ನವದೆಹಲಿ:ಚೀನಾದಲ್ಲಿ ಕೊರೊನಾ ವೈರಸ್​ ಭಯದಲ್ಲಿದ್ದ ಭಾರತೀಯರನ್ನು ಸ್ವದೇಶಕ್ಕೆ ತಂದಿಳಿಸಿದ ಏರ್​ ಇಂಡಿಯಾ ಸಿಬ್ಬಂದಿಗಳಿಗೆ ಸಂಸ್ಥೆಯು ಒಂದು ಸಿಹಿ ಸುದ್ದಿಯನ್ನು ನೀಡಿದೆ. ವಿಶೇಷ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಸಿಬ್ಬಂದಿಗಳಿಗೆ ಒಂದು ವಾರದ ಕಾಲ ರಜೆ ನೀಡಲಾಗಿದೆ.
ಶನಿವಾರ ಮತ್ತು ಭಾನುವಾರದಂದು ಎರಡು ವಿಶೇಷ ವಿಮಾನಗಳು ಚೀನಾದ ವುಹಾನ್​ನಿಂದ ಭಾರತಕ್ಕೆ ಬಂದಿಳಿದಿವೆ. ಅದರಲ್ಲಿ ಏಳು ಮಾಲ್ಡೀವ್ಸ್ ನಾಗರಿಕರು ಸೇರಿದಂತೆ ಒಟ್ಟು 647 ಜನರು ಭಾರತಕ್ಕೆ ಬಂದಿಳಿದಿದ್ದಾರೆ. ಈ ವಿಶೇಷ ವಿಮಾನಗಳಲ್ಲಿ ಭಾರತೀಯರನ್ನು ಕರೆ ತರಲು ಒಟ್ಟು 60 ಜನರ ವಿಶೇಷ ತಂಡ ಹೋಗಿತ್ತು. 30 ಜನ ಕ್ಯಾಬಿನ್​ ಕ್ರ್ಯೂಗಳು, 10 ಕಮರ್ಷಿಯಲ್​ ಸ್ಟಾಫ್​ಗಳು, 8 ಪೈಲೆಟ್​ಗಳು ಒಬ್ಬ ಹಿರಿಯ ಅಧಿಕಾರಿ ಇದರಲ್ಲಿ ಭಾಗಿಯಾಗಿದ್ದರು. ವಿಶೇಷ ಕಾರ್ಯಾಚರಣೆಯ ಮೂಲಕ ಸ್ವದೇಶಕ್ಕೆ ಜನರನ್ನು ಕರೆತಂದಿರುವ ಈ ತಂಡಕ್ಕೆ ಅಭಿನಂದಿಸಲಾಗಿದ್ದು, ಒಂದು ವಾರದ ಕಾಲ ಇವರೆಲ್ಲರಿಗು ರಜೆ ನೀಡಿರುವುದಾಗಿ ಏರ್​ ಇಂಡಿಯಾದ ವಕ್ತಾರರು ತಿಳಿಸಿದ್ದಾರೆ.
ವಿಶೇಷ ತಂಡದ ನೇತೃತ್ವವನ್ನು ಏರ್​ ಇಂಡಿಯಾದ ನಿರ್ದೇಶಕ ಕ್ಯಾಪ್ಟನ್​ ಅಮಿತಾಬ್​ ಸಿಂಗ್​ ವಹಿಸಿಕೊಂಡಿದ್ದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
