ಅಮರಾವತಿ:ಆಗಸ್ಟ್ 1ರಿಂದ ತೆಲುಗು ಸಿನಿಮಾಗಳ ಶೂಟಿಂಗ್ ಸ್ಥಗಿತಗೊಳ್ಳಲಿವೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ. ಕರೊನೋತ್ತರ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂಥದ್ದೊಂದು ಕ್ರಮ ಜರುಗಲಿದೆ ಎಂಬುದು ತಿಳಿದು ಬಂದಿದೆ.
ಕೋವಿಡ್ ಪರಿಸ್ಥಿತಿ ಬಳಿಕ ಸಿನಿಮಾ ಆದಾಯ ಕುಸಿತಗೊಂಡಿದ್ದು, ಮತ್ತೊಂದೆಡೆ ನಿರ್ಮಾಣ ವೆಚ್ಚ ಹಲವು ಪಟ್ಟು ದುಬಾರಿ ಆಗಿರುವುದರಿಂದ ಚಿತ್ರೋದ್ಯಮದ ಪುನಶ್ಚೇತನ, ಪುನಾರಚನೆ ಹಿನ್ನೆಲೆಯಲ್ಲಿ ಈ ಚಿತ್ರೀಕರಣ ಸ್ಥಗಿತಗೊಳಿಸಲಿರುವುದು ಬೆಳಕಿಗೆ ಬಂದಿದೆ.
ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರತಿನಿಧಿಯೊಬ್ಬರು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಆರ್​​ಆರ್​ಆರ್​, ಕೆಜಿಎಫ್​-2 ಹಾಗೂ ಇನ್ನು ಕೆಲವೇ ಕೆಲವು ಬ್ಲಾಕ್​​ಬಸ್ಟರ್​ ಮೂವಿಗಳನ್ನು ಹೊರತುಪಡಿಸಿ ಉಳಿದ ಸಿನಿಮಾಗಳ ಆದಾಯದಲ್ಲಿ ಭಾರಿ ಕುಸಿತ ಕಂಡಿರುವುದರಿಂದ ನಿರ್ಮಾಪಕರೆಲ್ಲ ಸೇರಿ ಒಂದೆರಡು ದಿನಗಳಿಂದ ಸಭೆ ನಡೆಸಿ ಚರ್ಚಿಸಿದ್ದಾರೆ.
ಅಲ್ಲದೆ ಸಿನಿಮಾ ಬಿಡುಗಡೆ ಆದ 10 ವಾರಗಳವರೆಗೆ ಒಟಿಟಿಯಲ್ಲಿ ಹೊಸ ನಿನಿಮಾ ಬಿಡುಗಡೆ ಮಾಡದಿರುವ ಕುರಿತು ಕೂಡ ನಿರ್ಧಾರ ತಳೆಯಲಾಗಿದೆ. ಆದರೆ ಆ. 1ರಿಂದ ಚಿತ್ರೀಕರಣ ಸ್ಥಗಿತಗೊಳಿಸುವ ಕುರಿತು ಇನ್ನೊಂದೆರಡು ಸಭೆ ಬಳಿಕ ಅಂತಿಮ ನಿರ್ಧಾರ ಹೊರಹೊಮ್ಮಲಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮೇಘಸ್ಫೋಟದ ಹಿಂದೆ ವಿದೇಶಿ ಕೈವಾಡ!; ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 11 =
Remember me
