ಭುವನೇಶ್ವರ್​:ಮಹಾಮಾರಿ ಕರೊನಾಗೆ ಕಡಿವಾಣ ಹಾಕಲು ಕಳೆದ ವರ್ಷ ಮಾರ್ಚ್​ನಲ್ಲಿ ರಾಷ್ಟ್ರಾದ್ಯಂತ ಲಾಕ್​ಡೌನ್​ ಘೋಷಿಸಲಾಗಿತ್ತು. ಈ ವೇಳೆ ರಾಮಾಯಣ ಸೇರಿದಂತೆ ಅನೇಕ ಹಳೇ ಧಾರಾವಾಹಿಗಳನ್ನು ಪ್ರದರ್ಶಿಸಲಾಗಿತ್ತು. ಇದೀಗ ಒಡಿಶಾದ ಹತ್ತು ವರ್ಷದ ಬಾಲಕನೊಬ್ಬ ಲಾಕ್​ಡೌನ್​ನಲ್ಲಿ ರಾಮಾಯಣ ಸೀರಿಯಲ್​ ನೋಡಿ ಮಕ್ಕಳಿಗಾಗಿ ರಾಮಯಾಣ ಪುಸ್ತಕವನ್ನೇ ಬರೆದಿದ್ದಾನೆ.
ಆಯುಷ್​ ಕುಮಾರ್​ ಕುಂತಿಯಾ ರಾಮಾಯಣ ಪುಸ್ತಕ ಬರೆದ ಬಾಲಕ. ತಮ್ಮದೇ ಒರಿಯಾ ಭಾಷೆಯಲ್ಲಿ ರಾಮಾಯಣವನ್ನು ಬರೆದಿದ್ದು, ಅದಕ್ಕೆ ಪಿಲಕಾ ರಾಮಾಯಣ (ಮಕ್ಕಳ ರಾಮಾಯಣ) ಎಂದು ಹೆಸರಿಡಲಾಗಿದೆ. ಪುಸ್ತಕವು 104 ಪುಟಗಳನ್ನು ಹೊಂದಿದೆ.
ಇದನ್ನೂ ಓದಿರಿ:ಮದುವೆ ಮಂಟಪಕ್ಕೆ ವಧು ಎಂಟ್ರಿ ಕೊಟ್ಟ ರೀತಿಗೆ ಅತಿಥಿಗಳು ಫಿದಾ..!
ಈ ಬಗ್ಗೆ ಮಾತನಾಡಿರುವ ಆಯುಷ್​, ಲಾಕ್​ಡೌನ್​ ಸಮಯದಲ್ಲಿ ಟಿವಿಯಲ್ಲಿ ಮರು ಪ್ರಸಾರ ಆಗುವ ರಾಮಾಯಣ ವೀಕ್ಷಿಸುವಂತೆ ನನ್ನ ಅಂಕಲ್​ ಹೇಳಿದರು. ವೀಕ್ಷಿಸುವುದು ಮಾತ್ರವಲ್ಲದೆ ಏನಾದರೂ ಬರೆಯಲು ಸೂಚಿಸಿದರು.
ದೂರದರ್ಶನದಲ್ಲಿ ಪ್ರತಿದಿನ ಪ್ರಸಾರವಾಗುತ್ತಿದ್ದ ರಾಮಾಯಣದ ಎಲ್ಲ ಎಪಿಸೋಡ್​ಗಳನ್ನು ನೋಡಿದೆ. ಪ್ರತಿ ಎಪಿಸೋಡ್​ ಮುಗಿದ ಬಳಿಕ ಅದರ ಬಗ್ಗೆ​ ನೋಟ್​ಬುಕ್​ನಲ್ಲಿ ಬರೆದುಕೊಳ್ಳುತ್ತಿದ್ದೆ. ಪುಸ್ತಕವನ್ನು ಮುಗಿಸಲು ಸುಮಾರು 2 ತಿಂಗಳು ತೆಗೆದುಕೊಂಡಿತು ಎಂದು ಆಯುಷ್​ ಹೇಳಿದ್ದಾನೆ.
ರಾಮನ 14 ವರ್ಷಗಳ ವನವಾಸ ಮತ್ತು ರಾವಣ, ಸೀತೆಯನ್ನು ಅಪಹರಿಸಿದ್ದು ಸೇರಿದಂತೆ ಅನೇಕ ಪ್ರಮುಖ ಘಟನೆಗಳನ್ನು ರಾಮಾಯಣ ಪುಸ್ತಕದಲ್ಲಿ ಪ್ರಸ್ತುತಪಡಿಸಿದ್ದೇನೆ. ಅಲ್ಲದೆ, ರಾಮ ಅಯೋಧ್ಯೆಗೆ ಹಿಂದಿರುಗಿದಾಗ ಆತನಿಗೆ ಸಿಕ್ಕ ಭವ್ಯ ಸ್ವಾಗತವನ್ನು ಸಹ ವಿವರಿಸಿದ್ದೇನೆಂದು ಆಯುಷ್​ ಮಾಹಿತಿ ನೀಡಿದನು.(ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

‘ಉತ್ತರ ಪ್ರದೇಶದಲ್ಲಿ 350 ಸೀಟು ಗೆದ್ದೇ ಗೆಲ್ಲುತ್ತೇವೆ’

ಮದುವೆ ಮಂಟಪಕ್ಕೆ ವಧು ಎಂಟ್ರಿ ಕೊಟ್ಟ ರೀತಿಗೆ ಅತಿಥಿಗಳು ಫಿದಾ..!

“ಮೋದಿಗೆ ತಮಿಳುನಾಡು ಟಿವಿ ಥರ… ರಿಮೋಟ್​ನಿಂದ ಸಿಎಂನ ಕಂಟ್ರೋಲ್ ಮಾಡ್ತಾರೆ !”

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − one =
Remember me
