ಹೈದರಾಬಾದ್​:ಪಾಕಿಸ್ತಾನದಲ್ಲಿ ಸರೆಯಾಗಿದ್ದ ಹೈದರಾಬಾದ್​ ಮೂಲದ ಯುವಕನನ್ನು ಬಹುದಿನಗಳ ಬಳಿಕ ಬಿಡುಗಡೆ ಮಾಡಲಾಗಿದ್ದು, ಸೋಮವಾರ ಹೈದರಾಬಾದ್​ ತಲುಪಿದ್ದಾನೆ.
ಪ್ರಶಾಂತ್​ 2017ರ ಏಪ್ರಿಲ್​ನಲ್ಲಿ ಹೈದರಾಬಾದ್​ನಿಂದ ಕಾಣೆಯಾಗಿದ್ದ. ತನ್ನ ಗರ್ಲ್​ಫ್ರೆಂಡ್​ ಭೇಟಿ ಮಾಡಲು ಪಾಕಿಸ್ತಾನ ಮಾರ್ಗವಾಗಿ ಸ್ವಿಡ್ಜರ್​​ಲ್ಯಾಂಡ್​ಗೆ ತೆರಳುವಾಗ ಪಾಕ್​ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದ. ಅಂದಿನಿಂದ ಪ್ರಶಾಂತ್​ ಪಾಕ್​ನಲ್ಲಿಯೇ ಸೆರೆಯಾಗಿದ್ದ.
ಇತ್ತೀಚೆಗಷ್ಟೇ ಪಾಕ್​ ಅಧಿಕಾರಿಗಳು ವಾಘಾ ಗಡಿಯ ಮೂಲಕ ಪ್ರಶಾಂತ್​ನನ್ನು ಭಾರತಕ್ಕೆ ಹಸ್ತಾಂತರಿಸಿದ್ದಾರೆ. ಪ್ರಶಾಂತ್​ ಹೈದರಬಾದ್​ನ ಸಾಫ್ಟ್​ವೇರ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಪಾಕಿಸ್ತಾನದಲ್ಲಿ ಮಗ ಸಿಲುಕಿಕೊಂಡಿದ್ದಾನೆ ಎಂದು ತಿಳಿದಾಗ ಪ್ರಶಾಂತ್​ ತಂದೆ ಬಾಬುರಾವ್​ ಸೈಬರ್​ಬಾದ್​ ಪೊಲೀಸ್​ ಆಯುಕ್ತ ಸಿಪಿ ಸಜ್ಜನರ್​ ಭೇಟಿ ಮಾಡಿ ಹಸ್ತಾಂತರ ಮಾಡಿಸಿಕೊಡುವಂತೆ 2019ರಲ್ಲಿ ಮನವಿ ಮಾಡಿದ್ದರು.
ಇದೀಗ ಪ್ರಶಾಂತ್​ ಪಾಕ್​ನಿಂದ ಬಿಡುಗಡೆಯಾಗಿ ಮರಳಿ ಗೂಡಿಗೆ ಸೇರಿರುವದರಿಂದ ಅವರ ಕುಟುಂಬಕ್ಕೆ ಬಹಳ ಸಂತೋಷ ವ್ಯಕ್ತವಾಗಿದ್ದು, ಮಗನನ್ನು ಬಹಳ ಖುಷಿಯಿಂದಲೇ ಬರ ಮಾಡಿಕೊಂಡಿದ್ದಾರೆ.(ಏಜೆನ್ಸೀಸ್​)
ಅರೆ ವೈದ್ಯಕಿಯ ಕೋರ್ಸ್​ ಮಾಡಿರುವಿರಾ? 28 ಹುದ್ದೆಗಳಿಗೆ ವೈದ್ಯಕೀಯ ವಿಜ್ಞಾನ ಸಂಸ್ಥೆಯಂದ ಆಹ್ವಾನ

ಆನಂದಯ್ಯನವರ ಆಯುರ್ವೇದ ಕೋವಿಡ್‌ ಔಷಧಕ್ಕೆ ಕೊನೆಗೂ ಸಂದಿತು ಜಯ- ಸಿಕ್ಕಿತು ಗ್ರೀನ್‌ ಸಿಗ್ನಲ್‌

ಲಾಕ್‌ಡೌನ್‌ನಲ್ಲಿ ರಸ್ತೆಯ ಮೇಲೆ ಏಲಿಯನ್‌? ಬೆಚ್ಚಿಬಿದ್ದ ವಾಹನ ಸವಾರರು: ವಿಡಿಯೋ ವೈರಲ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
