ನವದೆಹಲಿ:ರೋಗಿಯೊಬ್ಬರಿಗೆ ಪ್ಲೇಟ್​​ಲೆಟ್ಸ್ ಕೊಡುವ ಬದಲು ಮೂಸಂಬಿ ಜ್ಯೂಸ್​ ಕೊಟ್ಟಿದ್ದರಿಂದ ಸಾವಿಗೀಡಾದ ಪ್ರಕರಣದ ಬೆನ್ನಿಗೇ ಕರಾಳ ದಂಧೆಯೊಂದು ಬಯಲಾಗಿದೆ. ಮಾತ್ರವಲ್ಲ, ಇದಕ್ಕೆ ಸಂಬಂಧಿಸಿದಂತೆ ಹತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಖಾಸಗಿ ಆಸ್ಪತ್ರೆಯೊಂದರಲ್ಲಿ ಡೆಂಘೆಯಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ಪ್ಲೇಟ್​ಲೆಟ್ಸ್​ ಎಂದು ಹೇಳಿ ಮೂಸಂಬಿ ಜ್ಯೂಸ್​ ದೇಹಕ್ಕೆ ಸೇರಿಸಿದ್ದರು ಎನ್ನಲಾಗಿದ್ದು, ಆ ರೋಗಿ ಸಾವಿಗೀಡಾಗಿದ್ದ ಪ್ರಕರಣ ನಡೆದಿದೆ. ಇದರ ಬೆನ್ನಿಗೆ ಮತ್ತೊಂದು ಆತಂಕದ ವಿಷಯ ಬಹಿರಂಗಗೊಂಡಿದೆ.
ನಕಲಿ ಪ್ಲೇಟ್​ಲೆಟ್ ಮಾರಾಟದ ಆರೋಪದ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಪ್ರಯಾಗ್​ರಾಜ್​ನ ಪೊಲೀಸರು ಹತ್ತು ಮಂದಿಯನ್ನು ಬಂಧಿಸಿದ್ದು, ಅವರಿಂದ ಆ ಪ್ಯಾಕೆಟ್​​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಪರ್ಶ ಹಾಗೂ ಬಣ್ಣ ಎರಡರಲ್ಲೂ ಈ ಬ್ಲಡ್​ ಪ್ಲಾಸ್ಮಾ ಮೂಸಂಬಿ ಜ್ಯೂಸ್​ಗೆ ಸಾಮೀಪ್ಯ ಹೊಂದಿರುವುದರಿಂದ ಅದನ್ನು ಪ್ಲೇಟ್​ಲೆಟ್​ ಎಂದು ಸುಳ್ಳು ಹೇಳಿ ಮಾರಾಟ ಮಾಡುವ ದಂಧೆಯೊಂದು ನಡೆಯುತ್ತಿದೆ ಎನ್ನಲಾಗಿದ್ದು, ಪೊಲೀಸರು ಈ ಕುರಿತು ಹೆಚ್ಚಿನ ತನಿಖೆಗೆ ಇಳಿದಿದ್ದಾರೆ.
ಇದೇ ನಮಗೆ ಅಪ್ಪು ಕಲಿಸಿ ಹೋದ ದೊಡ್ಡ ಪಾಠ: ಏನೆಂದರು ಕ್ರೇಜಿಸ್ಟಾರ್ ರವಿಚಂದ್ರನ್?

‘ಕಾಂತಾರ’ದಿಂದ ಮತ್ತೊಂದು ದಾಖಲೆ: ಇದುವರೆಗೂ ಕನ್ನಡ ಸಿನಿಮಾ ಬಿಡುಗಡೆ ಆಗದ ಪಟ್ಟಣದಲ್ಲಿ ಪ್ರದರ್ಶನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 6 =
Remember me
