ಲಖನೌ:ಈಗಿನ ಕಾಲದಲ್ಲಿ 10 ರೂಪಾಯಿ ಕಳೆದುಕೊಂಡರೂ ಸಿಗಲು ಸಾಧ್ಯವೇ ಇಲ್ಲ. ಅಂತಹದರಲ್ಲಿ ಬಾಲಕನೊಬ್ಬ ತನಗೆ ಸಿಕ್ಕ 5 ಲಕ್ಷ ರೂ. ಹಣವಿದ್ದ ಬ್ಯಾಗನ್ನು ಮರಳಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾನೆ.
ಉತ್ತರ ಪ್ರದೇಶದ ಬರೇಲಿಯಲ್ಲಿ ವಾಸವಾಗಿರುವ ಬೈಕ್​ ಮೆಕ್ಯಾನಿಕ್​ ಮಗನಾಗಿರುವ ಅಬ್ದುಲ್​ ಹನ್ನಾನ್​ ಎಂಬ ಬಾಲಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆಟೋರಿಕ್ಷದಿಂದ ಒಂದು ಬ್ಯಾಗ್​ ಕೆಳಬೀಳುತ್ತೆ. ತಕ್ಷಣ ಬ್ಯಾಗನ್ನು ಎತ್ತಿ ಆಟೋದಲ್ಲಿದ್ದವರಿಗೆ ತಲುಪಿಸಲು ಓಡುತ್ತಾನೆ. ಅಷ್ಟರಲ್ಲೇ ಆಟೋ ತುಂಬಾ ದೂರ ಹೋಗಿರುತ್ತದೆ.
ನಂತರ ಬ್ಯಾಗನ್ನು ತನ್ನ ತಾಯಿಗೆ ತಂದುಕೊಟ್ಟಿದ್ದಾನೆ. ಅದರಲ್ಲಿ ಹಣವಿರುವುದನ್ನು ನೋಡಿ ಹತ್ತಿರದ ಮಸೀದಿಗೆ ತಲುಪಿಸಿದ್ದಾರೆ. ಮಸೀದಿಯಿಂದ ಬ್ಯಾಗ್​ ಕಳುವಾಗಿರುವ ಬಗ್ಗೆ ಎಲ್ಲೆಡೆ ಮಾಹಿತಿ ತಲುಪಿಸಲಾಗುತ್ತದೆ. ಒಂದು ಗಂಟೆಯೊಳಗೆ ನಿಜವಾದ ವಾರಸುದಾರರು ಬಂದು ಹಣವಿದ್ದ ಬ್ಯಾಗನ್ನು ಸ್ವೀಕರಿಸಿ. ಬಾಲಕನಿಗೆ ಬಹುಮಾನವನ್ನು ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − seven =
Remember me
