ಮುಂಬೈ:ಸಾಮಾನ್ಯವಾಗಿ ಸೆಲೆಬ್ರಿಟಿಗಳು ನಾಯಿ, ಬೆಕ್ಕಿನ ಮರಿಗಳನ್ನು ಸಾಕುವುದು ಕಾಣಬಹುದು. ಹಾಗೆಯೇ ತಮ್ಮ ನೆಚ್ಚಿನ ಈ ಪ್ರಾಣಿಗಳನ್ನು ಚುಂಬಿಸುವುದು, ಮೇಮೇಲೆ ಎಳೆದುಕೊಳ್ಳುವುದನ್ನೂ ನೋಡಿರುತ್ತೇವೆ. ಆದರೆ ಹಾವುಗಳನ್ನು ಸಾಕುವ ಹವ್ಯಾಸವನ್ನು ನೀವು ಎಂದಾದರೂ ಕೇಳಿದ್ದೀರಾ?
ಇದನ್ನೂ ಓದಿ:ಚಿಲಿಯಲ್ಲಿ ಬಾನೆತ್ತರಕ್ಕೆ ಎದ್ದಿದೆ ಕಾಡ್ಗಿಚ್ಚು: 46 ಜನರ ದಾರುಣ ಸಾವು – ಸಾವಿರಾರು ಮಂದಿಗೆ ಗಾಯ!
ಹೌದು, ಬಾಲಿವುಡ್ ನಾಯಕಿ ಸುಶ್ಮಿತಾ ಸೇಂಕಿ ಹಾವು ಸಾಕಿ ಸಂತೋಷ ಕಂಡುಕೊಂಡಿದ್ದಾಳೆ. ಆಕೆಗೆ ಹಾವುಗಳ ಹುಚ್ಚು. ಅದೇ ಪ್ರೀತಿಯಿಂದ ಹೆಬ್ಬಾವನ್ನು ಸಾಕುತ್ತಿದ್ದಾಳೆ ಎಂಬ ಮಾತು ಬಾಲಿವುಡ್ ನಲ್ಲಿ ಕೇಳಿಬರುತ್ತಿದೆ.
ಬಿಡುವಿನ ವೇಳೆ ಗುಡ್ಡಗಾಡಿನಲ್ಲಿ ತನ್ನ ಸಾಕು ಪ್ರಾಣಿ ಹೆಬ್ಬಾವಿನೊಂದಿಗೆ ಆಟವಾಡುತ್ತಾ ಖುಷಿಪಡುತ್ತಾಳೆ. ಆದರೆ, ಸುಶ್ಮಿತಾ ತನ್ನ ಹೆಬ್ಬಾವಿನ ಬಗ್ಗೆ ಏನನ್ನೂ ಹೇಳುವುದಿಲ್ಲ, ಈ ವಿಷಯವನ್ನು ಅವರ ಆಪ್ತರು ಮಾಧ್ಯಮಗಳಿಗೆ ಲೀಕ್ ಮಾಡಿದ್ದಾರೆ. ಇದನ್ನು ಸುಶ್ಮಿತಾ ನಿರಾಕರಿಸದ ಕಾರಣ ಬಾಲಿವುಡ್ ಮಂದಿ ಇದನ್ನೇ ನಿಜವೆಂದು ನಂಬಿದ್ದಾರೆ.
ಜನರು ಹೆಬ್ಬಾವನ್ನು ಮುಟ್ಟುವ ಧೈರ್ಯ ಮಾಡುವುದು ಕಡಿಮೆ. ಅಷ್ಟೇಕೆ ಹಾವುಗಳೆಂದರೆ ಸಹಜವಾಗಿಯೇ ಎಂತಹವರಿಗೂ ಭಯ. ಎಲ್ಲೋ ದೂರದಲ್ಲಿ ಸಣ್ಣ ಹಾವು ಕಂಡರೆ ಭಯದಿಂದ ಓಡುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ಹೆಬ್ಬಾವು ಸಾಕಿ ಅದನ್ನು ನಾಯಿಮರಿಯಂತೆ ಮುದ್ದಿಸುವುದು, ಚುಂಬಿಸುವುದನ್ನು ಸುಶ್ಮಿತಾ ಮಾಡುತ್ತಿರುವುದು ಬಾಲಿವುಡ್​ನಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅಧ್ಯಕ್ಷೀಯ ನಾಮನಿರ್ದೇಶನ ಸ್ಪರ್ಧೆಯಲ್ಲಿ ಬಿಡೆನ್​ಗೆ ಮೊದಲ ಗೆಲುವು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen − 3 =
Remember me
