ವಿಜಯವಾಡ:ಅಮೆರಿಕದಲ್ಲಿ ವಾಸವಿರುವ ತೆಲುಗು ದಂಪತಿ ಎಚ್​1-ಬಿ ವೀಸಾ ಕೊಡಿಸುವುದಾಗಿ ನಂಬಿಸಿ ಆಂಧ್ರ ಪ್ರದೇಶದ ವಿದ್ಯಾರ್ಥಿಗಳಿಗೆ ಬರೋಬ್ಬರಿ 10 ಕೋಟಿ ರೂಪಾಯಿ ವಂಚಿಸಿರುವ ಆರೋಪ ಕೇಳಿಬಂದಿದೆ.
ವಂಚಕ ದಂಪತಿಯನ್ನು ಮುತ್ಯಾಲಾ ಸುನೀಲ್​ ಮತ್ತು ಪ್ರಣೀತಾ ಎಂದು ಗುರುತಿಸಲಾಗಿದೆ. ತಮ್ಮ ಕನ್ಸಲ್ಟೆನ್ಸಿಯಲ್ಲಿ ಎಚ್​1-ಬಿ ಮತ್ತು ಎಫ್​ 1 ವೀಸಾ ಒದಗಿಸುವುದಾಗಿ ಸುಮಾರು 30 ತೆಲುಗು ವಿದ್ಯಾರ್ಥಿಗಳಿಂದ ತಲಾ 25 ಸಾವಿರ ಡಾಲರ್​ (18,45,137 ರೂಪಾಯಿ) ಸಂಗ್ರಹಿಸಿರುವುದಾಗಿ ತಿಳಿದುಬಂದಿದೆ.
ಹಣವನ್ನು ಪಡೆದ ಬಳಿಕ ಸುನೀಲ್​ ತನ್ನ ತಂದೆ ಮುತ್ಯಾಲಾ ಸತ್ಯನಾರಾಯಣ ಬ್ಯಾಂಕ್​ ಖಾತೆಗೆ ವರ್ಗಾಯಿಸಿದ್ದಾನೆ. ಅಲ್ಲದೆ, ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನು ಸಹ ಸುನೀಲ್​ ಡೆಪಾಸಿಟ್​ ಮಾಡಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಶೌಚಕ್ಕೆಂದು ಕಚೇರಿಯಿಂದ ಹೊರಹೋದ ಸರ್ಕಾರಿ ಮಹಿಳಾ ಉದ್ಯೋಗಿಯ ದುರಂತ ಸಾವು..!
ವೀಸಾ ಪಡೆಯಲು ಹಣ ನೀಡಿ ವಂಚನೆಗೊಳಗಾಗಿದ್ದೇವೆ ಎಂಬುದು ವಿದ್ಯಾರ್ಥಿಗಳ ಅರಿವಿಗೆ ಬರುತ್ತಿದ್ದಂತೆ ಅವರಿಗೆ ಶಾಕ್​ ಆಗಿದೆ. ತಕ್ಷಣ ದಂಪತಿ ವಿರುದ್ಧ ಅಟ್ಲಾಂಟ ಹೋಮ್​​ಲ್ಯಾಂಡ್​ ಸೆಕ್ಯುರಿಟಿಯಲ್ಲಿ ದೂರು ದಾಖಲಿಸಿದ್ದಾರೆ.
ಸದ್ಯ ಸುನೀಲ್​ ಮತ್ತು ಪ್ರಣೀತಾ ನಾಪತ್ತೆಯಾಗಿದ್ದು, ಇಬ್ಬರು ಯೂರೋಪ್​ಗೆ ಹೋಗಿ ತಲೆಮರೆಸಿಕೊಂಡಿರುವ ಸಂಶಯ ವ್ಯಕ್ತವಾಗಿದೆ. ವಿದ್ಯಾರ್ಥಿಗಳ ದೂರಿನ ಆಧಾರದ ಮೇಲೆ ಇಂಟರ್ಪೋಲ್​ ಇಲಾಖೆ ದಂಪತಿಗೆ ಲುಕೌಟ್​ ನೋಟಿಸ್​ ನೀಡಿದೆ. ಇತ್ತ ಪಶ್ಚಿಮ ಗೋದಾವರಿ ಜಿಲ್ಲೆಯ ಸತ್ಯನಾರಾಯಣ ಸಹ ನಾಪತ್ತೆಯಾಗಿದ್ದಾರೆ.
ವಿದ್ಯಾರ್ಥಿಗಳಿಗೆ ಸಲಹೆ ನೀಡಿರುವ ಪೊಲೀಸರು ಯಾವುದೇ ಅಧಿಕೃತವಲ್ಲದ ಕನ್ಸಲ್ಟೆಂಟ್ಸ್​​ಗಳನ್ನು ನಂಬಬೇಡಿ ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ಹನಿಮೂನ್​ ಪ್ರವಾಸಕ್ಕೆ 1 ರೂಪಾಯಿ ಖರ್ಚು ಮಾಡಿಲ್ವಂತೆ ಕಾಜಲ್​ ದಂಪತಿ: ಐಷಾರಾಮಿ ಸೌಲಭ್ಯ ಫ್ರೀ ಸಿಕ್ಕಿದ್ಹೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 1 =
Remember me
