ನವದೆಹಲಿ:ಕಾಶ್ಮೀರ ಕಣಿವೆಯಲ್ಲಿ 2017ರಲ್ಲಿ ಅಶಾಂತಿಗೆ ಕಾರಣವಾದ ಭಯೋತ್ಪಾದನೆ ಪ್ರಕರಣದ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್​ಐಎ) ಕೋರ್ಟ್​ ಗುರುವಾರ ಪ್ರತ್ಯೇಕತಾವಾದಿ ನಾಯಕ ಯಾಸಿನ್​ ಮಲ್ಲಿಕ್​ ಅಪರಾಧಿ ಎಂದು ತೀರ್ಪು ನೀಡಿದೆ. ಶಿೆಯ ಪ್ರಮಾಣದ ಬಗ್ಗೆ ಮೇ 25ರಂದು ಅದು ವಿಚಾರಣೆ ನಡೆಸಲಿದೆ.
ಕಠಿಣ ಕಾನೂನುಬಾಹಿರ ಚಟುವಟಿಕೆ ತಡೆ ಕಾನೂನು (ಯುಎಪಿಎ) ಅಡಿಯಲ್ಲಿ ಬರುವ ಆರೋಪಗಳ ಸಹಿತ ತನ್ನ ವಿರುದ್ಧದ ಎಲ್ಲ ಆರೋಪಗಳನ್ನು ಮಲ್ಲಿಕ್​ ಮೇ 10ರಂದು ಒಪ್ಪಿಕೊಂಡಿದ್ದ. ಹಣಕಾಸು ವಿವರಗಳನ್ನು ಸಲ್ಲಿಸುವಂತೆ ಆತನಿಗೆ ಸೂಚಿಸಿದ್ದ ಕೋರ್ಟ್​, ಆ ಬಗ್ಗೆ ಪರಿಶೀಲಿಸುವಂತೆ ಎನ್​ಐಎಗೆ ನಿರ್ದೇಶಿಸಿತ್ತು. ತಪ್ಪೊಪ್ಪಿಗೆ ಬಗ್ಗೆ ಮರುಪರಿಶೀಲನೆ ನಡೆಸುತ್ತೀರಾ ಎಂದು ನ್ಯಾಯಾಧೀಶರು ಕೇಳಿದ್ದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಮಲ್ಲಿಕ್​, ಚೆನ್ನಾಗಿ ಯೋಚಿಸಿಯೇ ತಾನು ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದ. ಅಮಿಕಸ್​ ಕ್ಯೂರಿಯನ್ನು ಎರಡು ಬಾರಿ ಭೇಟಿಯಾಗಿ ಚಚಿರ್ಸಿದ್ದ. ಮಲ್ಲಿಕ್​ ಸ್ವಪ್ರೇರಣೆಯಿಂದ ಹಾಗೂ ಎಲ್ಲ ಕಾನೂನಾತ್ಮಕ ಪ್ರಕ್ರಿಯೆಗಳ ನಂತರ ತನ್ನ ವಿರುದ್ಧದ ಆರೋಪಗಳನ್ನು ಒಪ್ಪಿಕೊಂಡಿದ್ದು ಅದನ್ನು ಅಂಗೀಕರಿಸಲಾಗಿದೆ ಎಂದು ಜಡ್ಜ್​ ತೀಪಿರ್ನಲ್ಲಿ ಹೇಳಿದ್ದಾರೆ.
ಕಲ್ಲು ತೂರಾಟ ಪ್ರಕರಣಗಳು: 2016ರಲ್ಲಿ ಕಲ್ಲು ತೂರಾಟದ 89 ಪ್ರಕರಣಗಳು ದಾಖಲಾಗಿರುವ ಹಿಂಸಾತ್ಮಕ ಪ್ರತಿಭಟನೆಗಳನ್ನು ಜಮ್ಮು ಮತ್ತು ಕಾಶ್ಮೀರ ವಿಮೋಚನಾ ರಂಗದ (ಜೆಕೆಎಲ್​ಎ್​) ಮುಖ್ಯಸ್ಥ ಮಲ್ಲಿಕ್​ ಪ್ರಚೋದಿಸಿದ್ದ ಎಂದು ಎನ್​ಐಎ ಆರೋಪಿಸಿತ್ತು. ಆತನ ಮನೆ ಮೇಲೆ ದಾಳಿ ಮಾಡಿದಾಗ ಹಿಜ್ಬುಲ್​ ಮುಜಾಹಿದಿನ್​ ಸಂಟನೆಯ ಲೆಟರ್​ಹೆಡ್​ ಸಿಕ್ಕಿದ್ದು ಅದನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಎನ್​ಐಎ ಹೇಳಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + eleven =
Remember me
