ಥಾಣೆ: ಕೋವಿಡ್ 19 ಸೋಂಕು ಹರಡದಂತೆ ಲಾಕ್‍ಡೌನ್ ಚಾಲ್ತಿಯಲ್ಲಿರುವ ಕಾರಣ ಅವಶ್ಯ ಸೇವೆ ಒದಗಿಸುವವರಿಗೆ ಇ-ಪಾಸ್ ವಿತರಿಸುವ ವ್ಯವಸ್ಥೆ ದೇಶದ ಇತರೆ ಭಾಗಗಳಲ್ಲಿ ಇರುವಂತೆಯೇ ಇಲ್ಲೂ ಶುರುಮಾಡಲಾಗಿತ್ತು. ಬೇರೆ ಕಡೆಗಳಲ್ಲಿ ಒಂದು ಇ-ಪಾಸ್ ತೆಗೆದುಕೊಂಡು ಕಲರ್ ಝೆರಾಕ್ಸ್ ಮಾಡಿ ವಂಚಿಸುವ ಕೆಲಸ ನಡೆಯುತ್ತಿದ್ದರೆ, ಇಲ್ಲೊಂದು ಗ್ಯಾಂಗ್ ಇ-ಪಾಸ್‍ಗೋಸ್ಕರ ಜಿಲ್ಲಾಧಿಕಾರಿಯ ವೆಬ್‍ಸೈಟ್‍ ಪಾಸ್‍ವರ್ಡ್‍ ಹ್ಯಾಕ್ ಮಾಡಿತ್ತು!
ಅಂತರ್‍ ಜಿಲ್ಲೆ ಮತ್ತು ಅಂತಾರಾಜ್ಯ ಪ್ರಯಾಣಕ್ಕೆ ಇ-ಪಾಸ್ ಅವಶ್ಯಕತೆ ಇದೆ. ಇದನ್ನು ಮನಗಂಡ ನಾಲ್ವರ ತಂಡ ಈ ಕೃತ್ಯವೆಸಗಿದೆ. ಕೆಲವೇ ಗಂಟೆಗಳಲ್ಲಿ 600 ಪಾಸ್‍ಗಳನ್ನು ವಿತರಿಸಿದೆ. ಈ ಗ್ಯಾಂಗ್‍ ಕಳೆದ ಎರಡು ತಿಂಗಳಿಂದ ಕಾರ್ಯಾಚರಿಸುತ್ತಿದ್ದು, ವೆಬ್‍ಸೈಟ್ ಪಾಸ್‍ವರ್ಡ್ ಹ್ಯಾಕ್ ಮಾಡಿದ ಕೆಲವೇ ಗಂಟೆಗಳ ಅವಧಿಯಲ್ಲಿ ಪೊಲೀಸರ ಬಲೆಗೆ ಬಿದ್ದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಕೋವಿಡ್‍-19ಗೆ ಪ್ರಾಣತೆತ್ತ ಸರ್ಕಾರಿ ನೌಕರರ ಕುಟುಂಬಕ್ಕೆ ವಿಶೇಷ ಕುಟುಂಬ ಪಿಂಚಣಿ- ಬಿಹಾರ ಕ್ಯಾಬಿನೆಟ್ ಒಪ್ಪಿಗೆ
ಇದಕ್ಕೂ ಮೊದಲು ಮುಂಬೈ ಪೊಲೀಸರ ಪಾಸ್‍ ಅನ್ನು ನಕಲಿಸಿ ಫೋಟೋ ಶಾಪ್ ಮೂಲಕ ಅಂತಹ ಪಾಸ್‍ಗಳನ್ನು ತಯಾರಿಸಿ ವಿತರಿಸುತ್ತಿತ್ತು ಈ ಗ್ಯಾಂಗ್‍. ಹಣ ಪಾವತಿಸಿದರೆ ಇ-ಪಾಸ್ ಸಿಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಇದನ್ನು ಆಧರಿಸಿ ಗ್ರಾಹಕರ ಸೋಗಿನಲ್ಲಿ ಈ ಗ್ಯಾಂಗನ್ನು ಸಂಪರ್ಕಿಸಿದ ಪೊಲೀಸರು 2,000 ರೂಪಾಯಿ ಪಾವತಿಸಿ ಪಾಸ್ ನೀಡುವಂತೆ ಕೇಳಿದ್ದಾರೆ. ಆರೋಪಿ ಪಾಸ್ ತಂದುಕೊಡುವಾಗ ರೆಡ್ ಹ್ಯಾಂಡ್ ಆಗಿ ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಮೊಹಮ್ಮದ್ ಶೇಖ್ ಅಸ್ಲಾಂ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಪಿಒಕೆಯ ಸ್ಕದ್ರು ವಾಯುನೆಲೆಯಲ್ಲಿ ಇಳಿದಿವೆ ಪಾಕ್‍ನ ಜೆ-17 ಫೈಟರ್ ಜೆಟ್‍ಗಳು!
ಆತ ನೀಡಿದ ಮಾಹಿತಿ ಆಧರಿಸಿ ಈ ದಂಧೆಯಲ್ಲಿ ತೊಡಗಿದ್ದ ಸಮೀರ್ ಶೇಖ್‍, ನೂರ್ ಗನಿ ಶೇಖ್‍ ಮತ್ತು ವಿನಯ್ ಪಾರ್ಥೆ ಎಂಬುವವರನ್ನು ಬಂಧಿಸಲಾಗಿದೆ. ಇವರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ದಂಧೆಯ ಇನ್ನಷ್ಟು ವಿಚಾರಗಳು ಬಹಿರಂಗವಾಗುವ ನಿರೀಕ್ಷೆ ಇದೆ. (ಏಜೆನ್ಸೀಸ್)
ಶ‍್ರೀಹರಿಕೋಟಾಕ್ಕೂ ಕೋವಿಡ್ ಪ್ರವೇಶ – ಸೋಂಕು ಹರಡದಂತೆ ಕಠಿಣ ಇಸ್ರೋ ಮುಂಜಾಗ್ರತಾ ಕ್ರಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 6 =
Remember me
