ಅಹಮದಾಬಾದ್​:ಪಾಟೀದಾರ್​ ಮೀಸಲು ಹೋರಾಟ ಸಮಿತಿ ಮುಖಂಡ ಹಾರ್ದಿಕ್​ ಪಟೇಲ್​ ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಈ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇಮಕ ಆದೇಶ ಹೊರಡಿಸಿದ್ದಾರೆ. ಪ್ರಸ್ತುತ ಅಮಿತ್ ಚಾವ್ಡಾ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ.
ಹಾರ್ದಿಕ್ ಪಟೇಲ್ ಕಳೆದ ವರ್ಷ ಲೋಕಸಭೆ ಚುನಾವಣೆಗೂ ಮೊದಲು ಮಾರ್ಚ್​ ತಿಂಗಳಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರು. ಬಿಜೆಪಿ ಭದ್ರಕೋಟೆ ಗುಜರಾತ್​ನಲ್ಲಿ ಪಾಟೀದಾರ್ ಮೀಸಲಾತಿ ಚಳವಳಿ ಆರಂಭಿಸಿ ದೇಶದ ಗಮನಸೆಳೆದವರು ಹಾರ್ದಿಕ್ ಪಟೇಲ್​. ಗುಜರಾತ್​ನಲ್ಲಿ ನೆಲಕಚ್ಚಿರುವ ಕಾಂಗ್ರೆಸ್​ ಪಕ್ಷವನ್ನು ಬಡಿದೆಬ್ಬಿಸಬೇಕಾದ ಸವಾಲು ಕಾರ್ಯಾಧ್ಯಕ್ಷರಾಗಿ ನೇಮವಾಗಿರುವ ಪಟೇಲ್ ಎದುರಿಗಿದೆ.
ಇದನ್ನೂ ಓದಿ:ಕಾಂಗ್ರೆಸ್​ ಸೇರಿದ ಬಳಿಕ ರಾಹುಲ್​ ಗಾಂಧಿಯನ್ನು ಹಾಡಿ ಹೊಗಳಿದ ಹಾರ್ದಿಕ್​ ಪಟೇಲ್​
2015ರಲ್ಲಿ ಭಾರಿ ಬಲಪಡೆದುಕೊಂಡಿದ್ದ ಚಳವಳಿ ಬಳಿಕ ರಾಜಕೀಯದ ಕಾರಣಕ್ಕೆ ಹಾದಿ ತಪ್ಪಿತು. ನಂತರದಲ್ಲಿ ಅದರ ಮುಂಚೂಣಿಯಲ್ಲಿದ್ದ ನಾಯಕರೆಲ್ಲ ವಿವಿಧ ರಾಜಕೀಯ ಪಕ್ಷ ಸೇರಿಕೊಂಡರು. ಹಾರ್ದಿಕ್​ ಕಾಂಗ್ರೆಸ್ ಸೇರಿಕೊಂಡು, ರಾಹುಲ್, ಸೋನಿಯಾ ಗುಣಗಾನ ಮಾಡಿ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಪ್ರಯತ್ನಿಸಿದ್ದರು. ಹಾದಿತಪ್ಪಿದ ಚಳವಳಿಯ ಸಂದರ್ಭದಲ್ಲಿ ಆದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೆ ಸಂಬಂಧಿಸಿ ಮತ್ತು ಇತರೆ ಕಾರಣಗಳಿಗೆ ಪಟೇಲ್ ವಿರುದ್ಧ ಪ್ರಕರಣಗಳು ದಾಖಲಾಗಿವೆ. (ಏಜೆನ್ಸೀಸ್​)
https://www.vijayavani.net/patidar-quota-hardik-patel-married/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 7 =
Remember me
