ಹೈದರಾಬಾದ್:ಜಗತ್ತಿನ ಪ್ರಥಮ 3ಡಿ ಮುದ್ರಿತ ಹಿಂದು ದೇವಾಲಯವೊಂದನ್ನು ತೆಲಂಗಾಣದಲ್ಲಿ ನಿರ್ವಿುಸಲಾಗುತ್ತಿದೆ. ನಗರದ ಸಿದ್ದಪೇಟೆಯ ಬುರುಗಪಲ್ಲಿಯಲ್ಲಿರುವ ಗೇಟೆಡ್ ವಿಲ್ಲಾ ಕಮ್ಯುನಿಟಿ ‘ಚರ್ವಿತ ಮೀಡೋಸ್’ನಲ್ಲಿ ಈ ಮೂರು ಹಂತದ ಪ್ರಿಂಟೆಡ್ ಮಂದಿರವನ್ನು ಅಪ್ಸುಜಾ ಇನ್​ಫ್ರಾಟೆಕ್ ಸಂಸ್ಥೆ ನಿರ್ವಿುಸುತ್ತಿದೆ. 3,800 ಚದರ ಅಡಿ ಪ್ರದೇಶದಲ್ಲಿ ಈ ವಿಶಿಷ್ಟ ಮಂದಿರ ನಿರ್ವಣಗೊಳ್ಳಲಿದೆ. ದೇವಸ್ಥಾನ ನಿರ್ವಣಕ್ಕಾಗಿ 3ಡಿ-ಪ್ರಿಂಟೆಡ್ ನಿರ್ಮಾಣ ಕಂಪನಿಯಾದ ಸಿಂಪ್ಲಿಫೋರ್ಜ್ ಕ್ರಿಯೇಷನ್ಸ್​ನೊಂದಿಗೆ ಅಪ್ಸುಜಾ ಇನ್​ಫ್ರಾಟೆಕ್ ಒಪ್ಪಂದ ಮಾಡಿಕೊಂಡಿದೆ.
ಹೈದರಾಬಾದ್​ನ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಸಹಯೋಗದೊಂದಿಗೆ ಸಿಂಪ್ಲಿ ಫೋರ್ಜ್ ಕ್ರಿಯೇಷನ್ಸ್ ಇದೇ ಮಾರ್ಚ್​ನಲ್ಲಿ ಕೇವಲ 2 ಗಂಟೆಯೊಳಗೆ ಸೇತುವೆಯ ಮೂಲಮಾದರಿ ನಿರ್ವಿುಸಿತ್ತು. ಅದು ಭಾರತದ ಆ ಬಗೆಯ ಮೊದಲ ಸೇತುವೆಯಾಗಿದೆ. ಆ ಸೇತುವೆಯನ್ನು ಕೂಡ ಚರ್ವಿತ ಮೀಡೋಸ್​ನಲ್ಲೇ ಜೋಡಿಸಲಾಗಿತ್ತು. ಐಐಟಿ ಹೈದರಾಬಾದ್​ನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಕೆ.ವಿ.ಎಲ್. ಸುಬ್ರಮಣಿಯಂ ಮತ್ತವರ ಸಂಶೋಧನಾ ತಂಡ ಅದರ ಪರಿಕಲ್ಪನೆ ಹಾಗೂ ವಿನ್ಯಾಸ ರೂಪಿಸಿತ್ತು. ಭಾರ ಹೊರುವ ಸಾಮರ್ಥ್ಯದ ಪರೀಕ್ಷೆ ಹಾಗೂ ಬಳಕೆಯ ಮೌಲ್ಯಮಾಪನದ ನಂತರ ಈ ಸೇತುವೆಯನ್ನು ಪಾದಚಾರಿಗಳ ಬಳಕೆಗೆ ಮುಕ್ತಗೊಳಿಸಲಾಗಿದೆ. ಪ್ರಸ್ತಾಪಿತ ಮಂದಿರದ ಸುತ್ತ ಇರುವ ಗಾರ್ಡನ್​ಗೆ ಪಾದಚಾರಿಗಳ ಸಂಚಾರಕ್ಕೆ ಅದು ಬಳಕೆಯಾಗಲಿದೆ ಎಂದು ಸಿಂಪ್ಲಿಫೋರ್ಜ್ ಕ್ರಿಯೇಷನ್ಸ್​ನ ಸಿಇಒ ಧ್ರುವ ಗಾಂಧಿ ಹೇಳಿದ್ದಾರೆ.
ದೇವಸ್ಥಾನದಲ್ಲಿ 3 ಗರ್ಭಗುಡಿ ಇರುತ್ತವೆ. ಗಣಪತಿಗೆ ಸಮರ್ಪಿತವಾದ ‘ಮೋದಕ’ ಆಕಾರದ ಗರ್ಭಗುಡಿ, ಶಂಕರನಿಗೆ ಚೌಕಾಕಾರ ಮತ್ತು ದೇವಿ ಪಾರ್ವತಿಗೆ ಕಮಲಾಕಾರದ ಗರ್ಭಗುಡಿಗಳು ಮಂದಿರದಲ್ಲಿರುತ್ತವೆ ಎಂದು ಅಪ್ಸುಜಾ ಇನ್​ಫ್ರಾಟೆಕ್​ನ ಆಡಳಿತ ನಿರ್ದೇಶಕ ಹರಿ ಕೃಷ್ಣ ಜೇಡಪಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − 3 =
Remember me
