ಉತ್ತರಪ್ರದೇಶ: ದಲಿತ ಸಮುದಾಯದ ಮೂವರು ಅಕ್ಕ-ತಂಗಿಯರ ಮನೆಗೆ ಮಧ್ಯರಾತ್ರಿ ತೆರಳಿ ಆ್ಯಸಿಡ್​ ಎರಚಿದ್ದ ದುಷ್ಕರ್ಮಿಯನ್ನು ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಗಾಯಗೊಂಡಿರುವ ಆತನನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉತ್ತರಪ್ರದೇಶದ ಗೊಂಡಾ ಜಿಲ್ಲೆಯ ಕಲೊನೆಲ್​ಗಂಜ್ ಪ್ರದೇಶದಲ್ಲಿ ಬೈಕ್​ನಲ್ಲಿ ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದ ಆರೋಪಿ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಗಾಯಗೊಂಡು ಬಿದ್ದ ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಮಾಹಿತಿ ಪೊಲೀಸರು ಇನ್ನಷ್ಟೇ ಬಹಿರಂಗಗೊಳಿಸಬೇಕಾಗಿದೆ.
ಇದನ್ನೂ ಓದಿ:ಆಕೆಯ ಮದ್ವೆಗೆ 10 ದಿನಗಳಿದ್ದವು; ಆದರೆ ಮಧ್ಯರಾತ್ರಿ ನಡೆದ ಆ ಘಟನೆ, ಆ ಮೂವರನ್ನೂ ಬೆಚ್ಚಿ ಬೀಳಿಸಿತ್ತು!
ಗೊಂಡಾ ಜಿಲ್ಲೆಯ ಪರಸ್ಪುರ್​ ಪ್ರದೇಶದಲ್ಲಿನ ಮನೆಯ ಮಹಡಿಯಲ್ಲಿ ಸೋಮವಾರ ಮೂವರೂ ಸೋದರಿಯರು ಮಲಗಿದ್ದಾಗ, ಮಧ್ಯರಾತ್ರಿ ತೆರಳಿದ್ದ ಆರೋಪಿ ಆ್ಯಸಿಡ್ ಎರಚಿ ಪರಾರಿಯಾಗಿದ್ದ. ಈ ಕೃತ್ಯದಿಂದ ಇನ್ನು ಹತ್ತು ದಿನಗಳಲ್ಲಿ ಮದುವೆ ಆಗಬೇಕಿದ್ದ 17 ವರ್ಷದ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಇದೇ ವೇಳೆ ಈಕೆಯ ತಂಗಿಯರಾದ 12 ಹಾಗೂ 8 ವರ್ಷದ ಇಬ್ಬರು ಬಾಲಕಿಯರಿಗೂ ಚಿಕ್ಕಪುಟ್ಟ ಗಾಯಗಳಾಗಿವೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − five =
Remember me
