ಮಧ್ಯಪ್ರದೇಶ:ಬ್ಯಾಂಕ್ ಖಾತೆಯಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿರುವ ಬಗ್ಗೆ ಮಾಹಿತಿ ಪಡೆದುಕೊಂಡ ದೆಹಲಿ ಪೊಲೀಸರು, ನೋಟೀಸ್ ನೀಡುತ್ತಿದ್ದಂತೆ ಕೂಲಿ ಕೆಲಸ ಮಾಡುತ್ತಿದ್ದ ನಾಲ್ವರು ಯುವಕರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ತಮ್ಮ ಖಾತೆಯಲ್ಲಿ ಇಷ್ಟೊಂದು ಮೊತ್ತದ ವ್ಯವಹಾರ ನಡೆಯಲು ಹೇಗೆ ಸಾಧ್ಯ ಎಂದು ಬ್ಯಾಂಕ್ ಸ್ಟೇಟ್​ಮೆಂಟ್ ಪಡೆದು ಪರಿಶೀಲಿಸಿದ್ದಾರೆ.
ಎಚ್‌ಡಿಎಫ್‌ಸಿ ಬ್ಯಾಂಕ್‌ ನೌಕರ ಪ್ರಿಯಾಂಶ್ ಬಂಜಾರಿ ಎಂಬಾತನಿಗೆ ಹೊಸ ಬ್ಯಾಂಕ್ ಖಾತೆ ತೆರೆಯುವ ಗುರಿ ನೀಡಲಾಗಿತ್ತು. ಇದಕ್ಕಾಗಿ ತನ್ನ ಗ್ರಾಮದ ಕೆಲ ಯುವಕರ ದಾಖಲೆ ಸಂಗ್ರಹಿಸಿ, ಜೀರೋ ಬ್ಯಾಲೆನ್ಸ್‌ನಲ್ಲಿ ಖಾತೆ ತೆರೆದಿದ್ದಾನೆ. ಕೂಲಿ ಕಾರ್ಮಿಕರಾಗಿದ್ದ ಸ್ನೇಹಿತರು, ಈತನ ಮಾತಿಗೆ ಮರುಳಾಗಿದ್ದಾರೆ. ಹೀಗಾಗಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ನೀಡಿದ್ದರು. ಬಳಿಕ ಕೂಲಿ ಕೆಲಸ ಆರಿಸಿ ಹೊರರಾಜ್ಯಕ್ಕೆ ತೆರಳಿದ್ದಾರೆ. ಆದರೆ ತಮ್ಮ ಹೆಸರಿನಲ್ಲಿ ಖಾತೆ ತೆರೆಯಲಾಗಿದೆಯೇ? ಇಲ್ಲವೇ ಎಂಬ ಬಗ್ಗೆ ಯಾವುದೇ ಪಡೆದುಕೊಂಡಿರಲಿಲ್ಲ.
ಇದನ್ನೂ ಓದಿ:ವಿದ್ಯುತ್ ಕಡಿತ​ ಸಮಸ್ಯೆ; ಮಹಿಳೆಯರ ಆಕ್ರೋಶಕ್ಕೆ ಪುಡಿಪುಡಿಯಾಯ್ತು ಪವರ್ ಹೌಸ್​ನ ಕಿಟಿಕಿ, ಬಾಗಿಲು!
ನಾಲ್ವರು ಯುವಕರ ಖಾತೆಯಲ್ಲಿ ಸುಮಾರು 77 ಕೋಟಿ ರೂ. ವಹಿವಾಟು ನಡೆದಿರುವುದನ್ನು ಕಂಡು ಐಟಿ ಅಧಿಕಾರಿಗಳು ಪರಿಶೀಲನೆಗೆ ಮುಂದಾಗಿದ್ದಾರೆ. ಈ ಬಗ್ಗೆ ದೆಹಲಿ ಪೊಲೀಸರು ವಹಿವಾಟಿನ ಬಗ್ಗೆ ಉತ್ತರಿಸುವಂತೆ ಯುವಕರಿಗೆ ನೋಟಿಸ್ ಕಳುಹಿಸಿದ್ದು, ಕೋಟ್ಯಾಂತರ ರೂಪಾಯಿ ವ್ಯವಹಾರದ ಬಗ್ಗೆ ದಾಖಲೆ ಒದಗಿಸಿ, ಸ್ಪಷ್ಟನೆ ನೀಡುವಂತೆ ಹೇಳಿದ್ದಾರೆ.
ಈ ಬಗ್ಗೆ ಸಂತ್ರಸ್ತ ಯುವಕರು ನ್ಯಾಯ ಒದಗಿಸಿಕೊಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ತಮ್ಮ ಖಾತೆಯಲ್ಲಿನ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಬ್ಯಾಂಕ್ ಕೂಡ ತನಿಖೆ ನಡೆಸುವುದಾಗಿ ಭರವಸೆ ನೀಡಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ತುಂಡುಡುಗೆ ಧರಿಸಿ ಬರುವ ಭಕ್ತರಿಗೆ ಇನ್ನು ಮುಂದೆ ಈ ದೇವಸ್ಥಾನ ಪ್ರವೇಶಕ್ಕೆ ಅವಕಾಶವಿಲ್ಲ!
ಈ ಬಗ್ಗೆ ಮಾಹಿತಿ ಪಡೆದುಕೊಂಡು ಯುವಕರ ಖಾತೆಯಿಂದ ನಡೆದಿದೆ ಎನ್ನಲಾದ ಕೋಟ್ಯಾಂತರ ರೂಪಾಯಿ ಹಣ ವ್ಯವಹಾರದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಇನ್ನಷ್ಟು ಯುವಕರು ಈ ರೀತಿಯ ವಂಚನೆಗೆ ಒಳಗಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಸದ್ಯ ಪೊಲೀಸರ ತನಿಖೆಯಿಂದ ಹೇಗೆ ಇಷ್ಟೊಂದು ಮೊತ್ತದ ಹಣ ವಹಿವಾಟು ನಡೆಯಿತು ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
