|ಕೀರ್ತಿನಾರಾಯಣ ಸಿ.ಬೆಂಗಳೂರು
ಕರೊನಾದಿಂದಾಗಿ ಇಡೀ ವಿಶ್ವ ಸ್ತಬ್ಧವಾಗಿರುವ ಸಂದರ್ಭದಲ್ಲಿ ಭಯೋತ್ಪಾದನಾ ಸಂಘಟನೆಗಳು ಆನ್​ಲೈನ್ ಮೂಲಕ ಹೊಸ ಸದಸ್ಯರ ನೇಮಕ ಪ್ರಕ್ರಿಯೆಯನ್ನು ಸದ್ದಿಲ್ಲದಂತೆ ಮುಂದುವರಿಸಿರುವ ಆಘಾತಕಾರಿ ಮಾಹಿತಿ ಬಯಲಾಗಿದೆ. ಮದ್ದುಗುಂಡಿನ ಸದ್ದು ನಿಲ್ಲಿಸಿ ಮೌನ ಕಾರ್ಯಾಚರಣೆ ಮೂಲಕವೇ ಉಗ್ರರು ಸಂಘಟನೆಯ ಶಕ್ತಿ ಬಲಪಡಿಸುತ್ತಿರುವ ಸಂಗತಿಯನ್ನು ಇತ್ತೀಚೆಗೆ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಆಯೋಜಿಸಿದ್ದ ಬ್ರಿಕ್ಸ್ ಸೆಮಿನಾರ್ ಹೊರಗೆಡವಿದೆ. ‘ಉಗ್ರರಿಂದ ಇಂಟರ್ನೆಟ್ ದುರ್ಬಳಕೆ’ ವಿಚಾರವಾಗಿ ನಡೆದ ಸೆಮಿನಾರ್​ನಲ್ಲಿ ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾದ ಭದ್ರತಾ ಅಧಿಕಾರಿಗಳು ಭಾಗಿಯಾಗಿದ್ದರು. ಈ ವೇಳೆ ನಡೆದ ವಿಚಾರ ವಿನಿಮಯದಲ್ಲಿ ಉಗ್ರರ ರಹಸ್ಯ ನೇಮಕಾತಿ ಪ್ರಕ್ರಿಯೆ ಜಾಡು ಬಯಲಾಗಿದೆ.
2019-20ರ ಗ್ಲೋಬಲ್ ಟೆರರಿಸಂ ಇಂಡೆಕ್ಸ್ (ಜಿಟಿಐ) ವರದಿ ಪ್ರಕಾರ ಉಗ್ರ ದಾಳಿ ಹಾಗೂ ಅದರಿಂದಾದ ಸಾವಿನ ಸಂಖ್ಯೆ ಸತತ 5 ವರ್ಷಗಳಿಂದ ಭಾರತ ಸೇರಿ ವಿಶ್ವದ 103 ರಾಷ್ಟ್ರಗಳಲ್ಲಿ ಕಡಿಮೆಯಾಗಿದೆ. 2019ರಲ್ಲಿ 63 ದೇಶಗಳಲ್ಲಿ ಕನಿಷ್ಠ ಒಬ್ಬರು ಭಯೋತ್ಪಾದನಾ ದಾಳಿಗೆ ತುತ್ತಾಗಿದ್ದಾರೆ. ಇದು 2013ರ ನಂತರ ದಾಖಲಾದ ಅತೀ ಕಡಿಮೆ ಸಾವಿನ ಪ್ರಮಾಣವೆಂದು ಉಲ್ಲೇಖಿಸಲಾಗಿದೆ.
3 ರಾಜ್ಯಗಳಲ್ಲಿ ಸಕ್ರಿಯ:2021ರ ಮಾ.15ರಂದು ಎನ್​ಐಎ ಅಧಿಕಾರಿಗಳ ತಂಡ, ಕರ್ನಾಟಕ, ಕೇರಳ ಹಾಗೂ ದೆಹಲಿಯ 11 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲಿಸಿದಾಗ ಶಂಕಿತ ಉಗ್ರ ಮಹಮದ್ ಅಮೀನ್ ಅಲಿಯಾಸ್ ಅಬು ಯಾಯಾ, ಸಾಮಾಜಿಕ ಜಾಲತಾಣದಲ್ಲಿ ಹಿಂಸಾತ್ಮಕ ಜಿಹಾದಿ ಸಂದೇಶ ಹರಿಬಿಟ್ಟು ಐಸಿಸ್​ಗೆ ಯುವಕರ ನೇಮಕಾತಿ ಮಾಡುತ್ತಿರುವ ಸಂಗತಿ ದೃಢಪಟ್ಟಿತ್ತು. ಟೆಲಿಗ್ರಾಂ, ಹೂಪ್ ಮತ್ತು ಇನ್​ಸ್ಟಾಗ್ರಾಂನಲ್ಲಿ ಖಾತೆ ತೆರೆದು ಜಿಹಾದಿ ತತ್ವಗಳನ್ನು ಬೋಧಿಸಿ ಯುವಕರನ್ನು ಐಸಿಸ್​ನತ್ತ ಸೆಳೆಯುತ್ತಿದ್ದ. ಉಗ್ರವಾದದ ಬಗ್ಗೆ ಚಾಟ್ ಮಾಡಿರುವ ಕುರಿತು ಎನ್​ಐಎಗೆ ಸಾಕ್ಷ್ಯ ಸಿಕ್ಕಿದೆ. 7 ಶಂಕಿತರು ಹಾಗೂ ಅಪರಿಚಿತರ ವಿರುದ್ಧ ಎಫ್​ಐಆರ್ ದಾಖಲಿಸಿ ಬಂಧನ ಕಾರ್ಯಾಚರಣೆ ಮುಂದುವರಿಸಿದೆ.
ನನ್ಗೆ ತೊಂದ್ರೆ ಕೊಟ್ರು, ಕೆಲ್ಸ ಮಾಡೋಕೆ ಬಿಡ್ಲಿಲ್ಲ… ಎನ್ನುತ್ತಲೇ ಭೂಮಾಫಿಯಾ ಬಗ್ಗೆ ಬಿಚ್ಚಿಟ್ಟ ಸಿಂಧೂರಿ

ಗಂಡನ ಕೊಂದು ಪ್ರಿಯಕರನ ಮನೆಯ ಹೋಮಕುಂಡದಲ್ಲಿ ಶವ ಸುಟ್ಟಿದ್ದ ಪತ್ನಿ: ಭಾಸ್ಕರ್​ ಶೆಟ್ಟಿ ಹಂತಕರಿಗೆ ಶಿಕ್ಷೆ ಪ್ರಕಟ

‘ನಮ್ಮನೆಯವರೇ ಎಎಸ್​ಐ, ಫೋನ್ ಮಾಡ್ಲಾ?’ ಎಂದು ಪೊಲೀಸರೊಂದಿಗೇ ವಾಗ್ವಾದ ನಡೆಸಿದ ಮಹಿಳೆ!

ಫ್ರಾನ್ಸ್​ ಅಧ್ಯಕ್ಷರಿಗೇ ಕಪಾಳಮೋಕ್ಷ; ಕೈಮುಗಿಯುತ್ತ ಹತ್ತಿರ ಬಂದರೂ ಕೆನ್ನೆಗೆ ಬಾರಿಸಿದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
