ತೆಲಂಗಾಣ:ನಮ್ಮ ರಾಜ್ಯ ಏಪ್ರಿಲ್​ 7ರಷ್ಟರಲ್ಲಿ ಕರೊನಾ ವೈರಸ್​ನಿಂದ ಮುಕ್ತಿ ಪಡೆಯಬಹುದು ಎಂದು ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಅವರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್​ 7ರಂದು ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗದೆ ಇದ್ದರೆ ತೆಲಂಗಾಣ ಕರೊನಾ ಮುಕ್ತ ರಾಜ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಸದ್ಯ ತೆಲಂಗಾಣದಲ್ಲಿ 25,935 ಜನ ಕ್ವಾರೆಂಟೈನ್​ನಲ್ಲಿ ಇದ್ದಾರೆ. ಏ.7ರೊಳಗೆ ಅವರೆಲ್ಲರ 14 ದಿನಗಳ ಕ್ವಾರೆಂಟೈನ್​ ಅವಧಿ ಮುಕ್ತಾಯಗೊಳ್ಳುತ್ತದೆ. ಒಂದೊಮ್ಮೆ ತಪಾಸಣೆಗೆ ಒಳಪಡಿಸಿದಾಗ ಅವರಲ್ಲಿ ಕರೊನಾ ನೆಗೆಟಿವ್​ ಬಂದರೆ ಏ.7ರ ನಂತರ ರಾಜ್ಯದಲ್ಲಿ ಕರೊನಾ ವೈರಸ್​ ರೋಗಿಗಳು ಇರುವುದಿಲ್ಲ ಎಂದು ಹೇಳಿದ್ದಾರೆ.
ಸ್ವಲ್ಪದಿನ ನಮಗೆ ನಾವು ಸಂಯಮ ವಿಧಿಸಿಕೊಳ್ಳಬೇಕು. ಮನೆ ಬಿಟ್ಟು ಹೊರಬರಬಾರದು. ಹಾಗಾದರೆ ಮಾತ್ರ ಕರೊನಾದಿಂದ ಸಂಪೂರ್ಣ ಮುಕ್ತಿ ಪಡೆಯಬಹುದು ಎಂದಿದ್ದಾರೆ.
ತೆಲಂಗಾಣದಲ್ಲಿ ಸದ್ಯ 70 ಕರೊನಾ ರೋಗಿಗಳು ಇದ್ದಾರೆ. ಒಂದು ಸಾವಾಗಿದೆ. 11 ಜನರಲ್ಲಿ ಕರೊನಾ ಸೋಂಕಿನಿಂದ ಪಾರಾಗಿದ್ದಾರೆ. ಅವರನ್ನು ಇಂದು ಡಿಸ್​ಚಾರ್ಜ್​ ಮಾಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ನಮ್ಮ ರಾಜ್ಯದಲ್ಲಿರುವ ವಲಸೆ ಕಾರ್ಮಿಕರು ಯಾರೂ ಹೆದರಬೇಕಾಗಿಲ್ಲ. ಆಶ್ರಯ, ಆಹಾರ, ಹಣಕಾಸಿನ ವ್ಯವಸ್ಥೆ ಮಾಡುತ್ತೇವೆ. ಇದ್ದಲ್ಲೇ ಇರಿ. ತೆಲಂಗಾಣದಿಂದ ಬೇರೆ ಯಾವುದೇ ರಾಜ್ಯಗಳಿಗೂ ಯಾವ ಕಾರಣಕ್ಕೂ ತೆರಳಬೇಡಿ ಎಂದು ಹೇಳಿದ್ದಾರೆ.ಅಲ್ಲದೆ, ತೆಲಂಗಾಣ ಅಭಿವೃದ್ಧಿಗೆ ವಲಸೆ ಕಾರ್ಮಿಕರೂ ಕಾರಣ. ಅವರನ್ನೆಲ್ಲ ನಮ್ಮ ಕುಟುಂಬದವರಂತೆ ನೋಡುವುದು ಧರ್ಮ ಎಂದಿರುವ ಸಿಎಂ ಚಂದ್ರಶೇಖರ್​ ರಾವ್​, ಯಾರೂ ನಿಮ್ಮ ಹುಟ್ಟೂರಿಗೆ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 6 =
Remember me
