ಕೊಯಮತ್ತೂರ್ :ವಿಶ್ವಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಮನುಷ್ಯರನ್ನು ಬಲಿ ಪಡೆಯುತ್ತಿರುವ ಕರೊನಾ ಮಹಾಮಾರಿಯ ಹೊಡೆತದಿಂದ ಪಾರಾಗಲು, ಹಲವು ಧಾರ್ಮಿಕ ಆಚರಣೆಗಳಿಗೆ ಜನರು ಶರಣಾಗುತ್ತಿರುವುದು ಕಂಡುಬಂದಿದೆ. ಇದೀಗ ತಮಿಳುನಾಡಿನ ದೇವಾಲಯವೊಂದು ‘ಕರೊನಾ ದೇವಿ’ಯ ವಿಗ್ರಹವನ್ನು ಸ್ಥಾಪನೆ ಮಾಡಿ ಪೂಜೆ ಆರಂಭಿಸಿದೆ.
ಕೊಯಮತ್ತೂರ್​​ನ ಕಾಮಾಚ್ಚಿಪುರಿ ಅಧೀನಂ ದೇವಸ್ಥಾನವು ಒಂದೂವರೆ ಅಡಿ ಎತ್ತರದ ಕಪ್ಪು ಗ್ರಾನೈಟ್​ನಲ್ಲಿ ನಿರ್ಮಿಸಿರುವ ‘ಕರೊನಾ ದೇವಿ’ ವಿಗ್ರಹವನ್ನು ಪ್ರತಿಷ್ಠಾಪಿಸಿದೆ. ನಿನ್ನೆಯಿಂದ ಈ ದೇವಿಗೆ ಪೂಜೆ ಸಲ್ಲಿಸಲು ಆರಂಭಿಸಿದೆ. ದೇವಾಲಯದ ಆಡಳಿತ ಮಂಡಳಿ ಈ ದೇವತೆಗೆ ವಿಶೇಷ ಪೂಜೆಗಳೊಂದಿಗೆ 48 ದಿನಗಳ ಮಹಾಯಾಗವನ್ನು ನಡೆಸಲು ಉದ್ದೇಶಿಸಿದ್ದು, ಇದರಿಂದ ಕರೊನಾ ನಿವಾರಣೆಯಾಗವುದೆಂದು ಆಶಿಸಿದ್ದಾರೆ.
ತಮಿಳುನಾಡಿನ ಕೊಯಂಬತೂರ್​ನಲ್ಲಿ ಕಾಮಾಚ್ಚಿಪುರಿ ಅಧೀನಂ ದೇವಾಲಯದಲ್ಲಿ 'ಕರೋನಾ ದೇವಿ' ಪ್ರತಿಷ್ಠಾಪನೆ, ಪೂಜೆ.pic.twitter.com/AD2tWOddUN
— Vijayavani (@VVani4U)May 20, 2021

ಮಾರಕ ಕಾಯಿಲೆಗಳಿಂದ ಜನರನ್ನು ರಕ್ಷಿಸಲು ಈ ರೀತಿ ದೇವತೆಗಳನ್ನು ಸೃಷ್ಟಿಸಿ ಅವರಿಗೆ ಪೂಜೆ ಮಾಡುವ ಪರಂಪರೆ ತಮಿಳುನಾಡಿಗೆ ಹೊಸದೇನಲ್ಲ. ಕೊಯಮತ್ತೂರಿನಲ್ಲಿ ಪ್ಲೇಗ್ ಮಾರಿಯಮ್ಮನ್ ದೇವಾಲಯ ಈಗಾಗಲೇ ಇದಕ್ಕೆ ಉದಾಹರಣೆಯಾಗಿದೆ ಎಂದು ದೇವಾಲಯದ ನಿರ್ವಾಹಕ ಆನಂದ ಭಾರತಿ ಹೇಳಿದ್ದಾರೆ.
ತಮಿಳುನಾಡಿನಲ್ಲಿ ಕಳೆದ 24 ಗಂಟೆಗಳಲ್ಲಿ 34,875 ಹೊಸ ಕರೊನಾ ಪ್ರಕರಣಗಳು ವರದಿಯಾಗಿದ್ದು, ಈವರೆಗೆ 16,99,225 ಜನರು ಕರೊನಾ ಸೋಂಕಿಗೆ ಒಳಗಾಗಿದ್ದಾರೆ. ನಿನ್ನೆ 365 ಕರೊನಾ ಸಂಬಂಧಿತ ಸಾವುಗಳು ಸಂಭವಿಸಿದ್ದು, ರಾಜ್ಯದಲ್ಲಿ ಒಟ್ಟು ಮೃತರ ಸಂಖ್ಯೆಯು 18,734ಕ್ಕೆ ಏರಿದೆ.(ಏಜೆನ್ಸೀಸ್)
ಸ್ಯಾನಿಟೈಸರ್​ನಿಂದ ಮದ್ಯ ತಯಾರಿ ! ಆರು ಜನರ ಬಂಧನ

ಲಸಿಕೆಯಿಂದ ಪ್ರಾಣರಕ್ಷಣೆ : ಅಪೋಲೋ ಜೆಎಂಡಿ ಡಾ. ಸಂಗೀತ ರೆಡ್ಡಿ

ರಾಜಭವನದ ಮುಂದೆ ಕುರಿ ಮಂದೆ ಜೊತೆ ಪ್ರತಿಭಟನೆ; ನೋಡುತ್ತಾ ನಿಂತ ಪೊಲೀಸರು !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 4 =
Remember me
