ನವದೆಹಲಿ:ಬೋಡೊ ಉಗ್ರಸಂಘಟನೆಯ ಎಲ್ಲ ಬಣಗಳೊಂದಿಗೆ ಇಂದು ಕೇಂದ್ರ ಸರ್ಕಾರ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದೆ. ಕೇಂದ್ರ ಗೃಹ ಸಚಿವ ಅಮಿತ್​ ಷಾ ಹಾಗೂ ನ್ಯಾಷನಲ್​ ಡೆಮಾಕ್ರಟಿಕ್​ ಫ್ರಂಟ್​ ಆಫ್​ ಬೋಡೋಲ್ಯಾಂಡ್​ ಉಗ್ರ ಸಂಘಟನೆಯ ಎಲ್ಲ ಬಣಗಳ ಪ್ರತಿನಿಧಿಗಳು ಸಹಿ ಮಾಡಿದ್ದಾರೆ.
ಈಶಾನ್ಯ ರಾಜ್ಯದಲ್ಲಿ ಶಾಂತಿ ಸ್ಥಾಪನೆ ಮಾಡುವ ಉದ್ದೇಶದಿಂದ ಬೋಡೋಲ್ಯಾಂಡ್​ ಪ್ರತ್ಯೇಕ ರಾಜ್ಯಕ್ಕಾಗಿ ಬಂಡಾಯ ಎದ್ದಿದ್ದ ಉಗ್ರರೊಡನೆ ಮಾಡಿಕೊಂಡ ಈ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಸರಣಿ ಟ್ವೀಟ್ ಮೂಲಕ ಈ ನಡೆಯನ್ನು ಶ್ಲಾಘಿಸಿದ್ದಾರೆ.
ಇಂದು ಭಾರತದ ಪಾಲಿಗೆ ವಿಶೇಷವಾದ ದಿನ. ಶಾಂತಿ, ಸಾಮರಸ್ಯ ಹಾಗೂ ಒಗ್ಗಟ್ಟಿನ ಹೊಸ ಅಧ್ಯಾಯವೊಂದು ಪ್ರಾರಂಭವಾಗುತ್ತಿದೆ. ಬೋಡೋ ಸಂಘಟನೆಯೊಂದಿಗೆ ಇಂದು ಆಗಿರುವ ತ್ರಿಪಕ್ಷೀಯ ಒಪ್ಪಂದ ಬೋಡೊ ಜನರ ಬದುಕಲ್ಲಿ ದೊಡ್ಡ ಪರಿವರ್ತನೆಯನ್ನು ತರಲಿದೆ ಎಂದು ಹೇಳಿದ್ದಾರೆ.
ಇಂದು ಸಹಿ ಹಾಕಲಾದ ಬೋಡೊ ಒಪ್ಪಂದಕ್ಕೆ ಹಲವು ಕಾರಣಗಳು ಇವೆ. ಇದು ಹಲವು ಮಧ್ಯವರ್ತಿಗಳನ್ನು ಒಂದು ಚೌಕಟ್ಟಿನೊಳಗೆ ತರುತ್ತದೆ. ಸ್ವಲ್ಪ ದಿನಗಳ ಕೆಳಗೆ ಶಸ್ತ್ರಾಸ್ತ್ರಗಳನ್ನು ಹಿಡಿದು ಎಲ್ಲರಿಂದಲೂ ವಿರೋಧ ಎದುರಿಸುತ್ತ, ಎಲ್ಲರನ್ನೂ ವಿರೋಧಿಸುತ್ತಿದ್ದ ಜನರು ಈಗ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಈ ದೇಶದ ಬೆಳವಣಿಗೆಗೆ ಕೊಡುಗೆಯನ್ನು ನೀಡಲು ಮುಂದಾಗಿದ್ದಾರೆ ಎಂದು ಮೋದಿಯವರು ಟ್ವೀಟ್​ ಮಾಡಿದ್ದಾರೆ.
ಬೋಡೊ ಒಪ್ಪಂದವರು ಆ ಜನಾಂಗದ ವಿಭಿನ್ನ ಸಂಸ್ಕೃತಿಯನ್ನು ರಕ್ಷಣೆ ಮಾಡುವ ಜತೆಗೆ ಅದನ್ನು ಪ್ರಸಿದ್ಧಗೊಳಿಸುತ್ತದೆ. ಅವರ ಸರ್ವಾಂಗೀಣ ಅಭಿವೃದ್ಧಿಗೆ ದಾರಿಯಾಗುತ್ತದೆ ಎಂದು ಮೋದಿ ತಿಳಿಸಿದ್ದಾರೆ.ಜನವರಿ 30ರಂದು ನ್ಯಾಷನಲ್​ ಡೆಮಾಕ್ರಟಿಕ್​ ಫ್ರಂಟ್​ ಆಫ್​ ಬೋಡೋಲ್ಯಾಂಡ್​ ಉಗ್ರ ಸಂಘಟನೆಯ 1550 ಕಾರ್ಯಕರ್ತರು 130 ಶಸ್ತ್ರಗಳೊಂದಿಗೆ ಶರಣಾಗಲಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + six =
Remember me
