ವಿಜಯವಾಡ:ಬೆಂಗಳೂರಿನಲ್ಲಿ ನೆಲೆಸಿದ್ದ ಆಂಧ್ರ ಪ್ರದೇಶ ಮೂಲದ ಕುಟುಂಬವೊಂದು ಸೌದಿ ಅರೇಬಿಯಾದಿಂದ ಕುವೈತ್‌ಗೆ ಬರುತ್ತಿದ್ದಾಗ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ದುರಂತ ಸಾವಿಗೀಡಾಗಿದೆ.
ಅಪಘಾತದಲ್ಲಿ ಗೌಸ್​ಬಾಷಾ (35), ಅವರ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳು ಮೃತಪಟ್ಟಿದ್ದಾರೆ. ಇವರು ಆಂಧ್ರ ಪ್ರದೇಶದ ಅನ್ನಮೈಯಾ ಜಿಲ್ಲೆಯ ಮದನಪಲ್ಲಿ ಮೂಲದವರು. ಸೌದಿ ಅರೇಬಿಯಾದಿಂದ ಕುವೈತ್‌ಗೆ ಬರುತ್ತಿದ್ದಾಗ ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್​ಗೆ ಡಿಕ್ಕಿಯಾಗಿ ದುರಂತ ಸಂಭವಿಸಿದೆ.
ಗುರುವಾರ ಈ ಘಟನೆ ನಡೆದಿದೆ ಎಂದು ಆಂಧ್ರದ ರಾಜಂಪೇಟೆಯಲ್ಲಿರುವ ಅವರ ಸಂಬಂಧಿಕರು ತಿಳಿಸಿದ್ದಾರೆ. ರಾಜಂಪೇಟೆ ಪಟ್ಟಣದ ದೊಡ್ಡ ಮಸೀದಿಯ ಮಾಜಿ ಅಧ್ಯಕ್ಷ ದಿವಂಗತ ನೂರುದ್ದೀನ್ ಎಂಬುವರು ಗೌಸ್​ ಬಾಷಾ ಅವರ ಸೋದರ ಮಾವ. ಗೌಸ್​ ಬಾಷಾ ಈ ಹಿಂದೆ ಹತ್ತನೇ ತರಗತಿವರೆಗೆ ಅಲ್ಲೇ ಓದಿದ್ದರು. ಬಳಿಕ ಗೌಸಬಾಷಾ ಹುಟ್ಟೂರು ಮದನಪಲ್ಲಿಗೆ ತೆರಳಿದ್ದರು. ಅಲ್ಲಿ ಕೆಲವು ವರ್ಷಗಳವರೆಗೆ ಇದ್ದು ಮದುವೆಯಾದ ಬಳಿಕ ಕುಟುಂಬ ಸಮೇತ ಬೆಂಗಳೂರಿಗೆ ಹೋಗಿ ನೆಲೆಸಿದ್ದರು.
ಇದನ್ನೂ ಓದಿ:ಚಂದ್ರನಲ್ಲಿ ವಿಕ್ರಮ್​ ಲ್ಯಾಂಡರ್​ ಇಳಿದ ಜಾಗಕ್ಕೆ ‘ಶಿವಶಕ್ತಿ’ ಎಂದು ನಾಮಕರಣ: ಪ್ರಧಾನಿ ಮೋದಿ ಘೋಷಣೆ
ಮದುವೆಯ ನಂತರ ಗೌಸ್​ ಬಾಷಾ ಜೀವನ ನಿರ್ವಹಣೆಗಾಗಿ ಕೆಲಸಕ್ಕೆಂದು ಬೆಂಗಳೂರಿನಿಂದ ಕುವೈಟತ್​ಗೆ ತೆರಳಿ ಅಲ್ಲಿಯೇ ನೆಲೆಸಿದ್ದರು. ಕಾರಿನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗೌಸ್​ ಬಾಷಾ ಅವರ ಪತ್ನಿ ಹಾಗೂ ಇಬ್ಬರು ಪುತ್ರರು ಸಾವಿಗೀಡಾಗಿದ್ದಾರೆ.
ಇನ್ನು ಗೌಸ್ ಬಾಷಾ ಸಾವಿನ ಬಗ್ಗೆ ಅನುಮಾನವಿದೆ ಎಂದು ಅವರ ಹತ್ತಿರದ ಸಂಬಂಧಿಕರು ತಿಳಿಸಿದ್ದಾರೆ. ಆದರೆ, ರಸ್ತೆ ಅಪಘಾತ ನಡೆದಿರುವುದು ನಿಜ ಎಂದಿದ್ದಾರೆ. ಸತ್ತಿದ್ದಾನೆ ಎನ್ನಲಾದ ವ್ಯಕ್ತಿಗೆ ಕರೆ ಮಾಡಿದರೆ ಆತ ಕರೆ ಸ್ವೀಕರಿಸುತ್ತಿಲ್ಲ. ಇದರೊಂದಿಗೆ ಅನುಮಾನಗಳು ವ್ಯಕ್ತವಾಗುತ್ತಿವೆ. ಆದರೆ, ಮೃತದೇಹಗಳನ್ನು ನೋಡುವವರೆಗೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಗೌಸ್​ ಬಾಷಾ ಸಂಬಂಧಿಕರು ಹೇಳಿದ್ದಾರೆ. ಅಲ್ಲದೆ, ಕುವೈತ್‌ನಲ್ಲಿ ನಡೆದ ಈ ಅಪಘಾತದ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಂಡು ವಿಚಾರಣೆ ನಡೆಸಬೇಕೆಂದು ಕೋರಿದ್ದಾರೆ. ಮೃತದೇಹಗಳನ್ನು ಕೂಡಲೇ ಆಂಧ್ರಪ್ರದೇಶಕ್ಕೆ ತರುವಂತೆ ಒತ್ತಾಯ ಮಾಡಿದ್ದಾರೆ.(ಏಜೆನ್ಸೀಸ್​)
ನಾನೀಗ ರೆಡಿ, ಕರೆ ಮಾಡಿ ಭೇಟಿಯಾಗಿ ಆದ್ರೆ ಡಿನ್ನರ್​ಗೆ ಕರೆಯಬೇಡಿ! ನಟಿ ಕಿರಣ್ ರಾಥೋಡ್​ ಓಪನ್​ ಟಾಕ್​​

ಚಂದ್ರಯಾನ 3 ಯಶಸ್ವಿ: ಇಸ್ರೋ ಕಚೇರಿಗೆ ಭೇಟಿ ನೀಡಿ ವಿಜ್ಞಾನಿಗಳನ್ನು ಅಭಿನಂದಿಸಿದ ಪ್ರಧಾನಿ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
