ಲಂಡನ್:ಸಾಮಾನ್ಯವಾಗಿ ಮುಸ್ಲಿಮರು ಭಯೋತ್ಪಾದಕರ ಮನವೊಲಿಸುತ್ತಾರೆ ಎಂದು ರಯಾನ್ ಏರ್ ಸಿಇಒ ಮೈಕೆಲ್ ಒಲೀರಿ ಹೇಳಿಕೆ ನೀಡಿ ವಿವಾದ ಹುಟ್ಟುಹಾಕಿದ್ದಾರೆ.
ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿಮಾನ ನಿಲ್ದಾಣದ ಸುರಕ್ಷತೆಯ ಬಗ್ಗೆ ಚರ್ಚಿಸುವಾಗ ಬಾಂಬರ್‌ಗಳು ಯಾರು? ಎನ್ನುವ ಪ್ರಶ್ನೆ ಏಳುತ್ತದೆ. ಆಗ ಮುಸ್ಲಿಂ ಪುರುಷರನ್ನು ವಿಮಾನ ನಿಲ್ದಾಣಗಳಲ್ಲಿ ತೀವ್ರ ತಪಾಸಣೆ ಮಾಡಬೇಕು ಎಂದು ಮೈಕೆಲ್ ಒಲೀರಿ ಹೇಳಿದ್ದಾರೆ .
ಅವರು ಕುಟುಂಬದ ಜತೆಗಿದ್ದರೆ, ಮಕ್ಕಳೊಂದಿಗಿದ್ದರೆ ಅದು ಸರಿ. ಆದರೆ ಒಬ್ಬರೆ ಪ್ರಯಾಣಿಸುತ್ತಿದ್ದರೆ. ಆಗ ಸಮಸ್ಯೆ. ಮೂವತ್ತು ವರ್ಷಗಳ ಹಿಂದೆ ಐರಿಶ್​ನಲ್ಲಿ ಪರಿಸ್ಥಿತಿ ಹೀಗೆ ಇತ್ತು ಎಂದಿದ್ದಾರೆ.
ಒಲೀರಿ ಅವರ ಈ ಮಾತಿಗೆ ಬ್ರಿಟನ್‌ನ ಮುಸ್ಲಿಂ ಕೌನ್ಸಿಲ್ ವಕ್ತಾರ ಟೀಕಿಸಿದ್ದು, ಇದು ಇಸ್ಲಾಮೋಫೋಬಿಯಾ ಎಂದಿದ್ದಾರೆ. ಒಲೀರಿ ವರ್ಣಭೇದ ನೀತಿಯನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಕಾರ್ಮಿಕ ಸಂಸದ ಖಾಲಿದ್ ಮಹಮೂದ್ ಪತ್ರಿಕೆ ಪ್ರತಿಕ್ರಿಯಿಸಿದ್ದಾರೆ.
“ಈ ವಾರ ಜರ್ಮನಿಯಲ್ಲಿ ಒಬ್ಬ ಬಿಳಿ ವ್ಯಕ್ತಿಯು ಎಂಟು ಜನರನ್ನು ಕೊಂದಿದ್ದಾನೆ. ಅವರು ಫ್ಯಾಸಿಸ್ಟರಾಗಿದ್ದಾರೆಯೇ ಎಂದು ನೋಡಲು ನಾವು ಬಿಳಿ ಜನರನ್ನು ಪ್ರೊಫೈಲ್ ಮಾಡಬೇಕೇ?” ರಯಾನ್ಏರ್ ಸಿಇಒ ಅವರು ವಿವಾದಾತ್ಮಕ ದೃಷ್ಟಿಕೋನಗಳಿಗೆ ಹೆಸರುವಾಸಿಯಾಗಿದ್ದಾರೆ ಎಂದು ಸಂಸದ ಕಿಡಿ ಕಾರಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + twelve =
Remember me
