ನವದೆಹಲಿ:1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಧರ್ಮದ ಆಧಾರದ ಮೇಲೆ ಭಾರತ ಹಾಗೂ ಪಾಕಿಸ್ತಾನವನ್ನು ಸ್ವತಂತ್ರ ದೇಶಗಳಾಗಿ ವಿಭಜಿಸಲಾಯಿತು. ದೇಶ ವಿಭಜನೆ ವೇಳೆ ಪಂಜಾಬ್​ ಪಾಂತ್ರದ ಸಿಯಾಲ್​ಕೋಟ್​ನಲ್ಲಿ ಹಿಂದೂಗಳು ಹೆಚ್ಚಾಗಿದ್ದ ಕಾರಣ ಈ ಪ್ರದೇಶ ಭಾರತದ ಭಾಗವಾಗುತ್ತಾ ಅಥವಾ ಪಾಕಿಸ್ತಾನದ ಪಾಲಾಗುತ್ತಾ ಎಂಬ ಗೊಂದಲ ಮೂಡಿತ್ತು. ಆದರೆ, ಅಂದು ಜನರು ಮಾಡಿದ ತಪ್ಪಿನಿಂದ ಸಿಯಾಲ್​ಕೋಟ್​ ಪಾಕಿಸ್ತಾನದ ಪಾಲಾಯಿತು.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ನಾಯಕರು ಕೂಡ ಸಿಯಾಲ್​ಕೋಟ್​ ಭಾರತದ ಭೂಪ್ರದೇಶದಲ್ಲಿ ಉಳಿಯಬೇಕೆಂದು ಬಯಸಿದ್ದರು ಏಕೆಂದರೆ ಸಿಯಾಲ್​ಕೋಟ್​ನಲ್ಲಿದ್ದ ಬಹುತೇಕ ಜನರು ಹಿಂದೂಗಳಾಗಿದ್ದರಿಂದ ಈ ಪ್ರದೇಶ ಭಾರತಕ್ಕೆ ಸೇರಬೇಕು ಎಂದು ಅನೇಕರು ಒತ್ತಾಯಿಸಿದ್ದರು. ಬಹುಪಾಲು ಜನರು ಹಿಂದೂಗಳಿದ್ದರಿಂದ ಈ ಪ್ರದೇಶ ಯಾವ ದೇಶಕ್ಕೆ ಸೇರಬೇಕು ಎಂಬುದನ್ನು  ಜನಾಭಿಪ್ರಾಯಕ್ಕೆ ಬಿಡಲಾಯಿತು. ಈ ಜನಾಭಿಪ್ರಾಯವನ್ನು ಮತದಾನದ ಮೂಲಕ ನಡೆಸಲಾಯಿತು.
ಈ ಒಂದು ಪ್ರಮುಖ ಮತದಾನದಲ್ಲಿ ಅಲ್ಲಿನ ಬಹುಪಾಲು  ಹಿಂದೂಗಳು ತೋರಿದ ಬೇಜವಾಬ್ದಾರಿತನದಿಂದ ಸಿಯಾಲ್ಕೋಟ್‌  ಸುಲಭವಾಗಿ ಪಾಕಿಸ್ತಾನದ ಕೈ ಸೇರಿತು. ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಕುರಿತು ಹಿರಿಯ ಪತ್ರಕರ್ತ ಪ್ರದೀಪ್​ ಸಿಂಗ್​ ಮಾತನಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಟ್ರೆಂಡ್​ ಆಗುತ್ತಿದೆ.
Hindus have been like this since ages!Thank you@23pradeepsinghfor this story of Sialkot voting 😭pic.twitter.com/SWN6QVM4E7
ಇದನ್ನೂ ಓದಿ: ಸಂತ್ರಸ್ತೆ ಕಿಡ್ನ್ಯಾಪ್​ ಪ್ರಕರಣ; ಭವಾನಿ ರೇವಣ್ಣಗೆ ಮಧ್ಯಂತರ ನಿರೀಕ್ಷಣಾ ಜಾಮೀನು
1947ರಲ್ಲಿ ಸಿಯಾಲ್ಕೋಟ್‌ ಭಾರತಕ್ಕೆ ಸೇರಬೇಕೋ ಅಥವಾ ಪಾಕಿಸ್ತಾನಕ್ಕೆ ಸೇರಬೇಕೋ ಎಂಬ ನಿರ್ಧಾರವನ್ನು ಅಲ್ಲಿನ ಜನಾಭಿಪ್ರಾಯಕ್ಕೆ ಬಿಡಲಾಯಿತು ಮತ್ತು ಇದಕ್ಕಾಗಿ ಮತದಾನವು ನಡೆಯಿತು. ಕಡಿಮೆ ಸಂಖ್ಯೆಯಲ್ಲಿದ್ದ ಮುಸ್ಲಿಮರು ಮತದಾನದ ದಿನದಂದು ಬೇಗನೇ ಎದ್ದು ಮತದಾನದ ಕೇಂದ್ರದ ಬಳಿ ಹೋಗಿ ಮತ ಚಲಾಯಿಸಲು ಸರತಿ ಸಾಲಿನಲ್ಲಿ ನಿಂತರು. ಆದರೆ ಅಲ್ಲಿನ ಹಿಂದೂಗಳು ನಿಧಾನಕ್ಕೆ ಹೋದರಾಯಿತು ಎಂದು ಬೇಜವಬ್ದಾರಿತನವನ್ನು ತೋರಿದರು ಮತ್ತು ಮತದಾನ ಮಾಡಲು ಹೋದಾಗ ಅಲ್ಲಿದ್ದ ಮುಸ್ಲಿಮರು ಸರತಿ ಸಾಲಿನಲ್ಲಿ ನಿಂತಿರುವುದನ್ನು ನೋಡಿ  ಅಯ್ಯೋ ಸರತಿ ಸಾಲಿನಲ್ಲಿ ನಿಲ್ಲಬೇಕಾ, ನಿಧಾನಕ್ಕೆ ಮತದಾನ ಚಲಾಯಿಸಿದರಾಯಿತು ಎಂದು ವಾಪಾಸ್‌ ಹೋಗುತ್ಥಾರೆ.
ಹೀಗೆ ಅಲ್ಲಿನ ಅರ್ಧಕ್ಕರ್ದ ಹಿಂದೂಗಳು ಮತದಾನವನ್ನೇ ಮಾಡುವುದಿಲ್ಲ. ಈ ಜನಾಭಿಪ್ರಾಯದ ಫಲಿತಾಂಶದಲ್ಲಿ 55 ಸಾವಿರ ಮತಗಳ ಅಗಾಧ ಬೆಂಬಲದಿಂದಾಗಿ, ಹಿಂದೂಗಳ ನ್ಯೂನತೆಯಿಂದಾಗಿ  ಸಿಯಾಲ್ಕೋಟ್‌ ಅನ್ನು ಪಾಕಿಸ್ತಾನಕ್ಕೆ ಸೇರಿಸುವ ಪ್ರಸ್ತಾಪವನ್ನು ಅಂಗೀಕರಿಸಲಾಯಿತು. ಆ ಅವಧಿಯಲ್ಲಿ ಸಿಯಾಲ್ಕೋಟ್‌ ಪ್ರದೇಶದಲ್ಲಿ  2 ಲಕ್ಷದ 31 ಸಾವಿರ ಹಿಂದೂಗಳಿದ್ದರು. ಅದರಲ್ಲಿ ಒಂದು ಲಕ್ಷದಷ್ಟು ಹಿಂದೂಗಳು ಮತದಾನದಿಂದ ದೂರ ಉಳಿದಿದ್ದರು. ಈ ಒಂದು ಕಾರಣದಿಂದಾಗಿ ಹಿಂದೂಗಳ ಪ್ರಾಬಲ್ಯ ಹೆಚ್ಚಿದ್ದ ಸಿಯಾಲ್ಕೋಟ್‌ ಪಾಕಿಸ್ತಾನಕ್ಕೆ ಸೇರಿತು. ಆ ನಂತರ ಅಲ್ಲಿದ್ದ ಹಿಂದೂಗಳ ಮಾರಣಹೋಮದಿಂದಾಗಿ  ಕೆಲ ವರ್ಷದ ಬಳಿಕ ಅಲ್ಲಿದ್ದ ಹಿಂದೂಗಳ ಸಂಖ್ಯೆ 2 ಲಕ್ಷದಿಂದ 10 ಸಾವಿರಕ್ಕೆ ಇಳಿಯುತ್ತದೆ. ಪುನಃ 5 ವರ್ಷದ ಬಳಿಕ ಅಲ್ಲಿನ ಹಿಂದೂಗಳ ಜನಸಂಖ್ಯೆ 500 ಕ್ಕೆ ಇಳಿಯಿತು.  ಅವತ್ತು ಅಲ್ಲಿನ ಪ್ರತಿಯೊಬ್ಬ ಹಿಂದೂಗಳು ಒಗ್ಗಟ್ಟಾಗಿ ಮತದಾನ ಮಾಡಿದ್ದರೆ ಇಂದು ಸಿಯಾಲ್ಕೋಟ್ ನಮ್ಮ ಭಾರತದಲ್ಲಿರುತ್ತಿತ್ತು ಎಂದು ಪ್ರದೀಪ್​ ಸಿಂಗ್ ಹೇಳಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಈ ವಿಡಿಯೋ 3ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದ್ದು, ಕಮೆಂಟ್​ಗಳ ಮೂಲಕ ಜನರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:4 + one =
Remember me
