ಮುಂಬೈ:ಇನ್ನೊಂದು ದೊಡ್ಡ ಕಂಪನಿಯ ಐಪಿಒ ಅತಿ ಶೀಘ್ರದಲ್ಲಿ ಷೇರು ಮಾರುಕಟ್ಟೆಗೆ ಲಗ್ಗೆ ಇಡಬಹುದಾಗಿದೆ. ವಾಸ್ತವವಾಗಿ, ಸರಣಿ ಸೂಪರ್​ ರ್ಮಾರ್ಕೆಟ್​ಗಲನ್ನು ಹೊಂದಿರುವ ವಿಶಾಲ್ ಮೆಗಾ ಮಾರ್ಟ್ ಐಪಿಒಗೆ ತಯಾರಿ ನಡೆಯುತ್ತಿದೆ ಎಂಬ ಸುದ್ದಿ ಇದೆ.
ಈ ಐಪಿಒ ಷೇರು ಮೌಲ್ಯವು 1 ಶತಕೋಟಿ ಡಾಲರ್ ಆಗಿರಬಹುದಾಗಿದೆ. ಸ್ವಿಜರ್​ಲೆಂಡ್​ನ ಪಾರ್ಟನರ್ಸ್​ ಗ್ರೂಪ್​ಮತ್ತು ಭಾರತದ ಕೇದಾರ ಕ್ಯಾಪಿಟಲ್ ಐಪಿಒ ಮೂಲಕ ಷೇರುಗಳನ್ನು ಮಾರಾಟ ಮಾಡುತ್ತವೆ. ವಿಶಾಲ್ ಮೆಗಾ ಮಾರ್ಟ್‌ನಲ್ಲಿ ಈ ಸಂಸ್ಥೆಗಳು ಹೆಚ್ಚಿನ ಪಾಲನ್ನು ಹೊಂದಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ವಿಶಾಲ್ ಮೆಗಾ ಮಾರ್ಟ್‌ನಲ್ಲಿ ಈ ಎರಡು ಖಾಸಗಿ ಈಕ್ವಿಟಿ ಸಂಸ್ಥೆಗಳು ಎಷ್ಟು ಪಾಲನ್ನು ಹೊಂದಿವೆ? ಮತ್ತು ಅವರು ಎಷ್ಟು ಮಾರಾಟ ಮಾಡುತ್ತಾರೆ? ಎಷ್ಟು ಪಾಲನ್ನು ಉಳಿಸಿಕೊಳ್ಳುತ್ತಾರೆ ಎಂಬ ಈ ಬಗ್ಗೆ ಸದ್ಯಕ್ಕೆ ಯಾವುದೇ ವಿವರವಾದ ಮಾಹಿತಿ ಲಭ್ಯವಿಲ್ಲ. ವಿಶಾಲ್ ಮೆಗಾ ಮಾರ್ಟ್‌ನಿಂದಲೂ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಮೂಲಗಳ ಪ್ರಕಾರ, ಈ ವಾರದ ಐಪಿಒಗಾಗಿ ಹೂಡಿಕೆ ಬ್ಯಾಂಕ್‌ಗಳನ್ನು ಆಹ್ವಾನಿಸಲಾಗಿದೆ ಮತ್ತು ಈ ವರ್ಷದ ಕೊನೆಯಲ್ಲಿ ಆಫರ್ ಆಗುವ ಸಾಧ್ಯತೆಯಿದೆ. ಭಾರತೀಯ ಷೇರು ಮಾರುಕಟ್ಟೆಗಳು ದಾಖಲೆಯ ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿರುವ ಸಮಯದಲ್ಲಿ ಈ ಯೋಜನೆ ಬಂದಿದೆ. ಕಳೆದ ಆರು ತಿಂಗಳಲ್ಲಿ ಬೆಂಚ್‌ಮಾರ್ಕ್ ನಿಫ್ಟಿ ಸೂಚ್ಯಂಕವು 12% ಏರಿಕೆಯಾಗಿದೆ.
ವಿಶಾಲ್​ ಮೆಗಾ ಮಾರ್ಟ್​ ಕಂಪನಿಯು ಮುಖ್ಯವಾಗಿ ಸಣ್ಣ ಪಟ್ಟಣಗಳಲ್ಲಿ ಬಟ್ಟೆ ಮತ್ತು ದಿನಸಿಗಳನ್ನು ಮಾರಾಟ ಮಾಡುತ್ತದೆ. ಇದರ ಸ್ಪರ್ಧೆಯು ಭಾರತೀಯ ಉದ್ಯಮಿ ಮುಖೇಶ್ ಅಂಬಾನಿಯವರ ರಿಲಯನ್ಸ್, ಟಾಟಾ ಗ್ರೂಪ್​ನ ಟ್ರೆಂಟ್ ಮತ್ತು ಕಿರಾಣಿ ಚಿಲ್ಲರೆ ವ್ಯಾಪಾರಿ ಸಂಸ್ಥೆಯಾದ ಅವೆನ್ಯೂ ಸೂಪರ್​ಮಾರ್ಟ್​ ಜತೆ ಇದೆ. ಈ ಕಂಪನಿಯು ದೇಶಾದ್ಯಂತ ಅಂದಾಜು 560 ಮಳಿಗೆಗಳನ್ನು ಹೊಂದಿದೆ. ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ ಅಂದಾಜಿನ ಪ್ರಕಾರ, ಭಾರತದ ಚಿಲ್ಲರೆ ಮಾರುಕಟ್ಟೆಯು 2033 ರ ವೇಳೆಗೆ 2 ಟ್ರಿಲಿಯನ್ ಡಾಲರ್​ ಮೌಲ್ಯದ್ದಾಗಿರಬಹುದು, ಆದರೆ ಪ್ರಸ್ತುತ ಇದು ಅಂದಾಜು 840 ಬಿಲಿಯನ್ ಡಾಲರ್​ ಆಗಿದೆ.
ಫಿಚ್​ ಮಾಲೀಕತ್ವದ ಇಂಡಿಯಾ ರೇಟಿಂಗ್ಸ್‌ನ ವರದಿಯ ಪ್ರಕಾರ, ವಿಶಾಲ್ ಮೆಗಾ ಮಾರ್ಟ್‌ನ ಆದಾಯವು ಮಾರ್ಚ್ 2023 ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ 36% ರಷ್ಟು ಏರಿಕೆಯಾಗಿ 75.9 ಶತಕೋಟಿ ರೂಪಾಯಿ (917 ದಶಲಕ್ಷ ಡಾಲರ್​) ತಲುಪಿದೆ. ನಿವ್ವಳ ಲಾಭವು 60% ರಷ್ಟು ಏರಿಕೆಯಾಗಿ 3.2 ಶತಕೋಟಿ ರೂಪಾಯಿಗೆ ತಲುಪಿದೆ.

ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದ ಜಿಯೋ ಷೇರು: ಒಂದೇ ತಿಂಗಳಲ್ಲಿ 35% ಏರಿಕೆ; ಇನ್ನಷ್ಟು ಹೆಚ್ಚಾಗುತ್ತದೆ ಎನ್ನುತ್ತಾರೆ ತಜ್ಞರು

ಆದಿತ್ಯ ಬಿರ್ಲಾ ಕಂಪನಿಗಳ ವಿಲೀನ: ಒಂದೇ ದಿನದಲ್ಲಿ ಷೇರು ಬೆಲೆ 6% ಏರಿಕೆ: ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
