ಚೆನ್ನೈ:ಚಾರ್ಜಿಂಗ್​ ವೇಳೆ ಮೊಬೈಲ್​ನಲ್ಲಿ ಮಾತನಾಡಬಾರದು ಎಂದು ಹೇಳಿದರೂ ಕೆಲವರು ಇನ್ನು ಅದೇ ಅಭ್ಯಾಸದಲ್ಲಿ ತೊಡಗಿರುವುದನ್ನು ನೋಡಿದ್ದೇವೆ. ನಾವು ಮಾಡುವ ಒಂದು ಸಣ್ಣ ತಪ್ಪು ನಮ್ಮ ಪ್ರಾಣವನ್ನು ಕಸಿಯುತ್ತದೆ ಎಂಬುದು ತಿಳಿದಿರಬೇಕು. ಅಲ್ಲದೆ, ಉತ್ತಮ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಇಲ್ಲವಾದಲ್ಲಿ ಪರಿಣಾಮ ಹೇಗಿರುತ್ತದೆ ಎಂಬುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.
ಮೊಬೈಲ್​ ಅನ್ನು ಚಾರ್ಜ್​ಗೆ ಇಟ್ಟು ಅದರಲ್ಲಿ ಮಾತನಾಡುವಾಗ ಸ್ಫೋಟಗೊಂಡ ಪರಿಣಾಮ ಯುವತಿಯೊಬ್ಬಳು ದುರಂತ ಸಾವಿಗೀಡಾಗಿರುವ ಆಘಾತಕಾರಿ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ.
ಇದನ್ನೂ ಓದಿ:ಕಾವೇರಿ ಕಿಚ್ಚಿಗೆ ನಾಳೆ ಕರ್ನಾಟಕ ಸ್ತಬ್ಧ: ಬಂದ್​ ತಯಾರಿ ಜೋರು, ನಾಳೆ ಏನಿರುತ್ತೆ? ಏನಿರಲ್ಲ?

ಮೃತ ಯುವತಿಯನ್ನು ಕೊಕಿಲಾಂಪಾಲ್​​ (33) ಎಂದು ಗುರುತಿಸಲಾಗಿದೆ. ಈಕೆ ತಂಜಾವೂರು ಜಿಲ್ಲೆಯ ಪಾಪನಾಶಂ ಬಳಿಯಿರುವ ವಿಶಿಷ್ಟರಾಜಪುರಂ ಮೂಲದವಳು. ಮದುವೆಯಾಗಿದ್ದು ಓರ್ವ ಗಂಡು ಮಗನಿದ್ದಾನೆ. ಪತಿ ಪ್ರಭಾಕರನ್​ ಅನಾರೋಗ್ಯ ಕಾರಣದಿಂದ ಕೆಲವು ವರ್ಷಗಳ ಹಿಂದೆಯೇ ಮೃತಪಟ್ಟನು.
ಗಂಡ ಮೃತಪಟ್ಟ ಬಳಿಕ ಜೀವನೋಪಾಯಕ್ಕಾಗಿ ಕೋಕಿಲಾಂಪಾಲ್ ಮೇಲಕಾಪಿಸ್ಥಳದಲ್ಲಿ ವಾಚ್ ಮತ್ತು ಸೆಲ್ ಫೋನ್ ರಿಪೇರಿ ಅಂಗಡಿ ನಡೆಸುತ್ತಿದ್ದಳು. ನಿನ್ನೆ ಮಧ್ಯಾಹ್ನ ಸೆಲ್ ಫೋನ್ ಚಾರ್ಜ್ ಮಾಡುವಾಗ ಕಿವಿಯಲ್ಲಿ ಹೆಡ್ ಫೋನ್ ಹಾಕಿಕೊಂಡು ಮಾತನಾಡುತ್ತಿದ್ದರು. ಆಗ ಅನಿರೀಕ್ಷಿತವಾಗಿ ಮೊಬೈಲ್ ಸ್ಫೋಟಗೊಂಡಿದೆ. ಕೋಕಿಲಾಂಪಲ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಂಗಡಿಯಲ್ಲಿದ್ದ ಎಲ್ಲ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ.
ಕೋಕಿಲಂಪಾಲ್ ಅವರ ತಂದೆ ಮನೋಕರನ್ ಅವರು ಕಪಿಸ್ತಲಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಕರ್ನಾಟಕ ಬಂದ್ ವೇಳೆ ಮಹಾದಿಗ್ಬಂಧನಕ್ಕೆ ಕನ್ನಡ ಸಂಘಟನೆಗಳ ಪ್ಲಾನ್:​ ನಾಳೆ ರಸ್ತೆಗಿಳಿಯೋ ಮುನ್ನ ಈ ಸುದ್ದಿ ಓದಿ…
ಖ್ಯಾತ ಕೃಷಿ ವಿಜ್ಞಾನಿ, ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂ.ಎಸ್​. ಸ್ವಾಮಿನಾಥನ್ ವಿಧಿವಶ
ವಿಶ್ವ ವೈದ್ಯಕೀಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ರೋಬೋಟಿಕ್ ಲಿವರ್ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:12 + 8 =
Remember me
