ಮುಂಬೈ:ಸುದ್ದಿವಾಹಿನಿಯೊಂದು ಮಾಡಿದ ಯಡವಟ್ಟಿನಿಂದಾಗಿ ವ್ಯಕ್ತಿಯೊಬ್ಬ ಏನೂ ಅರಿಯದ ತಪ್ಪಿಗೆ ಹಗಲು ರಾತ್ರಿ ಶಿಕ್ಷೆ ಅನುಭವಿಸುವಂತಾಗಿದೆ.ಆಗಿದ್ದೇನು?: ಟಿವಿ ಸುದ್ದಿ ವಾಹಿನಿಯೊಂದು ನಟಿ ರಿಯಾ ಚಕ್ರವರ್ತಿಯದು ಎಂದು ಹೇಳಿ ಮೊಬೈಲ್ ಸಂಖ್ಯೆಯನ್ನು ಪ್ರಸಾರ ಮಾಡಿತ್ತು. ಆದರೆ ಅದರಲ್ಲಿ ಅಚಾತುರ್ಯದಿಂದಾಗಿ ಒಂದು ಸಂಖ್ಯೆ ತಪ್ಪಾಗಿದ್ದು, ಬೇರೊಬ್ಬನ ಮೊಬೈಲ್ ನಂಬರ್ ಅದಾಗಿದೆ.
ಇದನ್ನೂ ಓದಿ :ಇಂದು ವಿಶ್ವ ಆನೆ ದಿನ. ಆನೆಯ ಬದುಕು, ಬವಣೆಯ ಬಗ್ಗೆ ನಿಮಗೆಷ್ಟು ಗೊತ್ತು?
ಇದರಿಂದಾಗಿ, ರಿಯಾ ಚಕ್ರವರ್ತಿಯದೇ ಎಂದುಕೊಂಡ ಮೊಬೈಲ್ ಸಂಖ್ಯೆಗೆ ಹಲವು ದಿನಗಳ ಕಾಲ ಹಗಲು ರಾತ್ರಿ ಎನ್ನದೇ ಆ ನಂಬರ್​​ಗೆ ಕರೆ ಮಾಡಿ ಹಿಗ್ಗಾ ಮುಗ್ಗಾ (ಆಕೆಯನ್ನು) ನಿಂದಿಸುತ್ತಿದ್ದಾರೆ. ಈ ಮೊಬೈಲ್ ನಂಬರ್​​ನ ಅಸಲಿ ವ್ಯಕ್ತಿ ಕರೆ ಸ್ವೀಕರಿಸಿ ನಿಂದನೆಗೆ ಸುಸ್ತಾಗಿದ್ದಾರೆ.ನಟಿ ರಿಯಾ ಚಕ್ರವರ್ತಿಯ ಮೊಬೈಲ್ ನಂಬರ್ ಎಂದುಕೊಂಡು ಹಲವಾರು ಫೋನ್ ಕರೆಗಳು ಬರುತ್ತಿದ್ದು, ಇದರಿಂದ ನಾನು ಮಾನಸಿಕವಾಗಿ ತೀವ್ರ “ಆಘಾತಕ್ಕೊಳಗಾಗಿದ್ದೇನೆ ಎಂದು ಆತ ಹೇಳಿದ್ದಾರೆ.ಆತನ ಹೆಸರು ಸಾಗರ್ ಸುರ್ವೆ. ಶಿಕ್ಷಣ ಸಂಸ್ಥೆಯೊಂದಲ್ಲಿ  ಕ್ಲರ್ಕ್ ಆಗಿದ್ದಾರೆ. ಇದು ರಿಯಾ ನಂಬರ್ ಅಲ್ಲ ಎಂದು ಆತ ಹೇಳಿಕೊಂಡರೂ ಒಪ್ಪದೆ, ಕರೆ ಮಾಡಿದವರು ವೀಡಿಯೊ ಪ್ರೂಫ್ ಕಳುಹಿಸಲು ಆತನಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಕಳೆದ ವರ್ಷದ ಇದೇ ಸಮಯ ನೆನೆದು ದುಃಖಿಸಿದ ಪ್ರಣಬ್‌ ಮುಖರ್ಜಿ ಪುತ್ರಿ
ಆರಂಭದಲ್ಲಿ ಇದರ ತಳ ಬುಡ ಆತನಿಗೆ ಅರ್ಥವಾಗಿರಲಿಲ್ಲ. ನಂತರ ಸುದ್ದಿವಾಹಿನಿಯೊಂದು ರಿಯಾ ಚಕ್ರವರ್ತಿಯ ನಂಬರ್ ಎಂದು ಹೇಳಿಕೊಂಡು, ಅಚಾತುರ್ಯದಿಂದ ಒಂದು ಸಂಖ್ಯೆಯನ್ನು ಬದಲಿಸಿ ಫ್ಲ್ಯಾಷ್ ಮಾಡಿದ್ದೇ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ ಎಂದು ಆತನ ಸ್ನೇಹಿತರು ತಿಳಿಸಿದ ಮೇಲೆ ಆತನಿಗೆ ವಾಸ್ತವದ ಅರಿವಾಗಿದೆ.ಈ ಪ್ರಕರಣದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ ಆದರೆ ಅಧಿಕೃತ ದೂರು ನೀಡಲು ಇಷ್ಟವಿಲ್ಲ ಎಂದು ಸುರ್ವೆ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಕರೆಗಳಿಗೆ ಮುಕ್ತಿ ಹಾಡಲು, ಈ ತಲೆನೋವಿನಿಂದ ಪಾರಾಗಲು ಆತ ಮತ್ತೊಂದು ಫೋನ್ ಸಂಖ್ಯೆ ಬಳಕೆಗೆ ಮೊರೆಹೋಗಬೇಕಾಯಿತು.
ಇದನ್ನೂ ಓದಿ :ಇತ್ತ ಸಿಎಂ ಸೇತುವೆ ಉದ್ಘಾಟನೆ ಮಾಡ್ತಾಯಿದ್ರೆ, ಅತ್ತ ಸಂಪರ್ಕ ರಸ್ತೆ ಕೊಚ್ಚಿ ಹೋಗ್ತಾಯಿತ್ತು….!
ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಅವರ ತಂದೆ, ರಿಯಾ ಚಕ್ರವರ್ತಿಯೇ ಈ ಸಾವಿಗೆ ಕಾರಣ ಎಂಬರ್ಥದಲ್ಲಿ ಆರೋಪಿಸಿದ ಮೇಲೆ ಆಕೆಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆನ್ನಲಾದ ಆರೋಪದ ಮೇಲೆ ಎಫ್​​ಐಆರ್ ದಾಖಲಿಸಲಾಗಿತ್ತು.ಅದಾದ ನಂತರ ರಿಯಾ ಮತ್ತು ಆಕೆಯ ಕುಟುಂಬಕ್ಕೆ ಜಾರಿ ನಿರ್ದೇಶನಾಲಯ ಹಲವು ರೀತಿಯಲ್ಲಿ ಪ್ರಶ್ನಿಸಿ, ವಿಚಾರಣೆ ನಡೆಸಿದೆ ಮತ್ತು ಪ್ರತಿದಿನ ಆಘಾತಕಾರಿ ಅಂಶಗಳು ಹೊರಬರುತ್ತಿವೆ.
ಪಾಕ್‌ಗೆ ಬಿಗ್‌ ಷಾಕ್‌: ಸಾಲವೂ ಬಂದ್‌, ತೈಲವೂ ಬಂದ್‌ ಎಂದ ಸೌದಿ ಅರೇಬಿಯಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 20 =
Remember me
