ಶ್ರೀನಗರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರದೇಶದಲ್ಲಿರುವ ಭಯೋತ್ಪಾದಕರ ಕ್ಯಾಂಪ್‌ಗಳಿಗೂ ಕರೊನಾ ವೈರಸ್ ತೀವ್ರ ಪ್ರಮಾಣದಲ್ಲಿ ಹಬ್ಬಿದೆ.
ಕಾಶ್ಮೀರದಲ್ಲಿರುವ ತನ್ನ ಕುಟುಂಬಕ್ಕೆ ಭಯೋತ್ಪಾದಕನೊಬ್ಬ ಮಾಡಿದ್ದ ದೂರವಾಣಿ ಕರೆಯಿಂದ ಈ ಅಂಶ ಬೆಳಕಿಗೆ ಬಂದಿದೆ. ಜಮ್ಮು-ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಈ ಸಂಭಾಷಣೆಯ ಆಡಿಯೋ ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿಕುಂಬ್ಳೆ 10 ವಿಕೆಟ್ ಕಬಳಿಸಿದ್ದ ಸ್ಟೇಡಿಯಂ ಈಗ ಏನಾಗಿದೆ ಗೊತ್ತೇ?
ತನ್ನ ಜತೆಯಲ್ಲಿರುವ ಕಾಶ್ಮೀರ ಮೂಲದ ಕೆಲವರಿಗೆ ವೈರಸ್ ತಗುಲಿದ್ದು, ಅದರಲ್ಲಿ ಕೆಲವರು ಸಾಯುತ್ತಾರೆ. ಆದರೆ ಇಲ್ಲಿ ಯಾರೂ ಅವರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆ ಭಯೋತ್ಪಾದಕ ಹೇಳಿರುವುದು ಈ ಸಂಭಾಷಣೆಯಲ್ಲಿದೆ.
ಆ ಅಕ್ರಮ ಶಿಬಿರಗಳಲ್ಲಿ ತರಬೇತಿ ಪಡೆಯುತ್ತಿರುವ ಕೆಲವು ಉಗ್ರಗಾಮಿಗಳು ಈಗಾಗಲೇ ಕರೊನಾ ವೈರಸ್‌ನಿಂದ ಸತ್ತಿರುವ ಸಾಧ್ಯತೆಯೂ ಇದೆ. ಸೋಂಕಿತ ಉಗ್ರರು ಕಣಿವೆಯೊಳಗೆ ನುಸುಳಿ ಮಾರಕ ಕರೊನಾವನ್ನು ಪಸರಿಸುವ ಭೀತಿಯೂ ಇದೆ ಎಂದು ಸಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿಪಾಕಿಸ್ತಾನವನ್ನು ಹೇಗೆ ನಿರ್ಬಂಧಿಸಬೇಕು ಎಂಬುದು ಭಾರತಕ್ಕೆ ಗೊತ್ತಿದೆ
ಸೋಂಕಿತ ಭಯೋತ್ಪಾದಕರನ್ನು ಕಣಿವೆಯೊಳಗೆ ನುಗ್ಗಿಸಿ ಕಣಿವೆಯಲ್ಲಿ ಸೋಂಕು ಪಸರಿಸಲು ಪಾಕಿಸ್ತಾನ ಸಂಚು ರೂಪಿಸಿದೆ ಎಂದು ಈ ಹಿಂದೆ ಗುಪ್ತಚರ ದಳಗಳೂ ಎಚ್ಚರಿಕೆ ನೀಡಿದ್ದವು.
ಎಲ್‌ಒಸಿ ಉದ್ದಕ್ಕೂ ಪಾಕಿಸ್ತಾನ ಸುಮಾರು 40 ಭಯೋತ್ಪಾದಕ ಕ್ಯಾಂಪ್‌ಗಳು ಮತ್ತು ಲಾಂಚ್‌ಪ್ಯಾಡ್‌ಗಳನ್ನು ಸಕ್ರಿಯಗೊಳಿಸಿದ್ದು, ಜಮ್ಮು- ಕಾಶ್ಮೀರಕ್ಕೆ ಸಾಧ್ಯವಾದಷ್ಟು ಹೆಚ್ಚು ಉಗ್ರರನ್ನು ಒಳನುಸುಳಿಸಲು ಕಳೆದ ಅಕ್ಟೋಬರ್‌ನಿಂದ ಪ್ರಯತ್ನಿಸುತ್ತಿದೆ ಎಂದು ದಿಲ್ಬಾಗ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿಕಾಶ್ಮೀರದ ವಿಚಾರದಲ್ಲಿ ಪಾಕ್​ ಜತೆ ನಾವಿಲ್ಲ ಎಂದ ತಾಲೀಬಾನ್​: ಪಾಕಿಸ್ತಾನಕ್ಕಾಯ್ತು ಭಾರಿ ಮುಖಭಂಗ!
ಕಾಶ್ಮೀರದಲ್ಲೇ ಉಗ್ರ ನೆಲೆ ಸ್ಥಾಪಿಸಲು ಹವಣಿಸುತ್ತಿದೆ ಪಾಕ್​- ಟಿಆರ್​ಎಫ್​, ಟಿಎಂಐ, ಜಿಇಎಚ್​ಗಳು ಎಲ್​ಇಟಿ, ಜೆಇಎಂಗಳ ಹೊಸ ರೂಪ!!!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:twenty − three =
Remember me
