ಮುಂಬೈ:ಅಯೋಧ್ಯೆಯ ಕಂಪನಿಯೊಂದು ಷೇರು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಈ ಕಂಪನಿಯ ಹೆಸರು ಪಕ್ಕಾ ಲಿಮಿಟೆಡ್. ಪಕ್ಕಾ ಲಿಮಿಟೆಡ್‌ನ (PAKKA Ltd.) ಷೇರುಗಳು ಇದೇ ತಿಂಗಳು ಜನವರಿ ಆರಂಭದಿಂದ ಇಲ್ಲಿಯವರೆಗೆ 148% ರಷ್ಟು ಏರಿಕೆ ಕಂಡಿವೆ.
ಜನವರಿ 22 ರಂದು ನಡೆಯುವ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಅಯೋಧ್ಯೆ ಮೂಲದ ಈ ಕಂಪನಿಯು ಮಿಶ್ರಗೊಬ್ಬರ ತಟ್ಟೆಗಳು, ಬಟ್ಟಲುಗಳು ಮತ್ತು ಚಮಚಗಳನ್ನು ಪೂರೈಸುತ್ತದೆ ಎಂದು ತಿಳಿದ ನಂತರ ಕಳೆದ ಒಂದು ವಾರದಲ್ಲಿ ಸ್ಮಾಲ್‌ ಕ್ಯಾಪ್ ಸ್ಟಾಕ್ ಬೆಲೆ ದ್ವಿಗುಣಗೊಂಡಿದೆ. ಗುರುವಾರ ಈ ಕಂಪನಿಯ ಷೇರುಗಳು 12% ಕ್ಕಿಂತ ಹೆಚ್ಚು ಏರಿಕೆ ಕಂಡವು. ಶನಿವಾರ (ಜ. 20) ಈ ಕಂಪನಿಯ ಷೇರುಗಳು 14.35 ರೂಪಾಯಿ (3.87%) ಹೆಚ್ಚಳವಾಗಿ 385.60 ರೂಪಾಯಿಗೆ ತಲುಪಿವೆ.
ಈ ಕಂಪನಿಯು ತಯಾರಿಸಿದ ಪರಿಸರ ಸ್ನೇಹಿ ಆಹಾರ ಪ್ಲೇಟ್‌ಗಳಲ್ಲಿ ಪ್ರಸಾದ ನೀಡಲಾಗುತ್ತದೆ.ರಾಮ ಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಪಕ್ಕಾ ಲಿಮಿಟೆಡ್‌ನಿಂದ ತಯಾರಿಸಿದ ಪರಿಸರ ಸ್ನೇಹಿ ಪ್ಲೇಟ್​ನಲ್ಲಿ ಭಕ್ತರಿಗೆ ಪ್ರಸಾದ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ.
‘ಕಾಂಪೊಸ್ಟ್​ ಟೇಬಲ್‌ವೇರ್‌ಗೆ ಹೆಸರುವಾಸಿಯಾದ ನಮ್ಮ ಪ್ರಮುಖ ಬ್ರ್ಯಾಂಡ್ CHUK ಅನ್ನು ರಾಮ ಮಂದಿರ ಟ್ರಸ್ಟ್‌, ರಾಮ ಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿದೆ. ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ. ಈ ಅತ್ಯಂತ ಮಹತ್ವದ ಕಾರ್ಯಕ್ರಮದಲ್ಲಿ ನಮ್ಮ ಪಾತ್ರವನ್ನು ನಿರ್ವಹಿಸಲು ನಾವು ಸಿದ್ಧರಿದ್ದೇವೆ” ಎಂದು ಕಂಪನಿಯ ಅಧಿಕಾರಿ ಹೇಳಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಪಕ್ಕಾ ಲಿಮಿಟೆಡ್‌ನ ಷೇರುಗಳು ಸುಮಾರು 250% ರಷ್ಟು ಜಿಗಿದಿವೆ. ಕಂಪನಿಯ ಷೇರುಗಳು 2023ರ ಜನವರಿ 19ರಂದು 92.80 ರೂಪಾಯಿ ಇದ್ದುದು, , 2024ರ ಜನವರಿ 18ರಂದು 323.75 ರೂಪಾಯಿಗೆ ತಲುಪಿವೆ. ಕಳೆದ 4 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಈ ಕಂಪನಿಯ ಷೇರುಗಳು 1507% ರಷ್ಟು ಹೆಚ್ಚಾಗಿವೆ. ಕಳೆದ 6 ತಿಂಗಳಲ್ಲಿ 160% ರಷ್ಟು ಹೆಚ್ಚಾಗಿವೆ.

ಎಚ್​ಡಿಎಫ್​ಸಿ ಷೇರು ಬೆಲೆ ಕುಸಿತವೇ ನಿಮಗೆ ಲಾಭಕ್ಕೆ ದಾರಿ: ಹೂಡಿಕೆ ವಿಶ್ಲೇಷಕರು ಹೀಗೇಕೆ ಹೇಳುತ್ತಾರೆ?

‘ಅಯೋಧ್ಯೆ ಸ್ಟಾಕ್ ಎಕ್ಸ್‌ಚೇಂಜ್’: ರಾಮ ಮಂದಿರ ಸಂಬಂಧಿ ಷೇರುಗಳಲ್ಲಿ ಅಪಾರ ಲಾಭ, ಹೂಡಿಕೆ ತಜ್ಞರ ಬೆಟ್ಟಿಂಗ್​

6 ತಿಂಗಳಲ್ಲಿ 1420% ಲಾಭ ನೀಡಿದ ಷೇರಿಗೆ ಭಾರಿ ಬೇಡಿಕೆ: ಸ್ಟಾಕ್ ಸ್ಪ್ಲಿಟ್​ಗೆ ಕಂಪನಿ ರೆಡಿಯಾಗಿದ್ದೇಕೆ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 × three =
Remember me
