ನವದೆಹಲಿ:ದೇಶದಲ್ಲಿ 10 ಫ್ಲೀಟ್ ಮೋಡ್ ಅಣುವಿದ್ಯುತ್ ಸ್ಥಾವರ ಸ್ಥಾಪನೆ ಕಾರ್ಯಕ್ಕೆ ವೇಗ ನೀಡುವ ನಿರ್ಣಯವನ್ನು ಸರ್ಕಾರ ತೆಗೆದುಕೊಂಡಿದೆ. ಇದರಂತೆ, ಇನ್ನು 3 ವರ್ಷದ ಅವಧಿಯಲ್ಲಿ 10 ಅಣು ವಿದ್ಯುತ್ ಸ್ಥಾವರ ಘಟಕ ಸ್ಥಾಪಿಸುವುದಕ್ಕೆ ಕ್ರಮ ತೆಗೆದು ಕೊಂಡಿದೆ. ಆ ಮೂಲಕ ವೆಚ್ಚ ಮತ್ತು ನಿರ್ಮಾಣ ಅವಧಿ ಕಡಿಮೆ ಮಾಡುವ ಪ್ರಯತ್ನಕ್ಕೆ ಅದು ಮುಂದಾಗಿದೆ.
ಕರ್ನಾಟಕದ ಕೈಗಾ ಅಣು ವಿದ್ಯುತ್ ಸ್ಥಾವರ 2023ರಲ್ಲಿ ಆರಂಭವಾಗಲಿದೆ. 700 ಮೆಗಾವಾಟ್ ಸಾಮರ್ಥ್ಯದ ಈ ಸ್ಥಾವರದ 5 ಮತ್ತು 6ನೇ ಘಟಕದ ಫಸ್ಟ್ ಪೋರ್ ಆಫ್ ಕಾಂಕ್ರೀಟ್ (ಎಫ್​ಪಿಸಿ) ಸಿಗ್ನಲ್ 2023ರಿಂದ ಶುರುವಾಗಲಿದೆ. ಇದು ಪ್ರಾಜೆಕ್ಟ್ ಸೈಟ್​ನಲ್ಲಿ ಉತ್ಖನನವೂ ಸೇರಿ ಪ್ರಾಜೆಕ್ಟ್ ಪೂರ್ವ ಚಟುವಟಿಕೆಯನ್ನು ಒಳಗೊಂಡಿದೆ.
ಗೋರಖಪುರ ಹರಿಯಾಣ ಅಣು ವಿದ್ಯುತ್ ಪರಿಯೋಜನೆಯ 3 ಮತ್ತು 4ನೇ ಘಟಕದ ಎಫ್​ಪಿಸಿ, ಮಹಿ ಬಾಣಸವಾರ ರಾಜಸ್ಥಾನ್ ಅಟೋಮಿಕ್ ಪವರ್ ಪ್ರಾಜೆಕ್ಟ್ಸ್ ನ 1ರಿಂದ 4ರ ತನಕದ ಘಟಕಗಳ ಎಫ್​ಪಿಸಿ 2024ರಲ್ಲಿ, ಚುಕ್ತಾ ಮಧ್ಯಪ್ರದೇಶ ಅಟೋಮಿಕ್ ಪವರ್ ಪ್ರಾಜೆಕ್ಟ್ ನ ಘಟಕ 1 ಮತ್ತು 2ನೇ ಘಟಕಗಳು 2025ರಲ್ಲಿ ಎಫ್​ಪಿಸಿ ನೆರವೇರಲಿದೆ ಎಂದು ಡಿಪಾರ್ಟ್​ವೆುಂಟ್ ಆಫ್ ಆಟೋಮಿಕ್ ಎನರ್ಜಿ (ಡಿಎಇ) ಅಧಿಕಾರಿಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಸಂಸದೀಯ ಸಮಿತಿಗೆ ತಿಳಿಸಿದ್ದಾರೆ.
ವೆಚ್ಚ ಕಡಿತ ಇದೇ ಮೊದಲು:ಮಹತ್ವಾಕಾಂಕ್ಷೆ ಯೋಜನೆಯ ವೆಚ್ಚ ತಗ್ಗಿಸುವುದರ ಜತೆಗೆ ನಿರ್ಮಾಣ ಅವಧಿ ಕಡಿಮೆ ಮಾಡಿ ಕೆಲಸದ ವೇಗವನ್ನು ಹೆಚ್ಚಿಸುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಇದೇ ಮೊದಲ ಬಾರಿಗೆ ಈ ರೀತಿ ಪ್ರಯತ್ನಕ್ಕೆ ಕೈ ಹಾಕಿ ರುವ ಸರ್ಕಾರ 10 ಅಣು ವಿದ್ಯುತ್ ಸ್ಥಾವರಗಳ ನಿರ್ವಣಕ್ಕೆ ವೇಗ ನೀಡುವ ಪ್ರಸ್ತಾವನೆಯನ್ನು ಅಂಗೀಕರಿಸಿದೆ.
ಪಿಎಚ್​ಡಬ್ಲ್ಯುಆರ್​ ಇತಿಹಾಸ:ರಾಜಸ್ಥಾನದ ರಾವತ್​ಭಾಟಾದಲ್ಲಿ 1960ರ ದಶಕದಲ್ಲಿ ದೇಶದ ಮೊದಲ ಪಿಎಚ್​ಡಬ್ಲು್ಯಆರ್​ನ್ನು ಕೆನಡಾದ ಸಹ ಯೋಗದಲ್ಲಿ ಸ್ಥಾಪಿಸಲಾಗಿತ್ತು. 220 ಮೆಗಾವಾಟ್ ಸಾಮರ್ಥ್ಯದ ಘಟಕ ಇದಾಗಿತ್ತು. 1974ರ ಶಾಂತಿಯುತ ಅಣುಪರೀಕ್ಷೆ ಕಾರಣ ಕೆನಡಾ ವಿದ್ಯುತ್ ಘಟಕಕ್ಕೆ ನೀಡಿದ್ದ ನೆರವು ಹಿಂಪಡೆಯಿತು. ಇದಾಗಿ ಭಾರತ ಕಾಲಾನುಕ್ರಮದಲ್ಲಿ ದೇಶೀಯವಾಗಿಯೇ ಇಂತಹ14 ಘಟಕಗಳನ್ನು ಸ್ಥಾಪಿಸಿದೆ. ಇವುಗಳ ಸಾಮರ್ಥ್ಯವನ್ನು 540 ಮೆಗಾವಾಟ್​ಗೆ ಏರಿಸಲಾಗಿದೆ. ಈಗ 700 ಮೆಗಾವಾಟ್ ಸಾಮರ್ಥ್ಯದ ಘಟಕಗಳತ್ತ ಗಮನಹರಿಸಿದೆ.
ಸ್ವದೇಶಿ ಪಿಎಚ್​ಡಬ್ಲ್ಯುಆರ್​:ಕೇಂದ್ರ ಸರ್ಕಾರವು 2017ರ ಜೂನ್​ನಲ್ಲಿ ತಲಾ 700 ಮೆಗಾವಾಟ್ ಸಾಮರ್ಥ್ಯದ 10 ಪ್ರೆಶರೈಸ್ಡ್ ಹೆವಿ ವಾಟರ್ ರಿಯಾಕ್ಟರ್ (ಪಿಎಚ್​ಡಬ್ಲು್ಯಆರ್)ಗಳನ್ನು ದೇಶೀಯವಾಗಿಯೇ ಅಭಿವೃದ್ಧಿ ಪಡಿಸಿ ನಿರ್ಮಾಣ ಮಾಡುವ ಪ್ರಸ್ತಾವನೆಗೆ ಅನುಮತಿ ನೀಡಿತ್ತು. ಇದಕ್ಕೆ 1.05 ಲಕ್ಷ ಕೋಟಿ ರೂಪಾಯಿ ವೆಚ್ಚ ತಗುಲುವುದು ಎಂದು ಅಂದಾಜಿಸಲಾಗಿತ್ತು. ಪಿಎಚ್​ಡಬ್ಲು್ಯಆರ್​ಗಳಲ್ಲಿ ಸಾಮಾನ್ಯವಾಗಿ ನೈಸರ್ಗಿಕ ಯುರೇನಿಯಂ ಅನ್ನು ಇಂಧನವಾಗಿ ಮತ್ತು ಹೆವಿ ವಾಟರ್ ಅನ್ನು ಮೋಡರೇಟರ್ ಆಗಿ ಬಳಸಲಾಗುತ್ತದೆ.
ಐದು ವರ್ಷದ ಗಡುವು:ಫ್ಲೀಟ್ ಮೋಡ್​ನಲ್ಲಿ ಒಂದು ಅಣು ವಿದ್ಯುತ್ ಘಟಕ ಸ್ಥಾಪಿಸುವುದಕ್ಕೆ ಎಫ್​ಪಿಸಿ ಹಾಕಿದಲ್ಲಿಂದ ಹಿಡಿದು ಐದು ವರ್ಷಗಳ ಗಡುವು ನಿಗದಿಪಡಿಸಲಾಗಿದೆ. 10 ಘಟಕಗಳ ಸ್ಥಾಪನೆಗೆ ಅಗತ್ಯವಾದ ಸ್ಟೀಮ್ ಜನರೇಟರ್, ಎಸ್​ಎಸ್304ಎಲ್ ಲ್ಯಾಟ್ಟೀಸ್ ಟ್ಯೂಬ್ ಮತ್ತು ಎಂಡ್ ಶೀಲ್ಡ್ ಪ್ಲೇಟ್ಸ್, ಪ್ರೆಶರೈಸರ್ ಫೋರ್ಜಿಂಗ್, ಬ್ಲೀಡ್ ಕಂಡೆನ್ಸರ್ ಸೇರಿ ಅಗತ್ಯ ವಸ್ತುಗಳ ಖರೀದಿ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಸ್ತುತ ಸ್ಥಿತಿಗತಿ:ದೇಶದಲ್ಲಿ ಒಟ್ಟು 6780 ಮೆಗಾ ವಾಟ್ ಸಾಮರ್ಥ್ಯದ 22 ರಿಯಾಕ್ಟರ್​ಗಳು ಕಾರ್ಯಾಚರಿಸುತ್ತಿವೆ. ಗುಜರಾತ್​ನ ಕಾಕ್ರಪಾರದ 700 ಮೆಗಾವಾಟ್ ರಿಯಾಕ್ಟರ್ ಅನ್ನು ಕಳೆದ ವರ್ಷ ಜನವರಿ 10ಕ್ಕೆ ಗ್ರಿಡ್​ಗೆ ಜೋಡಿಸಲಾಗಿತ್ತು. ಇದು ಇನ್ನೂ ವಾಣಿಜ್ಯ ಕಾರ್ಯಾ ಚರಣೆಯನ್ನು ಆರಂಭಿಸಿಲ್ಲ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × 1 =
Remember me
