ನವದೆಹಲಿ:‘ವಾಟ್ಸ್​ಆ್ಯಪ್​’ಗೆ ಪ್ರತಿಸ್ಪರ್ಧಿಯಾದ ಮೆಸೇಜಿಂಗ್ ಆ್ಯಪ್ ‘ಟೆಲಿಗ್ರಾಂ’, ಜನವರಿ ತಿಂಗಳಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಡೌನ್ಲೋಡ್​ ಆದ ನಾನ್-ಗೇಮಿಂಗ್ ಆ್ಯಪ್​ ಆಗಿ ಹೊರಹೊಮ್ಮಿದೆ. ಸೆನ್ಸಾರ್ ಟವರ್​ ನೀಡಿರುವ ವರದಿಯ ಪ್ರಕಾರ 2021 ರ ಜನವರಿಯಲ್ಲಿ ಟೆಲಿಗ್ರಾಂ 63 ಮಿಲಿಯನ್ ಇನ್​ಸ್ಟಾಲ್​ಗಳನ್ನು ಕಂಡಿದ್ದು, ಗೂಗಲ್ ಪ್ಲೇ ಸ್ಟೋರ್​ನಲ್ಲಿ ಈವರೆಗೆ ‘ಟಿಕ್​ಟಾಕ್’​ ಆ್ಯಪ್​ಗಿದ್ದ ಮೊದಲ ಸ್ಥಾನವನ್ನು ತಾನು ಪಡೆದುಕೊಂಡಿದೆ.
2020ರ ಡಿಸೆಂಬರ್ ತಿಂಗಳಲ್ಲಿ 9 ನೇ ಸ್ಥಾನದಲ್ಲಿದ್ದ ಟೆಲಿಗ್ರಾಂ ಜನವರಿ ತಿಂಗಳಲ್ಲಿ ದಿಢೀರನೇ ಮೊದಲ ಸ್ಥಾನಕ್ಕೇರಿದೆ. ಮತ್ತು ಒಟ್ಟು ಡೌನ್ಲೋಡ್​ ಸಂಖ್ಯೆಯಲ್ಲಿ ಶೇ.24 ರಷ್ಟು ಭಾರತೀಯ ಬಳಕೆದಾರರದ್ದೇ ಆಗಿದೆ. ಹೀಗಾಗಿ ವಾಟ್ಸ್​ಆ್ಯಪ್​ನ ಹೊಸ ಪ್ರೈವೆಸಿ ಪಾಲಿಸಿಯ ಹಿನ್ನೆಲೆಯಲ್ಲಿ ಭಾರತೀಯ ಬಳಕೆದಾರರು ಪರ್ಯಾಯ ಮೆಸೇಂಜಿಂಗ್ ಆ್ಯಪ್​ಗಳಿಗಾಗಿ ಹುಡುಕಾಡಿದ್ದು, ಟೆಲಿಗ್ರಾಂನ ಈ ಸಾಧನೆಗೆ ಇಂಬು ನೀಡಿರುವುದು ಸ್ಪಷ್ಟವಾಗಿದೆ.
ಇದನ್ನೂ ಓದಿ:ಯೋಧನಿಗೊಂದು ಹೃದಯಸ್ಪರ್ಶಿ ಸ್ವಾಗತ- ಹೂವಿನಿಂದ ಅಲಂಕೃತಗೊಂಡ ಚಿಕ್ಕಮಗಳೂರಿನ ಬಿದರೆ ಗ್ರಾಮ
2020 ರ ಜನವರಿಯಲ್ಲಿನ ಅಂಕಿಅಂಶಗಳಿಗೆ ಹೋಲಿಸಿದರೆ ಟೆಲಿಗ್ರಾಂನ ಈ ಬಾರಿಯ ಡೌನ್ಲೋಡ್​ ಗತಿಯು ನಾಲ್ಕು ಪಟ್ಟು ಹೆಚ್ಚಾಗಿದೆ. ಪ್ಲೇ ಸ್ಟೋರ್​​ನಲ್ಲಿ ಮೊದಲ ಸ್ಥಾನ ಗಳಿಸಿದರೆ, ಆ್ಯಪಲ್​ನ ಆ್ಯಪ್ ಸ್ಟೋರ್​ನಲ್ಲಿ ನಾಲ್ಕನೇ ಸ್ಥಾನವನ್ನು ಟೆಲಿಗ್ರಾಂ ಗಳಿಸಿದೆ. ಆದರೆ ಐಒಎಸ್ ಡಿವೈಸ್​ಗಳಲ್ಲಿ ಟಿಕ್​ಟಾಕ್ ತನ್ನ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದು, ಯೂಟ್ಯೂಬ್ ಮತ್ತು ಜೂಮ್​ ಅದರ ಹಿಂದಿವೆ.
ಮತ್ತೊಂದು ಮೆಸೇಜಿಂಗ್ ಆ್ಯಪ್​ ಆದ ಸಿಗ್ನಲ್ ಕೂಡ ಡೌನ್ಲೋಡ್ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡಿದೆ. ಗೂಗಲ್ ಪ್ಲೇ ಸ್ಟೋರ್​ನಲ್ಲಿ ಎರಡನೇ ಅತಿ ಹೆಚ್ಚು ಡೌನ್ಲೋಡ್​ ಗಳನ್ನು ಕಂಡ ಆ್ಯಪ್ ಆಗಿ ಸಿಗ್ನಲ್​ ಹೊರಹೊಮ್ಮಿದೆ. ಮತ್ತೆ ಒಟ್ಟಾರೆಯಾಗಿ ಮೂರನೇ ಸ್ಥಾನ ಗಳಿಸಿದ್ದು, ಆ್ಯಪಲ್ ಆ್ಯಪ್ ಸ್ಟೋರ್​ನಲ್ಲಿ 10 ನೇ ಸ್ಥಾನ ಪಡೆದು ಟಾಪ್ ಟೆನ್ ಸೇರಿದೆ.
ಇದನ್ನೂ ಓದಿ:ಭಾರತಕ್ಕೆ ಬಂತು ವಾಟ್ಸ್​ಆ್ಯಪ್​ ಪೇ! ನಿಮ್ಮ ಮೊಬೈಲ್‌ನಲ್ಲಿ ವಾಟ್ಸಾಪ್ ಪೇ ಆ್ಯಕ್ಟಿವೇಟ್ ಮಾಡಿಕೊಳ್ಳುವುದು ಹೇಗೆ?
ಭಾರತದಲ್ಲಿ ವೀಡಿಯೋ ಶೇರಿಂಗ್ ಆ್ಯಪ್ ಟಿಕ್​ಟಾಕ್​ ನಿಷೇಧವಾಗಿರುವ ಹಿನ್ನೆಲೆಯಲ್ಲಿ ಅದೇ ತೆರನ ಮೇಡ್ ಇನ್ ಇಂಡಿಯಾ ಆ್ಯಪ್ ಆದ ಮೋಜ್​ ಗೆ ಪ್ಲೇ ಸ್ಟೋರ್ ನಲ್ಲಿ 8 ನೇ ಸ್ಥಾನ ದೊರಕಿದೆ. ಮೋಜ್​, ಈವರೆಗೆ 100 ಮಿಲಿಯನ್ ಡೌನ್ಲೋಡ್​ಗಳನ್ನು ಕಂಡಿದೆ. ತನ್ನ ನಿಯಮಗಳ ಬಗೆಗಿನ ವಿವಾದಗಳ ನಡುವೆಯೂ ವಾಟ್ಸಾಪ್ ಒಟ್ಟಾರೆ 5ನೇ ಸ್ಥಾನದಲ್ಲಿ ಮುಂದುವರೆದಿದೆ.(ಏಜೆನ್ಸೀಸ್)
ಬಾಲಕಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಬೈಕ್​ ಸವಾರರ ಪತ್ತೆಗೆ ನೆರವಾಯ್ತು ಫೇಸ್​ಬುಕ್​ ಪೋಸ್ಟ್​!
ಜಲಸೇನೆಯ ಸೇಲರ್​ನನ್ನು ಜೀವಂತ ಸುಟ್ಟ ಅಪಹರಣಕಾರರು


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
