ಥಾಣೆ:ತುಂಬ ತೂಕ ಇದ್ದವರು ಅದನ್ನು ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಹಾಗೇ ತುಂಬ ಪೇಲವ ಆಗಿದ್ದವರು ತೂಕ ಹೆಚ್ಚಿಸಿಕೊಳ್ಳಲು ಮುಂದಾಗುತ್ತಾರೆ.
ಆದರೆ ಇಂತಹ ಡಯಟ್​ಗಳನ್ನು ಅತ್ಯಂತ ಎಚ್ಚರದಿಂದ ಮಾಡಬೇಕು. ಇಲ್ಲದಿದ್ದರೆ ಪ್ರಾಣಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಇದೊಂದು ದುರ್ಘಟನೆ ಸಾಕ್ಷಿ.
ಈಕೆ ಥಾಣೆಯ 22 ವರ್ಷದ ಯುವತಿ. ನರ್ತಕಿ. ತನ್ನ ತೂಕ ಇಳಿಸಿಕೊಳ್ಳಲು, ಆದಷ್ಟು ಬೇಗನೇ ಸ್ಲಿಮ್​ ಆಗಬೇಕು ಎಂಬ ಆಸೆಯಿಂದ ನಿಷೇಧಿತ ಡೈನಿಟ್ರೋಫೆನಾಲ್ ಮಾತ್ರೆಗಳನ್ನು ತೆಗೆದುಕೊಂಡು ಜೀವವನ್ನೇ ಕಳೆದುಕೊಂಡಿದ್ದಾಳೆ.ಮೇಘನಾ ದೇವಗಡ್​ಕರ್​ ಮೃತ ಯುವತಿ. ಮಾತ್ರೆಗಳನ್ನು ನುಂಗಿ 15 ತಾಸುಗಳ ಒಳಗೇ ಸಾವನ್ನಪ್ಪಿದ್ದಾಳೆ.ಈಕೆ ಜಿಮ್​ಗೆ ಜಿಮ್​ವೊಂದರಲ್ಲಿ ಟ್ರೇನರ್​ ಆಗಿ ಸೇರಿಕೊಂಡಿದ್ದಳು. ಸೋಮವಾರ ಜಿಮ್​ಗೆ ಹೋಗುವ ಮೊದಲು ಡೈನಿಟ್ರೋಫೆನಾಲ್ ಮಾತ್ರೆಗಳನ್ನು ತೆಗೆದುಕೊಂಡಿದ್ದಳು.
ಆದರೆ ಮಾತ್ರೆ ತೆಗದುಕೊಂಡ ಸ್ವಲ್ಪ ಹೊತ್ತಿನಲ್ಲಿಯೇ ಆಕೆಗೆ ವಾಂತಿಯಾಗಲು ಶುರುವಾಯಿತು. ತರ ಮೇಘನಾರನ್ನು ಆಸ್ಪತ್ರೆಗೆ ಕರೆದುಕೊಂಡುಹೋಗಲಾಯಿತು. ಐಸಿಯುವಿನಲ್ಲಿ ಇಟ್ಟರೂ ಆಕೆಯ ಆರೋಗ್ಯ ಸರಿಹೋಗಲಿಲ್ಲ. ಕೊನೆಗೆ ಹೃದಯಸ್ತಂಭನದಿಂದ ಮೃತಪಟ್ಟಿದ್ದಾಳೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಡೈನಿಟ್ರೋಫೆನಾಲ್ ಮಾತ್ರೆಗಳನ್ನು ನಿಷೇಧಿಸಿದ್ದರೂ ಮೇಘನಾ ಅದನ್ನು ತೆಗೆದುಕೊಂಡಿದ್ದರು. ಅದಾದ ಬಳಿಕ ಆಕೆ ಹೈಪರ್ ಥರ್ಮಿಯಾಕ್ಕೆ ಒಳಗಾದರು. ಅಂದರೆ ಇಡೀ ದೇಹದ ಉಷ್ಣತೆ ನಿಯಂತ್ರಣಕ್ಕೆ ಬಾರದಷ್ಟು ಹೆಚ್ಚಾಯಿತು. ಅಷ್ಟೇ ಅಲ್ಲದೆ ಹೃದಯಬಡಿತ ಮತ್ತು ರಕ್ತದ ಒತ್ತಡ ವಿಪರೀತ ಎನ್ನುವಷ್ಟು ಹೆಚ್ಚಿದ್ದೇ ಆಕೆಯ ಸಾವಿಗೆ ಕಾರಣವಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
ತಾನು ಡೈನಿಟ್ರೋಫೆನಾಲ್ ಮಾತ್ರೆ ತೆಗೆದುಕೊಂಡಿದ್ದಾಗೆ ಮೇಘನಾ ಪೊಲೀಸರಿಗೆ ತಿಳಿಸಿದ್ದರು. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
