ಶ್ರೀನಗರ:ಕಾಶ್ಮೀರದಲ್ಲಿನ ಹಿಮಪರ್ವತಗಳಲ್ಲಿ 3,880 ಮೀಟರ್ ಎತ್ತರದಲ್ಲಿರುವ ಅಮರನಾಥ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಯಾತ್ರೆಯು ಹಿಂದಿನ ವರ್ಷದ ದಾಖಲೆ ಮುರಿದು ಈ ಬಾರಿ ಹೊಸ ದಾಖಲೆ ನಿರ್ಮಿಸಿದೆ.
ಇದನ್ನೂ ಓದಿ:ಹಾವು ಕಡಿತಕ್ಕೆ ಹೊಸ ಔಷಧಿ..ಈ ಔಷಧಿ ಅಂಗವಿಕಲತೆ ತಡೆಗೆ ರಾಮಬಾಣದಂತೆ ಕೆಲಸ ಮಾಡುತ್ತೆ!
ಯಾತ್ರೆ ಪ್ರಾರಂಭವಾದ ಕೇವಲ 29 ದಿನಗಳಲ್ಲಿ 4.51 ಲಕ್ಷ ಭಕ್ತರು ಈ ಯಾತ್ರೆಯಲ್ಲಿ ಪಾಲ್ಗೊಂಡು ಅಮರನಾಥ ಗುಹೆಗಳಲ್ಲಿರುವ ಹಿಮ ಶಿವಲಿಂಗದ ದರ್ಶನ ಪಡೆದರು. ದೇವಸ್ಥಾನ ಮಂಡಳಿ ಜೂನ್ 29 ರಂದು ಯಾತ್ರೆ ಪ್ರಾರಂಭಿಸಿದ್ದು ಈ ದಾಖಲೆಯನ್ನು ಕೇವಲ 29 ದಿನಗಳಲ್ಲಿ ಸಾಧಿಸಲಾಗಿದೆ ಎಂದು ಘೋಷಿಸಿದೆ.
ಕಳೆದ ವರ್ಷ ಇಡೀ ಯಾತ್ರೆಯಲ್ಲಿ 4.45 ಲಕ್ಷ ಭಕ್ತರು ಅಮರನಾಥಕ್ಕೆ ಭೇಟಿ ನೀಡಿದ್ದರು. ಈ ನಡುವೆ ಶನಿವಾರ(ಜು.27) ಸುಮಾರು 8ಸಾವಿರ ಯಾತ್ರಿಕರು ಅಮರನಾಥಕ್ಕೆ ಭೇಟಿ ನೀಡಿದ್ದರು. 1,677 ಮಂದಿ ಭಕ್ತರ ಮತ್ತೊಂದು ಗುಂಪು ಜಮ್ಮುವಿನ ಭಗವತಿ ನಗರ ಯಾತ್ರಿ ನಿವಾಸದಿಂದ ಅಮರನಾಥ ಗುಹೆಯತ್ತ ಪ್ರಯಾಣ ಬೆಳೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 29 ರಂದು ಯಾತ್ರೆ ಪ್ರಾರಂಭವಾದ ನಂತರ ಇದು ಮೊದಲ ಯಾತ್ರಿಕರ ಗುಂಪಿನ ಮೊದಲ ನಿರ್ಗಮನವಾಗಿದೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಭದ್ರತಾಪಡೆಗಳ ವ್ಯಾಪಕ ಭದ್ರತಾ ವ್ಯವಸ್ಥೆಗಳಿಂದಾಗಿ ಈ ವರ್ಷದ ಯಾತ್ರೆಯು ಸುಗಮವಾಗಿ ನಡೆಯುತ್ತಿದೆ ಎಂದು ದೇವಾಲಯ ಸಮಿತಿ ಘೋಷಿಸಿದೆ. 52 ದಿನಗಳ ಯಾತ್ರೆ ಆ.29 ರಂದು ಕೊನೆಗೊಳ್ಳುತ್ತದೆ.
ಫಸ್ಟ್ ನೈಟ್ ದಿನ ಕೋಣೆಯಲ್ಲಿ ಪತ್ನಿಗಾಗಿ ಕಾಯುತ್ತಿದ್ದ ಹುಡುಗ..ಅಷ್ಟರಲ್ಲಿ ನಡೆದಿದ್ದೇ ಬೇರೆ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − three =
Remember me
