ಥಾಣೆ:ಪ್ರೀತಿ ಕುರುಡು, ಪ್ರೀತಿಸಿದವರಿಗಾಗಿ ಜನ ಏನೂ ಬೇಕಾದರೂ ಮಾಡಲು ಸಜ್ಜಾಗಿರುತ್ತಾರೆ ಎಂಬುದಕ್ಕೆ ನಮ್ಮ ಕಣ್ಣ ಮುಂದೆ ಹಲವು ನಿದರ್ಶನಗಳಿವೆ. ಅದೇ ರೀತಿ ಇತ್ತೀಚಿನ ವರ್ಷಗಳಲ್ಲಿ ಗಡಿಯಾಚೆಗಿನ ಪ್ರೇಮಕಥೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು, ಸೀಮಾ ಹೈದರ್​, ಅಂಜು ಬಳಿಕ ಇದೀಗ ಮಹಾರಾಷ್ಟ್ರದ ಥಾಣೆಯ ಯುವತಿಯೊಬ್ಬಳು ತನ್ನ ಪ್ರಿಯಕರನಿಗಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಾಕಿಸ್ತಾನಕ್ಕೆ ಭೇಟಿ ನೀಡಿ ಪೊಲೀಸರಿಗೆ ಅತಿಥಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಬಂಧಿತ ಮಹಿಳೆ ಹೆಸರು ನಗ್ಮಾ ಎಂದು ತಿಳಿದು ಬಂದಿದ್ದು, ಈಕೆಗೆ 2021ರಲ್ಲಿ ಪಾಕಿಸ್ತಾನದ ಅಬೋಟಾಬಾದ್​ನ ಬಾಬರ್ ಬಶೀರ್ ಅಹ್ಮದ್ ಎಂಬಾತ ಫೇಸ್​ಬುಕ್​ನಲ್ಲಿ ಪರಿಚಯವಾಗಿದ್ದಾನೆ. ಪ್ರತಿನಿತ್ಯ ಚಾಟಿಂಗ್​ ಮಾಡುತ್ತಿದ್ದ ಇವರ ನಡುವೆ ದಿನ ಕಳೆದಂತೆ ಆತ್ಮೀಯತೆ ಹೆಚ್ಚಾಗಿದ್ದು, ಇದು ಪ್ರೀತಿಯಾಗಿ ಬದಲಾಗಿದೆ. ಇದಲ್ಲದೆ ಇವರಿಬ್ಬರು ಈ ವರ್ಷ ಫೆಬ್ರವರಿಯಲ್ಲಿ ಆನ್​ಲೈನ್​ನಲ್ಲೇ ಮದುವೆಯಾಗಿದ್ದರಂತೆ.
ತನ್ನ ಪ್ರಿಯಕರನನ್ನು ಭೇಟಿಯಾಗುವ ಸಲುವಾಗಿ ನಗ್ಮಾ ಪಾಸ್​ಪೋರ್ಟ್​ಗಾಗಿ ರಾಯಭಾರ ಕಚೇರಿಗೆ ಅರ್ಜಿ ಸಲ್ಲಿಸಿದ್ದಳಂತೆ. ಆದರೆ, ಆಕೆಯ ಅರ್ಜಿಯನ್ನು ರಾಯಭಾರ ಕಚೇರಿಯ ಅಧಿಕಾರಿಗಳು ತಿರಸ್ಕರಿಸಿದ್ದರಂತೆ. ಇದರಿಂದ ಸುಮ್ಮನಾಗದ ಈಕೆ ಪಾಕಿಸ್ತಾನದಲ್ಲಿರುವ ತನ್ನ ಪ್ರೇಮಿಯನ್ನು ಭೇಟಿ ಮಾಡಬೇಕೆಂದು ಪಣ ತೊಟ್ಟು ಅಡ್ಡದಾರಿ ಹಿಡಿದಿದ್ದಾಳೆ.
#WATCH| Maharashtra: Thane Police filed a case against a 23-year-old woman, who allegedly used fake documents to obtain a passport to travel to Pakistan.Sanam Khan alias Nagma Noor Maqsood says, "…I got my name changed in 2015…During the Covid time, in 2021 I got in…pic.twitter.com/jeyNQ3QRxY
ಇದನ್ನೂ ಓದಿ:ಇನ್ಮುಂದೆ ಇಂಟರ್​ನೆಟ್​ ಇಲ್ಲದೆ ವಾಟ್ಸ್​ಆ್ಯಪ್ ಬಳಸಬಹುದು; ಹೇಗೆ ಗೊತ್ತಾ?
ಪಾಸ್​ಪೋರ್ಟ್​ ಪಡೆಯುವ ಸಲುವಾಗಿ ತನ್ನ ಹೆಸರನ್ನು ಸನಮ್​​ ಖಾನ್​ ಎಂದು ಬದಲಿಸಿಕೊಂಡ ಈಕೆ ನಕಲಿ ಆಧಾರ್​ ಕಾರ್ಡ್​ ಬಳಸಿ ವೀಸಾಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದಾಳೆ. ಬಳಿಕ ಪಾಕ್​ನಲ್ಲಿರುವ ತನ್ನ ಪ್ರಿಯಕರನನ್ನು ಭೇಟಿಯಾಗಿ ಜುಲೈ 17ರಂದು ಭಾರತಕ್ಕೆ ಹಿಂದಿರುಗಿದ್ದಳು. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಇದಲ್ಲದೆ ಈಕೆಗೆ ನಕಲಿ ದಾಖಲೆ ಸೃಷ್ಟಿಸಲು ಸಹಾಯ ಮಾಡಿದವರನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಹಿಳೆ ತಾಯಿ ನನ್ನ ಮಗಳನ್ನು ಪೊಲೀಸರು ಬಂಧಿಸಿಲ್ಲ. 2015 ರಲ್ಲಿ ನಗ್ಮಾ ತನ್ನ ಪತಿಯಿಂದ ಬೇರ್ಪಟ್ಟ ನಂತರ ತನ್ನ ಹೆಸರನ್ನು ಬದಲಾಯಿಸಿದ್ದಳು, ಜೊತೆಗೆ ತನ್ನ ಮಕ್ಕಳ ಹೆಸರನ್ನೂ ಬದಲಾಯಿಸಿದ್ದಳು. 2021ರಲ್ಲಿ ಆಕೆ ಪಾಕಿಸ್ತಾನದ ಮೂಲದ ವ್ಯಕ್ತಿಯನ್ನು ಸೋಶಿಯಲ್​ ಮೀಡಿಯಾದಲ್ಲಿ ಭೇಟಿಯಾಗಿದ್ದು, ಕುಟುಂಬದವರ ಒಪ್ಪಿಗೆ ಮೇರೆಗೆ ಮದುವೆಯಾಗಲು ನಿರ್ಧರಿಸಿದರು. ಆ ಬಳಿಕ ಆಕೆ ಪಾಸ್​ಪೋರ್ಟ್​ ಮಾಡಿಸಿಕೊಂಡು ಗಂಡನ ಮನೆಗೆ ಭೇಟಿ ನೀಡಿದ್ದಾಳೆ. ಆದರೆ, ಪೊಲೀಸರು ಸುಳ್ಳು ಆರೋಪ ಹೊರಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಮಹಿಳೆಯ ತಾಯಿ ಆರೋಪಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 1 =
Remember me
