ಆಗ್ರಾ:ವಿಶ್ವ ಯೋಗ ದಿನಾಚರಣೆ ಅಂಗವಾಗಿ ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್​​ಮಹಲ್​ ಪ್ರವೇಶಕ್ಕೆ ಯಾವುದೇ ಶುಲ್ಕ ವಿಧಿಸಲಾಗಿಲ್ಲ. ಹೀಗೆಂದು ಪುರಾತತ್ವ ಇಲಾಖೆ ಘೋಷಿಸಿದೆ.
ಮಂಗಳವಾರ ಬೆಳಗ್ಗೆಯಿಂದ ಇಡೀ ದಿನ ತಾಜ್​ಮಹಲ್​​ ನೋಡಲು ಬರುವ ಪ್ರವಾಸಿಗರು ಯಾವುದೇ ಶುಲ್ಕ ಪಾವತಿಸುವಂತಿಲ್ಲ. ಅಲ್ಲದೇ ಪಕ್ಕದ ಐತಿಹಾಸಿಕ ಕಟ್ಟಡಗಳ ವೀಕ್ಷಣೆಗೂ ಸಂಪೂರ್ಣ ಉಚಿತ ಅವಕಾಶ ನೀಡಲಾಗಿದೆ ಎಂದು ಹೇಳಿದೆ.
ಎಎಸ್​​ಐ ಮುಖ್ಯಸ್ಥ ರಾಜ್​ಕುಮಾರ್​ ಪಟೇಲ್​ ಈ ಬಗ್ಗೆ ನೀಡಿದ್ದು, ಯೊಗ ದಿನದ ಅಂಗವಾಗಿ ಪ್ರವಾಸಿಗರಿಗೆ ಉಡುಗೊರೆಯಾಗಿ ಉಚಿತ ಪ್ರವೇಶದ ಅನುಮತಿ ನೀಡಲಾಗಿದೆ. ತಾಜ್​ಮಹಲ್​ ಜತೆಗೆ ಆಗ್ರಾ ಕೋಟೆ ಹಾಗೂ ಫತೇಪುರ್​ ಸಿಕ್ರಿ ಪ್ರವೇಶವೂ ಉಚಿತವಾಗಿದೆ ಎಂದು ತಿಳಿಸಿದ್ದಾರೆ.
ಕೇವಲ ಭಾರತೀಯರಿಗಷ್ಟೇ ಅಲ್ಲದೇ ವಿದೇಶಿ ಪ್ರವಾಸಿಗರಿಗೂ ಇದು ಅನ್ವಯವಾಗಲಿದೆ. ಇನ್ನು ಪಥೇಪುರ ಸಿಕ್ರಿಯಲ್ಲಿರುವ ಪಂಚ ಮಹಲ್​​​ನಲ್ಲಿ ನೂರಾರು ಜನರು ಯೋಗ ಮಾಡುವ ಮೂಲಕ ಯೋಗ ದಿನಾಚರಣೆ ಆಚರಿಸಿದರು.(ಏಜೆನ್ಸೀಸ್​)
ಅಂತಾರಾಷ್ಟ್ರೀಯ ಯೋಗ ದಿನ: 17 ಸಾವಿರ ಅಡಿ ಎತ್ತರ ಪ್ರದೇಶದಲ್ಲಿ ITBP ಹಿಮವೀರರ ಯೋಗ ಪ್ರದರ್ಶನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 1 =
Remember me
