ಹೈದರಾಬಾದ್​​:ಇತ್ತೀಚೆಗಷ್ಟೇ ಟಾಲಿವುಡ್​ನ ಪ್ರಖ್ಯಾತ ನಟ ಮಹೇಶ್​ ಬಾಬು ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ಆ ನೋವು ಮಾಸುವ ಮುನ್ನವೇ ಮತ್ತೊಂದು ಆಘಾತಕ್ಕೆ ಒಳಗಾಗಿದ್ದಾರೆ. ಈಗ ಅವರ ತಂದೆ ಘಟ್ಟಮನೇನಿ ಕೃಷ್ಣ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೃಷ್ಣ, ತೆಲುಗು ಚಿತ್ರರಂಗ ಕಂಡ ಖ್ಯಾತ ನಟರಲ್ಲಿ ಒಬ್ಬರು. ಇವರು ನಿರ್ದೇಶಕರೂ ನಿರ್ಮಾಪಕರೂ ಹೌದು. ಸೂಪರ್​ ಸ್ಟಾರ್​ ಕೃಷ್ಣ ಐದು ದಶಕಗಳಲ್ಲಿ 350ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. 1989 ಕಾಂಗ್ರೆಸ್​ನಿಂದ ಸಂಸದರೂ ಆಗಿದ್ದರು.
ಇಂದು ಮಧ್ಯಾಹ್ನ ಮಹೇಶ್​ ಬಾಬು ತಂದೆಗೆ ಹೃದಯಾಘಾತವಾಗಿದ್ದು ಕೂಡಲೇ ಅವರನ್ನು ಹೈದ್ರಾಬಾದ್​ನ ಕಾಂಟಿನೆಂಟಲ್​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಧ್ಯಾಹ್ನ ಒಂದು ಘಂಟೆಗೆ ಹೃದಯಾಘಾತ ಆಗಿದ್ದು ಸಿಪಿಆರ್​​ ಮೂಲಕ ಅವರನ್ನು ಬದುಕುಳಿಸಲಾಯಿತು. ಪರಿಸ್ಥಿತಿ ಗಂಭೀರವಾಗಿರುವ ಕಾರಣ ಸದ್ಯಕ್ಕೆ ವೈದ್ಯರು ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸುತ್ತಿದ್ದಾರೆ. ವೈದ್ಯರ ಒಂದು ತಂಡ ಈಗ ಅವರ ಆರೋಗ್ಯವನ್ನು ನಿರಂತರವಾಗಿ ಗಮನಿಸುತ್ತಿದ್ದಾರೆ. ಈಗ ವೆಂಟಿಲೇಟರ್ ಸಹಾಯದಲ್ಲಿ ಕೃಷ್ಣ ಉಸಿರಾಡುತ್ತಿದ್ದಾರೆ.
ಈ ಬಗ್ಗೆ ಕಾಂಟಿನೆಂಟಲ್​ ಆಸ್ಪತ್ರೆಯ ಎಂ.ಡಿ ಪತ್ರ ಮುಖಾಂತರ ಮಾಹಿತಿ ನೀಡಿದ್ದು ‘ಶ್ರೀ ಘಟ್ಟಮನೇನಿ ಕೃಷ್ಣ ಅವರನ್ನು ಇಂದು ಬೆಳಗ್ಗೆ (ನ.14) ಹೃದಯಾಘಾತ ಉಂಟಾಗಿ 01.15 ಕ್ಕೆ ಹೈದರಾಬಾದ್‌ನ ಕಾಂಟಿನೆಂಟಲ್ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಕರೆತರಲಾಯಿತು. ವೈದ್ಯರು ತಕ್ಷಣವೇ ಸಿಪಿಆರ್​ ನಡೆಸಿದರು. 20 ನಿಮಿಷಗಳಲ್ಲಿ ಅವರನ್ನು ಪುನರುಜ್ಜೀವನಗೊಳಿಸಲಾಯಿತು. ಅದಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಐಸಿಯು ಗೆ ಸ್ಥಳಾಂತರಿಸಲಾಯಿತು. ಸದ್ಯ ಅವರು ಗಂಭೀರ ಸ್ಥಿತಿಯಲ್ಲಿದ್ದು, ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ. ಹೃದ್ರೋಗ ತಜ್ಞರು, ನರವಿಜ್ಞಾನಿಗಳು ಮತ್ತು ಕ್ರಿಟಿಕಲ್ ಕೇರ್ ತಜ್ಞರು ಸೇರಿದಂತೆ ಪರಿಣಿತರ ತಂಡ ಅವರ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ಅವರ ಸ್ಥಿತಿಯ ಬಗ್ಗೆ ಕುಟುಂಬಸ್ಥರು ಪರಿಶೀಲನೆ ನಡೆಸಿದ್ದಾರೆ’ ಎಂದು ಪತ್ರದಲ್ಲಿ ಬರೆದಿದ್ದಾರೆ.
A post shared by Telugucinema.com (@telugucinemacom)


ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fifteen − one =
Remember me
