ನವದೆಹಲಿ:ಮಕ್ಕಳು ಸಂತೋಷ ಹಂಚುವವರು ಎನ್ನುತ್ತಾರೆ. ಆದರೆ ಇಲ್ಲೊಂದು ಮಗು ನಿಜಕ್ಕೂ ದೈವ ಸ್ವರೂಪ ತಾಳಿ ಅನೇಕ ಜನರಿಗೆ ಹೊಸ ನೀಡಿರುವ ಘಟನೆ ನಡೆದಿದೆ. 20 ವರ್ಷದ ಧನಿಷ್ಠ ಇದೀಗ ದೇಶದ ಅತ್ಯಂತ ಕಿರಿಯ ವಯಸ್ಸಿನ ಬಹುಅಂಗಾಂಗ ದಾನಿಯಾಗಿ ಹೆಸರಾಗಿದ್ದಾರೆ.
ಇದನ್ನೂ ಓದಿ:ಅಪ್ಪನಿಂದ ಬಂದಿರುವ ಆಸ್ತಿ ಹಂಚಿಕೆಯಲ್ಲಿ ನನಗೆಷ್ಟು ಹಕ್ಕಿದೆ? ಹೇಗಾದರೂ ಪಾಲು ಮಾಡಬಹುದಾ?
ರಾಷ್ಟ್ರ ರಾಜಧಾನಿ ದೆಹಲಿಯ ಆಶಿಶ್​ ಕುಮಾರ್​ ಮತ್ತು ಬಬಿತಾ ಅವರ 20 ತಿಂಗಳ ಮಗಳು ಧನಿಷ್ಠ ಜನವರಿ 8ರಂದು ಮನೆಯ ಬಾಲ್ಕನಿಯಲ್ಲಿ ಆಟ ಆಡುವಾಗ ಕಾಲು ತಪ್ಪಿ ಮೊದಲನೇ ಮಹಡಿಯಿಂದ ಕೆಳಕ್ಕೆ ಬಿದ್ದಿದ್ದಾಳೆ. ಆಕೆಯನ್ನು ತಕ್ಷಣವೇ ಸರ್​ ಗಂಗಾರಾಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದಾರೂ ಅದು ಫಲಕಾರಿಯಾಗದೆ ಧನಿಷ್ಠಳ ಮಿದುಳು ಜನವರಿ 11ರಂದು ಕೆಲಸ ನಿಲ್ಲಿಸಿದೆ. ಮಿದುಳಿನ ಹೊರೆತಾಗಿ ಬೇರೆಲ್ಲ ಅಂಗಗಳು ಚೆನ್ನಾಗಿದ್ದವು. ಆದರೆ ಮಿದುಳು ಸತ್ತ ನಂತರ ವ್ಯಕ್ತಿ ಹೆಚ್ಚೆಂದರೆ ಎರಡು ಮೂರು ದಿನಗಳ ಕಾಲ ಬದುಕಬಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಆಶಿಶ್​ ದಂಪತಿ ಒಂದು ಗಟ್ಟಿ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಧನಿಷ್ಠಳ ಅಂಗಾಂಗಳನ್ನು ದಾನ ಮಾಡುವುದಾಗಿ ಆಶಿಶ್​ ದಂಪತಿ ನಿರ್ಧರಿಸಿದ್ದಾರೆ. ಅದರಂತೆ ಆಕೆಯ ಎರಡು ಕಣ್ಣುಗಳು, ಹೃದಯ, ಎರಡು ಕಿಡ್ನಿ ಮತ್ತು ಕರುಳನ್ನು ದಾನ ಮಾಡಲಾಗಿದೆ. ತಾನು ಕೊನೆಯುಸಿರೆಳೆಯುವುದಕ್ಕೆ ಮುನ್ನ ಮಗು ಐದು ಜನರಿಗೆ ಹೊಸ ಜೀವನವನ್ನು ಕೊಟ್ಟು ಪ್ರಾಣ ಬಿಟ್ಟಿದೆ.
ಇದನ್ನೂ ಓದಿ:ಬ್ಯೂಟ್‌ ಕ್ವೀನ್‌ ಮೇಲೆ ಗ್ಯಾಂಗ್‌ರೇಪ್‌- ಕೊಲೆ: ಶೌಚಗೃಹದಲ್ಲಿ ಸಿಕ್ಕಿತು ರಕ್ತಸಿಕ್ತ ದೇಹ
ಪ್ರೀತಿಯಿಂದ ಸಾಕಿದ್ದ ಮಗಳನ್ನು ಆ ಪರಿಸ್ಥಿತಿಯಲ್ಲಿ ನೋಡುವುದು ಕಷ್ಟವಾಗಿತ್ತು. ಆದರೆ ಅದೆಷ್ಟೋ ರೋಗಿಗಳು ಅಂಗಾಂಗಳಿಗಾಗಿ ಪರದಾಡುತ್ತಿದ್ದುದ್ದನ್ನು ನಾನು ಆಸ್ಪತ್ರೆಯಲ್ಲಿ ನೋಡಿದೆ. ನನ್ನ ಮಗಳು ಬದುಕುವುದಿಲ್ಲ ಎಂದು ತಿಳಿದ ಮೇಲೆ ಆಕೆಯಿಂದ ಇನ್ನೊಂದಿಷ್ಟು ಜೀವಗಳಾದರೂ ಸಂತೋಷ ಪಡಲಿ ಎಂದು ಅಂಗಾಂಗ ದಾನ ಮಾಡುವ ನಿರ್ಧಾರ ತೆಗೆದುಕೊಂಡೆ ಎಂದು ಆಶಿಶ್​ ತಿಳಿಸಿದ್ದಾರೆ. (ಏಜೆನ್ಸೀಸ್​)
ಮಗನ ದುರಾಸೆಗೆ ತಂದೆ ಬಲಿ: ಅಂತ್ಯಸಂಸ್ಕಾರ ಮಾಡ್ಬೇಕು ಎಲ್ಲಿದ್ರೂ ಬೇಗ ಬಾ ಮಗನೇ… ತಾಯಿಯ ಗೋಳಾಟ

ಡ್ರಾಪ್ ಕೊಟ್ಟ ಮಹಿಳೆಯ ದೇಹದ ಬಗ್ಗೆ ಕೆಟ್ಟದಾಗಿ ಪ್ರಶ್ನಿಸಿದ ಶಾಲಾ ಬಾಲಕ: ವಿಡಿಯೋ ಹರಿಬಿಟ್ಟ ಸಂತ್ರಸ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
