ಇಸ್ಲಾಮಾಬಾದ್‌:ಇಲ್ಲಿ ನಿರ್ಮಾಣವಾಗುತ್ತಿರುವ ಹಿಂದೂಗಳ ಮೊದಲ ದೇವಾಲಯದ ಗೋಡೆಯನ್ನು ನೆಲಸಮಗೊಳಸಿರುವ ಯುವಕನೊಬ್ಬ ಅದನ್ನು ಸಂಪೂರ್ಣವಾಗಿ ಚಿತ್ರೀಕರಿಸಿ, ತನ್ನ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾನೆ.
ಶ್ರೀಕೃಷ್ಣ ದೇವಾಲಯವನ್ನು ನಿರ್ಮಿಸಲು ಇಲ್ಲಿಯ ಹಿಂದೂಗಳು ಕಾಂಪೌಂಡ್‌ ಕಟ್ಟಿದ್ದರು. ಅದನ್ನು ನೆಲಸಮ ಮಾಡಿರುವ ಮಲಿಕ್‌ ಶಾನಿ ಆವಾನ್‌ ಎಂಬ ಯುವಕ, ಅಲ್ಹಾನನ್ನು ತೃಪ್ತಿಪಡಿಸಲು ಈ ಕಟ್ಟಡ ನೆಲಸಮ ಮಾಡಿದ್ದೇನೆ. ಇದರಿಂದ ತುಂಬಾ ಖುಷಿಯಾಗುತ್ತಿದೆ. ಇದನ್ನು ಮಾಡಲು ನೆರವಾದ ಅಲ್ಹಾನಿಗೆ ಕೃತಜ್ಞತೆಗಳು ಎನ್ನುವ ವಿಡಿಯೋ ಮಾಡಿದ್ದಾನೆ. ಈ ವಿಡಿಯೋಕ್ಕೆ ಸಂಗೀತದ ಹಿನ್ನೆಲೆ ನೀಡಿದ್ದಾನೆ.
‘ನಾನು ಪಾಕಿಸ್ತಾನ… ನನ್ನ ಮಕ್ಕಳನ್ನು ತೊಂದರೆಗೊಳಗಾಗಲು ನಾನು ಬಿಡಲಿಲ್ಲ’ ಎಂದು ಹೇಳಿರುವ ಹಾಡನ್ನು ಹಿನ್ನೆಲೆ ಗಾಯನವಾಗಿ ಇಟ್ಟಿರುವ ಈ ಯುವಕ, ಅದರಲ್ಲಿ ತಾನು ಕಟ್ಟಡ ನೆಲಸಮ ಮಾಡುತ್ತಿರುವುದನ್ನು ಚಿತ್ರೀಕರಿಸಿದ್ದಾನೆ.
https://www.facebook.com/VVani4U/videos/638370570221119/
ನನಗೆ ಇಂಥ ಘನಕಾರ್ಯ ಮಾಡಲು ತುಂಬಾ ಹೆಮ್ಮೆಯಾಗುತ್ತಿದೆ ಎಂದಿರುವ ಈ ಯುವಕ, ತನ್ನ ಇತರ ಸ್ನೇಹಿತರ ಜತೆಗೂಡಿ ವಿಡಿಯೋ ಮಾಡಿಕೊಂಡು ತನ್ನ ಸಾಹಸವನ್ನು ಕೊಂಡಾಡಿದ್ದಾನೆ.
ಇಸ್ಲಾಮಾಬಾದ್ ಮೂಲದ ಈ ಯುವಕ, ರಾವಲ್ಪಿಂಡಿಯಲ್ಲಿ ವಾಸಿಸುತ್ತಿದ್ದಾನೆ. ಪಾಕಿಸ್ತಾನದ ನ್ಯೂಸ್ ಚಾನೆಲ್ 99 ನ್ಯೂಸ್ ನಲ್ಲಿ ಕೆಲಸ ಮಾಡುವುದಾಗಿ ಈತನ ಫೇಸ್‌ಬುಕ್‌ನಲ್ಲಿ ಉಲ್ಲೇಖಿಸಲಾಗಿದೆ. ಹಿಂದೂ ದೇವಾಲಯವನ್ನು ನೆಲಸಮ ಮಾಡಲು ತನಗೆ ಸಹಕಾರ ನೀಡಿರುವವರಿಗೆ ಈಗ ಕೃತಜ್ಞತೆ ಸಲ್ಲಿಸಿದ್ದಾನೆ.(ಏಜೆನ್ಸೀಸ್‌)
ಪಂಡಿತರೊಬ್ಬರ ಐದು ಕೋಟಿ ಗುಳುಂ ಮಾಡಿ ಬಲೆಗೆ ಬಿದ್ದ ದೂರದರ್ಶನ ಮಾಜಿ ಉದ್ಯೋಗಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − four =
Remember me
