇವಲ 22 ವರ್ಷ ವಯಸ್ಸಿನ ಸಂಘದ ಸದಸ್ಯರೊಬ್ಬರು ಬಹುತೇಕ ಎಲ್ಲ ಕೂದಲನ್ನು ಕಳೆದುಕೊಂಡಿದ್ದಾರೆ. 20ರ ಹರೆಯದಲ್ಲಿ ನನಗೆ ಕೂದಲು ಉದುರುತ್ತಿತ್ತು ಎಂದು ಅಂಜಿ ಹೇಳಿದ್ದಾರೆ. ಸರ್ಕಾರಿ ಪಿಂಚಣಿ ನೀಡಿದರೆ, ಆ ಮೊತ್ತವನ್ನು ಏನು ಮಾಡುತ್ತೀರಿ ಎಂದು ಪ್ರಶ್ನಿಸಿದಾಗ, ಸಾಧ್ಯವಾದರೆ ನಾವು ಕೂದಲು ಹೊಂದಲು ಚಿಕಿತ್ಸೆ ಪಡೆಯಲು ಬಯಸುತ್ತೇವೆ. ಪಿಂಚಣಿಯನ್ನು ನಮಗೆ ಚಿಕಿತ್ಸಾ ವೆಚ್ಚವೆಂದು ಪರಿಗಣಿಸಬೇಕು ಎಂದು ಅಂಜಿ ಕೇಳಿದ್ದಾರೆ.
50ರ ಹರೆಯದ ವೆಲ್ಡಿ ಬಾಲಯ್ಯ ಎಂಬುವರು ಬೋಳು ತಲೆಯ ಔಪಚಾರಿಕ ಸಂಘವನ್ನು ಹೊಂದಿಲ್ಲದಿದ್ದರೂ ಅವರು ಹೊಸದಾಗಿ ರಚಿಸಲಾದ ಸಂಘದ ಅಧ್ಯಕ್ಷರಾಗಿದ್ದಾರೆ. ಈ ಸಂಘಕ್ಕೆ ಇತರ ಪದಾಧಿಕಾರಿಗಳೂ ಇದ್ದಾರೆ. ವೃದ್ಧರು, ವಿಧವೆಯರು, ದೈಹಿಕ ವಿಕಲಚೇತನರು ಮತ್ತು ಇತರರಿಗೆ ಸರ್ಕಾರವು ಪಿಂಚಣಿ ನೀಡುತ್ತಿರುವುದರಿಂದ ಪಿಂಚಣಿಗಾಗಿ ತಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಬೋಳು ತಲೆ ಪುರುಷರ ಸಂಘ ಒತ್ತಾಯಿಸಿದೆ. (ಏಜೆನ್ಸೀಸ್​)
ಇನ್ನೇನು ಅಂತ್ಯಕ್ರಿಯೆ ನಡೆಯಬೇಕೆನ್ನುವಷ್ಟರಲ್ಲಿ ಕಣ್ತೆರೆದ ವೃದ್ಧೆ! ಮತ್ತೆ ಬದುಕಿದ ಖುಷಿ ಹೆಚ್ಚು ಸಮಯ ಉಳಿಯಲಿಲ್ಲ

ಡಾ.ವಿಜಯ ಸಂಕೇಶ್ವರ ಅವರಿಗೆ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿ

ಬಿ.ಇಡಿ ಸೀಟ್​ಗೆ ಹೊಸ ಮೀಸಲು: 394 ಕಾಲೇಜುಗಳಿಂದ 17,475 ಸೀಟು ಲಭ್ಯ, 13ರಿಂದ 20ರವರೆಗೆ ಕೌನ್ಸೆಲಿಂಗ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × four =
Remember me
