ಸಿದ್ದಿಪೇಟ್​:ತಮ್ಮ ಪ್ರೀತಿಗೆ ಹಿರಿಯರು ಒಪ್ಪಿಗೆ ನೀಡುವುದಿಲ್ಲ ಎಂಬ ಭಯದಲ್ಲಿ ಪ್ರೇಮಿಗಳಿಬ್ಬರು ಸಾವಿನ ಹಾದಿ ಹಿಡಿದಿರುವ ಮನಕಲಕುವ ಘಟನೆ ತೆಲಂಗಾಣದ ಸಿದ್ದಿಪೇಟೆ ಜಿಲ್ಲೆ ದುಬ್ಬಾಕ ಮಂಡಲದ ಲಟ್ಚಾಪೇಟೆಯಲ್ಲಿ ನಡೆದಿದೆ.
ಮೃತ ಪ್ರೇಮಿಗಳನ್ನು ಕರುಪಾತಿ ಭಗೀರಥ (17) ಮತ್ತು ಥೋಟ್ಲಾ ನೇಹಾ (16) ಎಂದು ಗುರುತಿಸಲಾಗಿದೆ. ಇಬ್ಬರು ಲಟ್ಚಾಪೇಟೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಇಬ್ಬರು ದುಬ್ಬಾಕ ಮಂಡಲದ ಜೂನಿಯರ್​ ಕಾಲೇಜಿನ ಪಿಯು ವಿದ್ಯಾರ್ಥಿಯಾಗಿದ್ದರು. ಇಬ್ಬರು ತುಂಬಾ ಪ್ರೀತಿಸುತ್ತಿದ್ದರು.
ಇದನ್ನೂ ಓದಿ:ಗೃಹಜ್ಯೋತಿ ಯೋಜನೆ: ತಣ್ಣಗಾಯಿತು ಆರಂಭದಲ್ಲಿದ್ದ ಜೋಶ್, ಇನ್ಮುಂದೆ ಗ್ರಾಹಕರಿದ್ದಲ್ಲಿಗೆ ತೆರಳಿ ನೋಂದಣಿ
ಆದರೆ, ತಮ್ಮ ಪ್ರೀತಿಗೆ ಹಿರಿಯರು ಒಪ್ಪಿಗೆ ನೀಡುವುದಿಲ್ಲ ಮತ್ತು ಮುಂದಿನ ದಿನಗಳಲ್ಲಿ ಇಬ್ಬರು ಬೇರೆಯಾಗುತ್ತೇವೆ ಎಂಬ ಭಯ ಇಬ್ಬರಲ್ಲೂ ಕಾಡುತ್ತಿತ್ತು. ಇದೇ ಭಯದಲ್ಲಿ ದುಡುಕಿನ ನಿರ್ಧಾರ ತೆಗೆದು ಪ್ರೇಮಿಗಳು ಸಾವಿನ ಮನೆ ಸೇರಿದ್ದಾರೆ.
ಮಂಗಳವಾರ ಸಂಜೆ ಭಗೀರಥನ ಪಾಲಕರು ಮನೆಯಿಂದ ಹೊರ ಹೋಗಿದ್ದ ಸಂದರ್ಭದಲ್ಲಿ ಇಬ್ಬರು ಭೇಟಿಯಾಗಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಇಬ್ಬರ ಸಾವಿನ ಕಾರಣ ತಿಳಿದ ಪಾಲಕರು ಮತ್ತು ಗ್ರಾಮಸ್ಥರು ಶಾಕ್​ಗೆ ಒಳಗಾಗಿದ್ದಲ್ಲದೆ, ಹದಿಹರೆಯದ ಪ್ರೇಮಿಗಳ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಮೃತದೇಹಗಳನ್ನು ದುಬ್ಬಾಕಾದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಪಾಲಕರಿಗೆ ಹಸ್ತಾಂತರ ಮಾಡಿದ್ದಾರೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​)
ಮಾಜಿ ನೌಕಾಧಿಕಾರಿಗಳಿಗೆ ಲಕ್ಷಾಂತರ ರೂ. ಪಂಗನಾಮ: ಬಯಲಾಯ್ತು ಮಹಿಳಾ ಇನ್ಸ್​ಪೆಕ್ಟರ್ ಕಳ್ಳಾಟ!

ಭಾರೀ ಮಳೆಗೆ ಹರಿಯಾಣದ ರಸ್ತೆಗಳು ಜಲಾವೃತ; ಬೋಟ್​​ ಮೂಲಕ ಪರಿಸ್ಥಿತಿ ವೀಕ್ಷಿಸಿದ ಗೃಹ ಸಚಿವ

ಪತಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದ ಪತ್ನಿಯರು!; ಆರೋಪಿಗಳನ್ನು ಬಂಧಿಸಿದ ಪೊಲೀಸರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − one =
Remember me
