ತಿರುವನಂತಪುರಂ:ಕರೊನಾ ಪಾಸಿಟಿವ್​ ವರದಿಯಾಗಿ ಆಸ್ಪತ್ರೆ ಸೇರಿದ್ದ ಇಟಲಿ ಪ್ರವಾಸಿಗರೊಬ್ಬರು ಇದೀಗ ಸಂಪೂರ್ಣ ಗುಣಮುಖವಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಬೆನ್ನಲ್ಲೇ “ಕೇರಳ ಹೆಚ್ಚು ಸುರಕ್ಷಿತ” ಪ್ರದೇಶ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಬರ್ಟ್​ ಟೊನಿಜ್ಜೊ(40) ಗುಣಮುಖರಾದ ಇಟಲಿ ಪ್ರವಾಸಿಗ. ಕೇರಳದ ವರ್ಕಳಕ್ಕೆ ಭೇಟಿ ನೀಡಿದ್ದ ಟೊನಿಜ್ಜೊರಿಗೆ ಮಾರ್ಚ್​ 13ರಂದು ಕರೊನಾ ಪಾಸಿಟಿವ್​ ಪತ್ತೆಯಾಗಿತ್ತು. ಬಳಿಕ ಆಸ್ಪತ್ರೆಯಲ್ಲಿ ಕ್ವಾರಂಟೈನ್​ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಮಾರ್ಚ್​ 26ರಂದು ಕರೊನಾ ನೆಗೆಟಿವ್​ ವರದಿಯಾಗಿದ್ದು, ಇದೀಗ ಬಿಡುಗಡೆಗಡೆಯಾಗಿದ್ದಾರೆ.
ನನಗೆ ತುಂಬಾ ಸಂತೋಷವಾಗಿದೆ. ವೈದ್ಯರು ಹಾಗೂ ಇತರೆ ಸಿಬ್ಬಂದಿ ಸೇರಿದಂತೆ ನಾನು ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಕರೊನಾ ಕರಾಳ ಛಾಯೆ ಕೊನೆಗೊಂಡ ಬಳಿಕ ನಾನು ಮತ್ತೊಮ್ಮೆ ಇಲ್ಲಿಗೆ ಭೇಟಿ ನೀಡುತ್ತೇನೆ. ಕೇರಳ ನನ್ನ ಮನೆ ಇದ್ದಂತೆ. ಇಲ್ಲಿ ಹೆಚ್ಚು ಸುರಕ್ಷತೆ ಇದೆ. ನಾನೀಗ ನನ್ನ ತವರಿಗೆ ಹೊರಡುತ್ತೇನೆ. ಆದರೆ, ನಾನು ಮರಳಿ ಬರುತ್ತೇನೆ ಎಂದು ತಿಳಿಸಿದ್ದಾರೆ.
ಟೊನಿಜ್ಜೊಗಾಗಿ ಕೇರಳ ಸರ್ಕಾರ ವಾಹನ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದು, ಬೆಂಗಳೂರಿಗೆ ತಲುಪಲಿರುವ ಅವರು ಇನ್ನುಳಿದ ಇಟಲಿ ಪ್ರವಾಸಿಗರೊಂದಿಗೆ ಲಾಕ್​ಡೌನ್​ ಮುಗಿದ ಬಳಿಕ ತವರಿಗೆ ಹಾರಲಿದ್ದಾರೆ.
ಇದಕ್ಕೂ ಮುನ್ನ ಏಪ್ರಿಲ್​ 19ರಂದು ಮಾತನಾಡಿದ್ದ ಸಿಎಂ ಪಿಣರಾಯಿ ವಿಜಯನ್ ಯುನೈಟೆಡ್​ ಕಿಂಗ್​ಡಮ್​ನ​ 7 ಹಾಗೂ ಇಟಾಲಿಯನ್​ನ ಓರ್ವ ಪ್ರಜೆ ಕೋವಿಡ್​ -19ನಿಂದ ಗುಣಮುಖರಾಗಿದ್ದಾರೆ ಎಂದು ಮಾಹಿತಿ ನೀಡಿದ್ದರು.(ಏಜೆನ್ಸೀಸ್​)
ಆನ್​ಲೈನ್ ಮೂಲಕ ಖಾತೆಗೆ ಕನ್ನ: ಲಿಂಕ್ ಕ್ಲಿಕ್ ಮಾಡಲು ಹೇಳಿ 69 ಸಾವಿರ ರೂ. ಲಪಟಾಯಿಸಿದ ವಂಚಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
