ಶ್ರೀನಗರ :ರಜೆಯ ಮೇಲೆ ಮನೆಗೆ ತೆರಳಿದ್ದ ಭಾರತೀಯ ಸೇನೆಯ ಸಿಪಾಯಿಯನ್ನು ಗುಂಡಿಟ್ಟು ಕೊಂದಿದ್ದ ಇಬ್ಬರು ಭಯೋತ್ಪಾದಕರಿಗೆ ಜಮ್ಮು- ಕಾಶ್ಮೀರ ಪೊಲೀಸರು ಇಂದು ಅಂತ್ಯ ಹಾಡಿದ್ದಾರೆಂದು ಡಿಜಿಪಿ ದಿಲ್​ಬಾಗ್​ ಸಿಂಗ್ ಹೇಳಿದ್ದಾರೆ.
ಕಾಶ್ಮೀರದ ಬಿಜ್​ಬೆಹಾರಾ ಜಿಲ್ಲೆಯ ಜಬ್ಲಿಪೋರದಲ್ಲಿ ಏಪ್ರಿಲ್ 10 ರಂದು ಸೈನಿಕ ಮೊಹಮ್ಮದ್ ಸಲೀಂ ಅಖೂನ್(35) ಅವರ ಮೇಲೆ ಲಷ್ಕರ್​ಎತೈಬಾದ ಇಬ್ಬರು ಸದಸ್ಯರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹಲ್ಲೆಕೋರ ಭಯೋತ್ಪಾದಕರನ್ನು ಸೆರೆ ಹಿಡಿಯಲು ಪೊಲೀಸ್ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಆ ಸಮಯದಲ್ಲಿ ಈರ್ವರೂ ಮೃತಪಟ್ಟಿರುವುದಾಗಿ ಸಿಂಗ್ ತಿಳಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ಜಮ್ಮುಕಾಶ್ಮೀರದ ವಿವಿಧ ಭಾಗಗಳಲ್ಲಿ ಲಷ್ಕರ್​ಎತೈಬಾಗೆ ಸೇರಿದ 12 ಭಯೋತ್ಪಾದಕರನ್ನು ಮಟ್ಟ ಹಾಕಲಾಗಿದೆ ಎಂದು ದಿಲ್​​ಬಾಗ್​​ ಸಿಂಗ್ ಹೇಳಿದ್ದಾರೆ.(ಏಜೆನ್ಸೀಸ್)
ರಜೆಯಲ್ಲಿದ್ದ ಸೈನಿಕನನ್ನು ಗುಂಡಿಟ್ಟು ಕೊಂದ ಭಯೋತ್ಪಾದಕರು

ಬಂಗಾಳ ಚುನಾವಣೆ : ಕರೊನಾ ಮುನ್ನೆಚ್ಚರಿಕೆ ಇಲ್ಲದೆ ಪ್ರಚಾರ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × two =
Remember me
