ಭೋಪಾಲ್​:ಈಜುವಾಗ ಮೊಸಳೆಯೊಂದು ವ್ಯಕ್ತಿಯೊಬ್ಬನನ್ನು ನೀರಿನೊಳಗೆ ಎಳೆದೊಯ್ದ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್​ ಆಗಿದೆ. ಮೊಸಳೆ ದವಡೆಗೆ ಸಿಲುಕಿದ ವ್ಯಕ್ತಿಯ ಪಕ್ಕದಲ್ಲೇ ಇದ್ದ ಆತನ ಸ್ನೇಹಿತನ ಸಾಹಸಿ ಕಾರ್ಯವನ್ನು ಈ ಕ್ಷಣದಲ್ಲಿ ಮೆಚ್ಚಲೇಬೇಕಾಗಿದೆ.
ಆತಂಕಕಾರಿ ಘಟನೆ ಮಧ್ಯಪ್ರದೇಶ ರಾಜಧಾನಿ ಭೋಪಾಲ್​ನಲ್ಲಿರುವ ಕಲಿಯಾಸೋಟ್ ಅಣೆಕಟ್ಟಿನಲ್ಲಿ ನಡೆದಿದೆ. 30 ವರ್ಷದ ಅಮಿತ್​ ಜಾತವ್​ ಎಂಬವರು ಸ್ನೇಹಿತನ ಜತೆ ಈಜುವಾಗ ಮೊಸಳೆ ಎಳೆದಾಡಿ ಬಲ ತೊಡೆಯ ಭಾಗವನ್ನು ಗಾಯಗೊಳಿಸಿದೆ. ಮೊಸಳೆ ದಾಳಿಯನ್ನು ಮನಗಂಡ ಸ್ನೇಹಿತ ಗಜೇಂದ್ರ ಯಾದವ್​, ಸೆಲ್ಫಿ ಸ್ಟಿಕ್​ನಿಂದ ಮೊಸಳೆಯನ್ನು ದೂರಷ್ಟು ತಳ್ಳಿ ಅಮಿತ್​ ಜಾತವ್​ ಪ್ರಾಣವನ್ನು ಉಳಿಸಿದ್ದಾರೆ.ಇದನ್ನೂ ಓದಿ:ಶಬರಿಮಲೆ ದೇಗುಲ ಪ್ರವೇಶ ಅನಿರ್ದಿಷ್ಟಾವಧಿಗೆ ಮುಂದೂಡಿಕೆ; 19ರ ಉತ್ಸವ ರದ್ದುಗೊಳಿಸಿದ ಸರ್ಕಾರ
ತಕ್ಷಣ ಜಾತವ್​ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಬಲ ತೊಡೆಗೆ 30 ಹೊಲಿಗೆಯನ್ನು ಹಾಕಲಾಗಿದೆ. ಅಂದಹಾಗೆ ಜಾತವ್​ ಅಂಗಡಿಯೊಂದರಲ್ಲಿ ಕೆಲಸದಲ್ಲಿದ್ದಾರೆ. ಲಾಕ್​ಡೌನ್​ ಬೇಸರ ಹಿನ್ನೆಲೆಯಲ್ಲಿ ಸ್ನೇಹಿತ ಯಾದವ್​ರೊಟ್ಟಿಗೆ ಈಜಲು ಡ್ಯಾಂಗೆ ತೆರಳಿದ್ದರು. ವಿಡಿಯೋ ಮಾಡುತ್ತಾ, ಈಜುತ್ತಾ ನೀರಿನಲ್ಲಿ ಆಟ ಆಡುವಾಗ ಮೊಸಳೆ ಏಕಾಏಕಿ ಜಾತವ್​ ಮೇಲೆ ದಾಳಿ ನಡೆಸಿದೆ. ನೀರಿನಾಳಕ್ಕೆ ದಿಢೀರನೇ ಎಳೆದೊಯ್ದಿದೆ.
ಈ ಬಗ್ಗೆ ಮಾತನಾಡಿರುವ ಜಾತವ್​ ನನ್ನ ಸ್ನೇಹಿತ ಯಾದವ್​ ಇರದಿದ್ದರೆ ನಾನು ಖಂಡಿತ ಬದುಕುತ್ತಿರಲಿಲ್ಲ. ಮೊಸಳೆ ಸುಮಾರು 6 ಅಡಿ ಇತ್ತು. ಬಹಳ ಆಳದವರೆಗೆ ಎಳೆದೊಯ್ಯಿತು. ಬಳಿಕ ನನ್ನ ಸ್ನೇಹಿತ ನೆರವಿಗೆ ಧಾವಿಸಿದ ಎಂದು ಹೇಳಿಕೊಂಡಿದ್ದಾರೆ.
ಭೂಪಾಲ್​ನಲ್ಲಿ ಕಳೆದ ಒಂಬತ್ತು ವರ್ಷದಲ್ಲಿ 3ನೇ ಬಾರಿ ನಡೆದ ಮೊಸಳೆ ದಾಳಿ ಇದಾಗಿದೆ. 2011ರಲ್ಲಿ 17 ವರ್ಷದ ಸಂಜಯ್​ ಸಿಂಗ್​ ಎಂಬ ಬಾಲಕನ ಮೇಲೆ ಮೊಸಳೆ ದಾಳಿ ಮಾಡಿ ಕೊಂದು ತಿಂದಿತ್ತು. ಈ ವೇಳೆ ಸಂಜಯ್​ ಸಿಂಗ್​ ಸ್ನೇಹಿತನೊಂದಿಗೆ ಆಟವಾಡುತ್ತಿದ್ದ. 2014ರ ಸೆಪ್ಟೆಂಬರ್​ನಲ್ಲಿ ಮೀನು ಹಿಡಿಯುತ್ತಿದ್ದ 46 ವರ್ಷದ ವ್ಯಕ್ತಿಯ ಮೇಲೆ ಮೊಸಳೆ ದಾಳಿ ಮಾಡಿತ್ತು.(ಏಜೆನ್ಸಿಸ್​)
https://www.facebook.com/VVani4U/videos/480860576043749/
ಚಿರು ಮೇಲಿನ ಮೇಘನಾ ಪ್ರೀತಿ ಎಂಥದ್ದು ಎಂಬುದಕ್ಕೆ ಆ ಒಂದು ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿದೆ ಉತ್ತರ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen + 6 =
Remember me
