ನವದೆಹಲಿ:ರಿಲಯನ್ಸ್ ಇಂಡಸ್ಟ್ರೀಸ್ ಸಮೂಹದ ಟೆಲಿಕಾಂ ವಿಭಾಗವಾದ ರಿಲಯನ್ಸ್ ಜಿಯೋದ ಶೇಕಡಾ 9.99 ಷೇರುಗಳನ್ನು ಅಮೆರಿಕದ ಫೇಸ್​ಬುಕ್ ಸಂಸ್ಥೆ ಖರೀದಿಸಿದ ಬಳಿಕ ರಿಲಯನ್ಸ್ ಒಡೆಯ ಮುಕೇಶ್ ಅಂಬಾನಿ ಸಂಪತ್ತಿನಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿದೆ. ಚೀನಾದ ಶ್ರೀಮಂತ, ಅಲಿಬಾಬಾ ಸಂಸ್ಥೆಯ ಮುಖ್ಯಸ್ಥ ಜಾಕ್ ಮಾ ಅವರನ್ನೂ ಹಿಂದಿಕ್ಕಿ ಮುಕೇಶ್ ಅಂಬಾನಿ ಏಷ್ಯಾದ ಅಗ್ರಗಣ್ಯ ಶ್ರೀಮಂತರ ಪಟ್ಟಿಯಲ್ಲಿ ಮೊದಲನೇ ಸ್ಥಾನಕ್ಕೇರಿದ್ದಾರೆ.
ಫೇಸ್​ಬುಕ್ ಸಂಸ್ಥೆ –  43,574 ಕೋಟಿ  ರೂ.(5.7 ಬಿಲಿಯನ್ ಡಾಲರ್) ಮೊತ್ತದಲ್ಲಿ ಜಿಯೋದ ಶೇಕಡಾ 9.9ರಷ್ಟು ಷೇರುಗಳನ್ನು ಖರೀದಿಸಿದ್ದು, ಇದು ಭಾರತದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಅತೀ ದೊಡ್ಡ ವಿದೇಶಿ ನೇರ ಬಂಡವಾಳ ಹೂಡಿಕೆಯಾಗಿದೆ (ಎಫ್​ಡಿಐ). ಈ ಒಪ್ಪಂದದ ಬಳಿಕ ಮುಕೇಶ್ ಅಂಬಾನಿ ಸಂಪತ್ತಿನಲ್ಲಿ ಏರಿಕೆ ಕಂಡು ಬಂದಿದ್ದು, ಒಟ್ಟು ಸಂಪತ್ತಿನ ಮೌಲ್ಯ 3.77 ಲಕ್ಷ ಕೋಟಿ ರೂ.ಗೆ ಏರಿದೆ. ಚೀನಾದ ಜಾಕ್ ಮಾ ಅವರ ಒಟ್ಟು ಸಂಪತ್ತು 3.55 ಲಕ್ಷ ಕೋಟಿ ರೂ. ಎಂದು ಬ್ಲೂಮ್​ಗ್ ಸೂಚ್ಯಂಕ ತಿಳಿಸಿದೆ.
ವಿಶ್ವದ ಅತೀ ದೊಡ್ಡ ತೈಲ ಸಂಸ್ಕರಣಾಗಾರವನ್ನು ಹೊಂದಿರುವ ಅಂಬಾನಿ, ಬುಧವಾರಕ್ಕೂ ಮೊದಲು ಬ್ಲೂಮ್​ಗ್ನ 2020ರ ಸೂಚ್ಯಂಕದಲ್ಲಿ ಇಳಿಕೆ ದಾಖಲಿಸಿದ್ದರು. ಇದು ಏಷ್ಯಾದ ಯಾವೊಬ್ಬ ಶ್ರೀಮಂತ ಅನುಭವಿಸಿದ ಅತೀ ದೊಡ್ಡ ಸಂಪತ್ತು ಕುಸಿತವಾಗಿತ್ತು. ಜಾಕ್ ಮಾ ಕರೊನಾ ವಿರುದ್ಧ ಹೋರಾಡುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆಗೆ 10 ಕೋಟಿ ಮಾಸ್ಕ್​ಗಳು ಹಾಗೂ ಇನ್ನಿತರ ವೈದ್ಯಕೀಯ ಸರಕುಗಳ ನೆರವು ನೀಡಿದ ಬಳಿಕ ಅವರ ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್ ಮಂಗಳವಾರದ ವೇಳೆಗೆ ಸುಮಾರು 1 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದೆ.
ಫೇಸ್​ಬುಕ್ ಜತೆಗಿನ ಒಪ್ಪಂದದಿಂದಾಗಿ ರಿಲಯನ್ಸ್ ಷೇರುಗಳ ಮೌಲ್ಯ ಭಾರಿ ಏರಿಕೆ ಕಂಡಿದೆ. ಬುಧವಾರದ ವಹಿವಾಟಿನ ಮಧ್ಯದಲ್ಲಿ ರಿಲಯನ್ಸ್ ಷೇರುಗಳ ಮೌಲ್ಯ 1,375 ರೂಪಾಯಿವರೆಗೂ ಏರಿಕೆ ಕಂಡಿತ್ತು. ವಹಿವಾಟಿನ ಅಂತ್ಯಕ್ಕೆ ಶೇಕಡಾ 9.83 ಏರಿಕೆ ಕಂಡು, -ಠಿ; 1,359ಕ್ಕೆ ನಿಂತಿತ್ತು. ಬುಧವಾರ ಒಂದೇ ದಿನದ ವಹಿವಾಟಿನಿಂದ ರಿಲಯನ್ಸ್ ಇಂಡಸ್ಟ್ರೀಸ್​ನ ಮಾರುಕಟ್ಟೆ ಮೌಲ್ಯ 90 ಸಾವಿರ ಕೋಟಿ ಏರಿಕೆಯಾಗಿದೆ.
ಕೊವಿಡ್​-19ರ ನಿರ್ವಹಣೆಯಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಪ್ರಧಾನಿ ಮೋದಿಯವರ ಬಗ್ಗೆ ಗೃಹ ಸಚಿವ ಅಮಿತ್​ ಷಾ ಹೀಗೆ ಟ್ವೀಟ್ ಮಾಡಿದ್ದಾರೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 18 =
Remember me
